ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲದ ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರು ಬುಧವಾರ ಕಾರು – ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇನ್ನೋವ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಹಾಗೂ ಹಿಂಬದಿ ಸವಾರ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಉಚ್ಚಿಲ ನಿವಾಸಿಗಳಾದ ಮೊಹಮ್ಮದ್ ಅಲಿ (35) ಹಾಗೂ ಇಬ್ರಾಹಿಂ (65) ಎಂದು ಗುರುತಿಸಲಾಗಿದೆ.
ಮೊಹ್ಹಮದ್ ಆಲ್ ಹಾಗೂ ಇಬ್ರಾಹಿಂ ಬೈಕ್‌ನಲ್ಲಿ ತೊಕ್ಕೊಟ್ಟಿನಿಂದ ತಲಪಾಡಿ ಕಡೆ ಸಾಗುತ್ತಿದ್ದು, ತಲಪಾಡಿ ತಲುಪುವ ಮೊದಲೇ ಉಚ್ಚಿಲದ ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರು ಬರುತ್ತಿದ್ದಾಗ ಕೇರಳ ಕಡೆಯಿಂದ ಮಂಗಳೂರು ಕಡೆಗೆ ಧಾವಿಸುತ್ತಿದ್ದ ದೆಹಲಿ ನೊಂದಣಿಯ ಇನ್ನೋವ ಕಾರು ಬೈಕಿಗೆ ಮುಖಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಭೀಕರ ಅಪಘಾತದ ಪರಿಣಾಮ ಬೈಕ್ ಸವಾರರಿಬ್ಬರೂ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಾರು ಚಾಲಕನನ್ನು ಜೇಮ್ಸ್ ಜಾರ್ಜ್ ಎಂದು ಹೆಸರಿಸಲಾಗಿದ್ದು, ಉಳ್ಳಾಲ ಪೊಲೀಸರು ಕಾರಿನ ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ.
