ಉಡುಪಿ: ಸಾಲಿಗ್ರಾಮದಲ್ಲಿ ಶನಿವಾರ ಸಂಜೆ ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬ್ರಹ್ಮಾವರ ಹಾರಾಡಿ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯ ಕೇಶವ ಕುಮಾರ್(65) ಸಾವನ್ನಪ್ಪಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದ ಕೇಶವ್ ಅವರು ಪ್ರಥಮ ಬಾರಿಗೆ ಉಡುಪಿ ತಾಲೂಕು ಪಂಚಾಯತ್‌ನ್ನು ಹಾರಾಡಿ ಕ್ಷೇತ್ರದಿಂದ ಪ್ರತಿನಿಧಿಸಿದ್ದರು ಅಲ್ಲದೇ ಈ ಮೊದಲು ಹಾರಾಡಿ ಗ್ರಾಮ ಪಂಚಾಯತ್‌ನಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಕೇಶವ ಕುಮಾರ್ ಅವರು ನಿಸ್ವಾರ್ಥ ಸೇವೆಯ ಮೂಲಕ ಜನಾನುರಾಗಿದ್ದರು. ಹಲವಾರು ಸಮಾಜಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಹೆದ್ದಾರಿ ಚತುಷ್ಪಥ ಅವಾಂತರ:
ಕೋಟದಿಂದ ಆರಂಭಗೊಂಡು ಸಾಸ್ಥಾನ ಹಾಗೂ ಬ್ರಹ್ಮಾವರದವೆರೆಗೂ ಚತುಷ್ಪತ ಕಾಮಗಾರಿ ಅರೆಬರೆಯಾಗಿದ್ದು ಕೆಲವೆಡೆ ಒನ್ ವೇ ಕೆಲವೆಡೆ ಟು- ವೇ ರಸ್ತೆ ಸಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು ಇದು ವಾಹನ ಸವಾರರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದು ಇದರಿಂದಲೇ ಅವಘಡಗಳು ಸಂಭವಿಸುತ್ತಿದೆ ಎಂದು ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
