ಕನ್ನಡ ವಾರ್ತೆಗಳು

ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ : ತಂಡದಿಂದ ಪೊಲೀಸರ ಮೇಲೆ ಹಲ್ಲೆ

Pinterest LinkedIn Tumblr

ಕಾಸರಗೋಡು, ನ.10: ಕಸ್ಟಡಿಗೊಳಗಾದ ಯುವಕನನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಕೊಲೆ ಪ್ರಕರಣ ವೊಂದರ ಆರೋಪಿಯ ನೇತೃತ್ವದ ತಂಡ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ದಾಂಧಲೆ ಗೈದ ಘಟನೆ ಸೋಮವಾರ ನಡೆದಿದ್ದು, ಎಸ್ಸೆ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಮನ್ನಿಪ್ಪಾಡಿಯ ಪ್ರಶಾಂತ್ ಮತ್ತು ಅಜಯ್ ಕುಮಾರ್ ಶೆಟ್ಟಿ ಎಂಬವರನ್ನು ಪೊಲೀಸರು ಬಂಸಿದ್ದು, ಗಣೇಶ್ ಮತ್ತು ವಿಜೇಶ್ ಎಂಬ ಆರೋಪಿ ಪರಾರಿಯಾಗಿದ್ದಾರೆ. ನಗರ ಹೊರವಲಯದ ಮೀಪು ಗಿರಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ದಾಂಧಲೆ ನಡೆಸಿದ ಮನ್ನಿಪ್ಪಾಡಿಯ ಅಜಯ್ ಕುಮಾರ್ ಶೆಟ್ಟಿ (24) ಎಂಬಾತನನ್ನು ನಗರ ಠಾಣಾ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು ಅಜಯನ

ನ್ನು ಬಿಡುಗಡೆಗೊಳಿಸುವಂತೆ ಮನ್ನಿಪ್ಪಾಡಿಯ ಪ್ರಶಾಂತ್ ನೇತೃತ್ವದ ತಂಡ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೀಠೋಪಕರಣ ಹಾಗೂ ಕಡತಗಳನ್ನು ನಾಶಗೈಯಲೆತ್ನಿಸಿತ್ತು. ಇದನ್ನು ತಡೆಯಲೆತ್ನಿಸಿದ ಎಸ್ಸೆ ಅಜಿತ್‌ಕುಮಾರ್, ಪೊಲೀಸ್ ಸಿಬ್ಬಂದಿ ಬಾಬು, ಸುರೇಶ್ ಗಾಯಗೊಂಡಿದ್ದಾರೆ.
ಬಂಸಲ್ಪಟ್ಟ ಆರೋಪಿ ಪ್ರಶಾಂತ್ ತಳಂಗರೆಯ ಆಬಿದ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ ಹಾಗೂ ಪೊಲೀಸರ ಕರ್ತ ವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Write A Comment