ಕನ್ನಡ ವಾರ್ತೆಗಳು

ವಿವಿಧೆಡೆಗಳಲ್ಲಿ ಕಳವು : ನಾಲ್ಕು ಆರೋಪಿಗಳ ಸೆರೆ – 11 ಪ್ರಕರಣಗಳಲ್ಲಿ 15 ಲಕ್ಷ ರೂ. ವೌಲ್ಯದ ಸೊತ್ತು

Pinterest LinkedIn Tumblr

Gold_chain_Thivs_1

ಮಂಗಳೂರು, ಅ. 21: ನಗರ ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ತಿಳಿಸಿದ್ದಾರೆ.

ಬಂಟ್ವಾಳದ ನಿವಾಸಿಗಳಾದ ಮುಹ ಮ್ಮದ್ ರಫೀಕ್ (26), ಆಫ್ರೀನ್ ಶಿಹಾದ್ (19), ಕೌಶಿಕ್ ನಿಹಾಲ್ (19), ಸುರತ್ಕಲ್ ನಿವಾಸಿ ಉಮರ್ ಫಾರೂಕ್ ಇರ್ಫಾನ್ (19) ಎಂಬವ ರನ್ನು ಬಂಧಿಸಲಾಗಿದೆ.
ಆರೋಪಿಗಳು ಮಹಿಳೆಯರ ಕುತ್ತಿಗೆಯಿಂದ ಸರ ಕಳವು, ಬೈಕ್ ಕಳವು, ದೇವಸ್ಥಾನಗಳಿಂದ ಬೆಲೆ ಬಾಳುವ ವಸ್ತುಗಳ ಕಳವು ಸಹಿತ ಸುಮಾರು 19 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಪೈಕಿ 11 ಪ್ರಕರಣಗಳಲ್ಲಿ ಒಟ್ಟು 15 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

Prasanth_case_moreArst1

ಕಾವೂರು, ಮಂಗಳೂರು ಪೂರ್ವ, ಮಂಗಳೂರು ದಕ್ಷಿಣ,ಮಂಗಳೂರು ಉತ್ತರ, ಮಂಗಳೂರು ಗ್ರಾಮಾಂತರ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಅವರಿಂದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Gold_chain_Thivs_2

ಬಂಧಿತ ಆರೋಪಿಗಳು ಬೈಕ್‌ಗಳಲ್ಲಿ ಆಗಮಿಸಿ ಮಹಿಳೆಯರ ಕುತ್ತಿಗೆಯಿಂದ ಸರವನ್ನು ಕಸಿದು ಪರಾರಿಯಾಗುತ್ತಿದ್ದರು. ಆರೋಪಿಗಳು ಮಹಿಳೆಯರ ಕುತ್ತಿಗೆಯಿಂದ ಸರವನ್ನು ಕಳವು ಮಾಡಲು ನಕಲಿ ನಂಬರ್ ಪ್ಲೇಟ್ ಅಳವಡಿಸದ ಬೈಕ್‌ನ್ನು ಬಳಸುತ್ತಿದ್ದರು ಎಂದು ಮುರುಗನ್ ಹೇಳಿದರು.

Write A Comment