ಕನ್ನಡ ವಾರ್ತೆಗಳು

ಇನ್ಸುಲೇಟರ್‌ ಹಾಗೂ ಪಿಕ್ಅಪ್ ನಡುವೆ ಭೀಕರ ಅಪಘಾತ; ಮುಂಬೈ ಮೂಲದ ಚಾಲಕ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಪಿಕ್ಅಪ್ ವಾಹನ ಹಾಗೂ ಇನ್ಸೂಲೇಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪಿಕ್ಅಪ್ ವಾಹನ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಜಾಲಾಡಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಬೊಲೆರೋ ಪಿಕ್ಅಪ್ ವಾಹನದ ಚಾಲಕನನ್ನು ಮುಂಬೈ ಮೂಲದ ದತ್ತಸಿಂಗ್ (49) ಎಂದು ಗುರುತಿಸಲಾಗಿದೆ.

Hemmadi_Accident_Driver Death (5) Hemmadi_Accident_Driver Death (9) Hemmadi_Accident_Driver Death (11) Hemmadi_Accident_Driver Death (13) Hemmadi_Accident_Driver Death (4) Hemmadi_Accident_Driver Death (3) Hemmadi_Accident_Driver Death (2) Hemmadi_Accident_Driver Death (14) Hemmadi_Accident_Driver Death (12) Hemmadi_Accident_Driver Death (17) Hemmadi_Accident_Driver Death (15) Hemmadi_Accident_Driver Death (18) Hemmadi_Accident_Driver Death (23) Hemmadi_Accident_Driver Death (22) Hemmadi_Accident_Driver Death (21) Hemmadi_Accident_Driver Death (19) Hemmadi_Accident_Driver Death (7) Hemmadi_Accident_Driver Death (16) Hemmadi_Accident_Driver Death (9) Hemmadi_Accident_Driver Death (24) Hemmadi_Accident_Driver Death (8) Hemmadi_Accident_Driver Death (20) Hemmadi_Accident_Driver Death (10) Hemmadi_Accident_Driver Death (11) Hemmadi_Accident_Driver Death (6) Hemmadi_Accident_Driver Death (1)

ಮುಂಬೈಯಿಂದ ಕೇರಳಾಕ್ಕೆ ತೆರಳುತ್ತಿದ್ದ ಬೊಲೇರೋ ಪಿಕ್ಅಪ್ ವಾಹನ ಇದಾಗಿದ್ದು ದತ್ತ ಸಿಂಗ್ ಚಾಲನೆ ಮಾಡುತ್ತಿದ್ದ. ಈ ಸಂದರ್ಭ ಕೇರಳಾದಿಂದ ನಾವುಂದದತ್ತ ಬರುತ್ತಿದ್ದ ಇನ್ಸುಲೇಟರ್ ವಾಹನಕ್ಕೆ ಮುಖಾಮುಖಿಯಾಗಿ ಢಿಕ್ಕಿಯಾಗಿದೆ. ಈ ಪರಿಣಾಮ ಪಿಕ್ಅಪ್ ವಾಹನದ ಚಾಲಕ ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿದ್ದಾನೆ. ಪಿಕ್ಅಪ್ ವಾಹನ ಹಾಗೂ ಈಚರ್ ಲಾರಿ ನಡುವೆ ನಡೆದ ಓವರ್ಟೇಕ್ ಭರದಲ್ಲಿ ಈ ಅಪಘಾತ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಪಿಕಪ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದಲ್ಲದೇ ಲಾರಿಯ ಅಡಿಯಲಿ ಸಿಲುಕಿಕೊಂಡಿತ್ತು. ಅಲ್ಲದೇ ಚಾಲಕನ ದೇಹವು ವಾಹನದೊಳಗೆ ಸಿಲುಕಿಕೊಂಡಿತ್ತು.

ಗಂಟೆಗಳ ಕಾಲ ಟ್ರಾಫಿಕ್ ಜಾಮ್:
ಘಟನೆಯ ಪರಿಣಾಮ ಹೆದ್ದಾರಿಯಲ್ಲಿ 2 ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್ ನಡುವೆ ಬೈಂದೂರು ಕಡೆಯಿಂದ ಕುಂದಾಪುರದತ್ತ ಸಾಗಿಬಂದ ಅಂಬುಲೆನ್ಸ್ ವಾಹನವೊಂದಕ್ಕೆ ದಾರಿ ಮಾಡಿಕೊಡಲು ಪೊಲೀಸರು ಮತ್ತು ಸಾರ್ವಜನಿಕರು ಪರದಾಡಿದರು. ಅಲ್ಲದೇ ಅಪಘಾತದ ತೀವ್ರತೆಗೆ ಚಾಲಕನ ಮೃತದೇಹ ಪಿಕಪ್ ವಾಹನದಡಿಯಲ್ಲಿ ಸಿಲುಕಿದ್ದು ಮೃತದೇಹ ತೆಗೆಯಲು ನೆರೆದ ಸಾರ್ವಜನಿಕರು ಬಹಳಷ್ಟು ಶ್ರಮಪಟ್ಟರು. ನೆರೆದ ಸಾರ್ವಜನಿಕರು ಘನ ವಾಹನ ಹಾಗೂ ಹಗ್ಗದ ಸಹಾಯದಿಂದ ಪಿಕಪ್ ವಾಹನವನ್ನು ಎಳೆತೆಗೆದು ಮೃತ ದೇಹವನ್ನು ಹೊರತೆಗೆಯಲಾಯಿತು.

ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್, ಸಂಚಾರಿ ಠಾಣೆ ಪಿಎಸ್ಸೈ ದೇವೇಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ವಾಹನ ಸಂಚಾರ ಸುಗಮಗೊಳಿಸಲು ಸಹಕಾರ ನೀಡಿದ್ದಾರೆ.

ಕುಂದಾಪುರ ಸಂಚಾರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment