ಕನ್ನಡ ವಾರ್ತೆಗಳು

ಅಂ.ರಾ.ಮಕ್ಕಳ ಚಲನಚಿತ್ರೋತ್ಸವ ಯಶಸ್ಸಿಗೆ 9 ಉಪ ಸಮಿತಿಗಳ ರಚನೆ.

Pinterest LinkedIn Tumblr

Dc_rai_meet_1

ಮಂಗಳೂರು,ಅ.21:  ಇದೇ ಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಿಂದ ಹೊರಗೆ ಮಂಗಳೂರಿನಲ್ಲಿ ನಂ.22 ರಿಂದ 26 ರವರೆಗೆ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಏರ್ಪಡಿಸಿದ್ದು ಈ ಸಂಬಂಧ ಚಲನಚಿತ್ರ ಯಶಸ್ಸಿಗೆ ನಗರದ ಕಲಾವಿದರು, ಸಮಾಜದ ವಿವಿಧ ರಂಗಗಳ ಗಣ್ಯರನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಿತ 9 ಉಪ ಸಮಿತಿಗಳನ್ನು ರಚಿಸಲಾಗಿದ್ದು,ಈ ಸಮಿತಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ರವರು ಸೂಚಿಸಿದ್ದಾರೆ.

ಮಂಗಳೂರು ನಗರದ 11 ಚಲನಚಿತ್ರ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ದೇಶ ಹಾಗೂ ವಿದೇಶಗಳ 150ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ, ಚಲನಚಿತ್ರಗಳ ಗುಣಮಟ್ಟದ ಬಗ್ಗೆ ವಿಚಾರ ಸಂಕೀರ್ಣ ಹಾಗೂ ಗುಂಪು ಚರ್ಚೆಗಳನ್ನು ಸಹ ಏರ್ಪಡಿಸಲಾಗಿದೆ ಎಂದು ನಿರ್ದೇಶಕ ನಂಜುಂಡೇಗೌಡ ಅವರು ತಿಳಿಸಿದ್ದಾರೆ.

ಬಿ. ರಮಾನಥ ರೈ ಅರಣ್ಯ ಪರಿಸರ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಂಘಟಣಾ ಸಮಿತಿ, ಅಪರ ಜಿಲ್ಲಾಧಿಕಾರಿ ಕುಮಾರ್ ಇವರ ಅದ್ಯಕ್ಷತೆಯಲ್ಲಿ ಚಿತ್ರಮಂದಿರ ಹಾಗೂ ಪ್ರದರ್ಶನ ಸಮಿತಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರಾದ ಹೆಚ್. ಎಂ ಹರೀಶ್ ಅವರ ಅಧ್ಯಕ್ಷತೆಯಲ್ಲಿ ಸಾರಿಗೆ ಸಮಿತಿ, ದ.ಕ ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆಯಲ್ಲಿ ಮಾಧ್ಯಮ ಪ್ರಚಾರ ಸಮಿತಿ, ಮಹಾನಗರ ಪಾಲಿಕೆ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಅಧ್ಯಕ್ಷತೆಯಲ್ಲಿ ಸ್ವಯಂ ಸೇವಕರ ಸಮಿತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ ಅನುಮಂತಪ್ಪ ರವರ ಅಧ್ಯಕ್ಷತೆಯಲ್ಲಿ ವಸತಿ ಮತ್ತು ಆಹಾರ ಸಮಿತಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರದ ಡಾ. ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ, ವೇದಿಕೆ ಹಾಗೂ ಕಾರ್ಯಕ್ರಮ ವಿನ್ಯಾಸ ಸಮಿತಿ, ದ.ಕ ಜಿಲ್ಲಾ ಪಂಚಯತ್ ಉಪಕಾರ್ಯದರ್ಶಿ ಎನ್.ಆರ್ ಉಮೇಶ್ ಅಧ್ಯಕ್ಷತೆಯಲ್ಲಿ ಶಾಲಾ ಮಕ್ಕಳ ಸಮನ್ವಯ ಸಮಿತಿ, ಎ.ಡಿ.ಬಿ ಯೋಜನೆ ಕಾರ್ಯಪಾಲಕ ಆಭಿಯಂತರರಾದ ಗೋಪಾಲ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಆರ್ಥಿಕ ಸಮಿತಿ ರಚಿಸಲಾಗಿದೆ.

Write A Comment