ಅಂತರಾಷ್ಟ್ರೀಯ

ಪ್ರಧಾನಿ ಮೋದಿಯಿಂದ ಮಾತ್ರ ಹಿಂದು ಪ್ರತ್ಯೇಕತಾವಾದ ತಡೆಯಲು ಸಾಧ್ಯ: ಕಸೂರಿ

Pinterest LinkedIn Tumblr

pಇಸ್ಲಾಮಾಬಾದ್:ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಹಿಂದು ಪ್ರತ್ಯೇಕತವಾದವನ್ನು ಅಂತ್ಯಗೊಳಿಸಬಲ್ಲರು ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಹೇಳಿದ್ದಾರೆ.

ಕಳೆದ ವಾರ ಕಸೂರಿಯವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶಿವಸೇನೆ ಅಡ್ಡಿಪಡಿಸಲು ಯತ್ನಿಸಿತ್ತು. ಆದರೆ, ಸಿಎಂ ಫಡ್ನವೀಸ್ ಸರಕಾರ, ಭಾರಿ ಭದ್ರತೆ ನೀಡಿ ಪುಸ್ತಕ ಬಿಡುಗಡೆಗೆ ಸಹಕರಿಸಿತ್ತು.

ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಸರಣಿಯ ಬಗ್ಗೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್ ಅವರನ್ನು ಭೇಟಿ ಮಾಡುವ ಮುನ್ನ, ಶಿವಸೇನೆ ಕಾರ್ಯಕರ್ತರು ಬಿಸಿಸಿಐ ಕಚೇರಿಗೆ ನುಗ್ಗಿ ಪಾಕ್‌ನೊಂದಿಗಿನ ಸರಣಿಯನ್ನು ರದ್ದುಗೊಳಿಸುವಂತೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಕಸೂರಿ ಹೇಳಿಕೆ ನೀಡಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಾಕ್ ಮೂಲದ ಅಂಪೈರ್ ಅಲೀಮ್ ಧೀರ್ ಅವರಿಗೆ ಶಿವಸೇನೆ ಬೆದರಿಕೆ ಹಾಕಿದ್ದರಿಂದ, ಅವರನ್ನು ಸರಣಿಯಿಂದ ಕೈ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ತಿಂಗಳ ಆರಂಭದಲ್ಲಿ ಶಿವಸೇನೆ ಕಾರ್ಯಕರ್ತರು ಪಾಕಿಸ್ತಾನದ ಮೂಲದ ಗಾಯಕ ಗುಲಾಮ್ ಅಲಿ ಕಾರ್ಯಕ್ರಮ ರದ್ದುಗೊಳಿಸುವಂತೆ ಬೆದರಿಕೆಯೊಡ್ಡಿದ್ದರು. ಸಿಎಂ ಫಡ್ನನೀಸ್ ಸರಕಾರ ಗುಲಾಮ್ ಅಲಿ ಕಾರ್ಯಕ್ರಮಕ್ಕೆ ಭಾರಿ ಭದ್ರತೆ ನೀಡುವ ಭರವಸೆ ಕೊಟ್ಟಿತ್ತು. ಆದರೆ, ಆಯೋಜಕರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು.

Write A Comment