ಕನ್ನಡ ವಾರ್ತೆಗಳು

ಹರ್ಷ ವಾರದ ಅತಿಥಿ ಮಾಜಿ ಲೋಕಸಭಾ ಸದಸ್ಯ ಕೆ.ಜಯಪ್ರಕಾಶ್ ಹೆಗ್ಡೆ.

Pinterest LinkedIn Tumblr

Air_varada_athithi

ಮಂಗಳೂರು,ಅ.21: ಮಂಗಳೂರು ಆಕಾಶವಾಣಿಯ ಹರ್ಷವಾರದ ಅತಿಥಿಯ 209ನೇ ಕಾರ್ಯಕ್ರಮದಲ್ಲಿ ಅಕ್ಟೋಬರ್ 25ರಂದು ಬೆಳಿಗ್ಗೆ 8.30 ಕ್ಕೆ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಕೆ.ಜಯಪ್ರಕಾಶ್ ಹೆಗ್ಡೆ ಭಾಗವಹಿಸಲಿದ್ದಾರೆ.

ಕುಂದಾಪುರದ ಕೊರ್ಗಿಯ ಜಯಪ್ರಕಾಶ್ ಹೆಗ್ಡೆ ಶಾಸಕರಾಗಿ, ಸಚಿವರಾಗಿ ಹಾಗೂ ಲೋಕಸಭಾ ಸದಸ್ಯರಾಗಿ ರಾಜಕೀಯ ರಂಗದಲ್ಲಿ ಅಪಾರ ಅನುಭವ ಸಂಪನ್ನರು. ವಿಜಯಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನಾ ಕ್ಷೇತ್ರ ಪ್ರವೇಶಿಸಿದವರು. ಯುವಜನತಾದಳದ ಮೂಲಕ ರಾಜಕೀಯ ಪ್ರವೇಶಿಸಿ ಅ.ಭಾ.ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್‍ಯ ನಿರ್ವಹಿಸದವರು. ದಳದ ನಾಯಕನಾಗಿ ಸೇನ್‌ನ ವೆಲೆನ್ಸಿಯಾ ಯುವ ಸಮ್ಮೇಳನ, ಹಾಗೂ ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ವೇಳೆ ನಡೆದ ಯುವ ರಾಜಕೀಯ ನಾಯಕರ ಸಮ್ಮೇಳನದಲ್ಲಿ ಭಾವಹಿಸಿದ್ದರು.

1994 ರಲ್ಲಿ 10 ನೇ ವಿಧಾನಸಭೆಗೆ ಬ್ರಹ್ಮಾವರ ಕ್ಚೇತ್ರದಿಂದ ಗೆದ್ದು ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿದ್ದರು. ನಂತರ 11 ಮತ್ತು 12 ನೇ ವಿಧಾನಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ವಿಜಯಿಯಾಗಿದ್ದರು. 2002 ರ ಉಡುಪಿ ಚಿಕ್ಕ ಮಗಳೂರು ಲೋಕಸಭಾ ಉಪಚುನಾಚಣೆಯಲ್ಲಿ ಗೆಲುವು ಸಾಧಿಸಿ ಲೋಕಸಭೆ ಪ್ರವೇಶ ಮಾಡಿದ್ದರು. ಸಾಮಾಜಿಕ ಕಳಕಳಿಯೊಂದಿಗೆ ಬೆಳೆದು ಬಂದ ಹೆಗ್ಡೆಯವರು ತಮ್ಮ ಜೀವನದ ಅನುಭವಗಳನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅತಿಥಿಯಾಗಿ ಉದ್ಯಮಿಗಳಾದ ಮಣಿಪಾಲದ ಶ್ರೀ ಟಿ.ಸತೀಶ್ ಪೈ ಅವರು ಭಾಗವಹಿಸಲಿದ್ದಾರೆ.

Write A Comment