ಉಡುಪಿ: ಮೂಲ ನಿವಾಸಿ ಯೋಜನೆಯಡಿ ಕೊರಗ ಸಮುದಾಯದ ಆರೋಗ್ಯಕ್ಕೆ ಮೀಸಲಿಟ್ಟ ಅನುದಾನವನ್ನು ತಾಲೂಕಿನ ಮೂರು ಆರೋಗ್ಯ ಕೇಂದ್ರಗಳಿಗೆ ಸಂಚಾರಿ ವಾಹನವನ್ನು ಖರೀದಿ ಮಾಡುವ ಮೂಲಕ 2013 ರ ಕರ್ನಾಟಕ ಸರ್ಕಾರ ಜಾರಿಗೊಳಿಸಿದ ವಿಶೇಷ ಘಟಕ ಯೋಜನೆಯನ್ನು ಜಿಲ್ಲಾಡಳಿತ ಉಲ್ಲಂಘನೆಯನ್ನು ಮಾಡಿದೆ ಎಂದು ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟ-ಕೇರಳ ಅಧ್ಯಕ್ಷರಾದ ಶಶಿಕಲಾ ಅವರು ಧರಣಿಯನ್ನು ಉದ್ದೇಶಿಸಿ ಮಾತನಾಡಿದ್ದರು.
ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟ-ಕೇರಳ ಮತ್ತು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಸೋಮವಾರ ಜಿಲ್ಲಾಡಳಿತ ಕಛೇರಿಯ ಎದುರು ಹಮ್ಮಿಕೊಂಡ ನಿರಂತರ ಅಹೋರಾತ್ರಿ ಧರಣಿ ಸತ್ಯಗ್ರಹವನ್ನು ಉದ್ದೇಶಿಸಿ ಮಾತನಾಡಿದರು.
ಕೊರಗ ಸಮುದಾಯದ ಜನರು ಆರೋಗ್ಯ ಸಮಸ್ಯೆಗಳಿಗೆ ತುತ್ತಾದಾಗ ಮತ್ತು ಒಳ ರೋಗಿಗಳಾಗಿ ಖಾಸಗಿ ಆಸ್ಪತ್ರೆಗೆ ಸೇರಿದಾಗ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಐ.ಟಿ.ಡಿ.ಪಿ ಇಲಾಖೆವತಿಯಿಂದ ಜಿಲ್ಲಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಮುಂದುವರಿಸಬೇಕು ಜೊತೆಗೆ ಕೊರಗ ವಿದ್ಯಾರ್ಧಿಗಳ ಶಿಕ್ಷಣಕ್ಕಾಗಿ ಟ್ಯೂಷನ್ ವ್ಯವಸ್ಧೆ ನೀಡಬೇಕು ಮತ್ತು ಉಡುಪಿ ಜಿಲ್ಲಾ ಕೊರಗ ಮಕ್ಕಳಿಗೆ ಆಪ್ತಸಮಾಲೋಚಕರ ನೇಮಕ ಮಾಡುವುದು,ಹಾಗೂ ಆರೋಗ್ಯ ಕೇಂದ್ರಗಳಿಗೆ ಸಂಚಾರಿ ವಾಹನವನ್ನು ಖರೀದಿ ಸಂಬಂಧಿ ತಗಲಿದ ವೆಚ್ಚವನ್ನು ಪೂರ್ಣವಾಗಿ ಐ.ಟಿ.ಡಿ.ಪಿ ಇಲಾಖೆ ಖಾತೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ರಂಗ ಕೊರಗ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಸಾಬ್ರಕಟ್ಟೆಯ ಅಧ್ಯಕ್ಷರಾದ ಅಮ್ಮಣಿ, ಮೂಲ ನಿವಾಸಿ ಸಂಘದ ಭೋಜ ಕೊರಗ ಮತ್ತು ಎಲ್ಲಾ ಕೊರಗ ಸಮುದಯದ ಸದ್ಯಸರು ಉಪಸ್ಧಿದ್ದರು.
