ಕನ್ನಡ ವಾರ್ತೆಗಳು

ಅ.26: ಅಬುದಾಬಿಯ ಉದ್ಯಮಿ ಡಾ|ಬಿ.ಆರ್.ಶೆಟ್ಟಿ, ನಿರ್ದೇಶಕ ಗಿರೀಶ ಕಾಸರವಳ್ಳಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ

Pinterest LinkedIn Tumblr

Manjayya Shetty_Award_Programme.

ಕುಂದಾಪುರ: ಕೀರ್ತಿಶೇಷ ಶ್ರೀ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಕುಂದಾಪುರದ ಆಶ್ರಯದಲ್ಲಿ ದಿನಾಂಕ 26-10-2015 ರಂದು ಮಧ್ಯಾಹ್ನ 4 ಗಂಟೆಗೆ ಯಡರೆ ಮಂಜಯ್ಯ ಶೆಟ್ಟಿ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ನಡೆಯಲಿದೆ.

ಸಮಾರಂಭವನ್ನು ಹಿರಿಯ ಉದ್ಯಮಿ ಆರ್.ಎನ್.ಶೆಟ್ಟಿ ಬೆಂಗಳೂರು ಉದ್ಘಾಟಿಸಲಿದ್ದಾರೆ. ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

Manjayya Shetty_Award_Programme

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಎ.ಜಿ.ಕೊಡ್ಗಿ, ನಿಟ್ಟೆ ವಿ.ವಿ.ಕುಲಾಧಿಪತಿ ವಿನಯ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಗೋಪಾಲ ಪೂಜಾರಿ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ನಿಟ್ಟೆ ವಿ.ವಿ. ಸಹಕುಲಾಧಿಪತಿ ಡಾ|ಶಾಂತಾರಾಮ ಶೆಟ್ಟಿ, ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೆರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮಂಗಳೂರು, ವರ್ಲ್ಡ್ ಬಂಟ್ಸ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಸಚ್ಚಿದಾನಂದ ಶೆಟ್ಟಿ ಮಂಗಳೂರು, ಕುಂದಾಪುರ ಪುರಸಭಾ ಅಧ್ಯಕ್ಷೆ ಶ್ರೀಮತಿ ಕಲಾವತಿ ಭಾಗವಹಿಸಲಿದ್ದಾರೆ.

ಪ್ರೊ.ಎಂ.ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ನೇತ್ರತಜ್ಞ ಡಾ|ವೈ.ಎಸ್.ಹೆಗ್ಡೆ, ಯು.ಟಿ.ಆಳ್ವ ಮಂಗಳೂರು, ಡಾ|ಎಂ.ಲಕ್ಷ್ಮೀನಾರಾಯಣ ಶೆಟ್ಟಿ ಮಂಗಳೂರು, ಯು.ಸೀತಾರಾಮ ಶೆಟ್ಟಿ ಉಪ್ಪುಂದ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ

ಪ್ರಶಸ್ತಿ ಪುರಸ್ಕೃತರು
ಅಬುದಾಬಿಯ ಖ್ಯಾತ ಉದ್ಯಮಿ ಡಾ|ಬಿ.ಆರ್.ಶೆಟ್ಟಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿಯವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ.

ಕುಂದಾಪುರ ತಾಲ್ಲೂಕಿನ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸಿದ ಮಾಜಿ ಶಾಸಕ ಯಡ್ತರೆ ಮಂಜಯ್ಯ ಶೆಟ್ಟಿಯವರ ಜನ್ಮ ಶತ ಮಾನೋತ್ಸವ 2013 ರಂದು ನಡೆದಿದ್ದು, ಅನಂತರ ನಿರಂತರವಾಗಿ ಅವರ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುತ್ತಿದೆ. ಕುಂದಾಪುರದ ಪ್ರಮುಖ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಹಾಸ್ಯ ಕಲಾವಿದರಿಂದ ತಾಳಮದ್ದಳೆ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಹಾಸ್ಯ ಕಲಾವಿದರ ತಾಳಮದ್ದಳೆ ಉತ್ತಮ ಕುಮಾರನ ಪೌರುಷ ಸಂಜೆ ೬ ಗಂಟೆಗೆ ನಡೆಯಲಿದೆ.
ಸೀತಾರಾಮಕುಮಾರ್ ಕಟೀಲು, ರವೀಂದ್ರ ದೇವಾಡಿಗ, ರಾಮ ಜೋಯಿಷಿ ಬೆಳಾರೆ, ಹಳ್ಳಾಡಿ ಜಯರಾಮ ಶೆಟ್ಟಿ, ಕಲಾವಿದರಾಗಿ ಭಾಗವಹಿಸಲಿದ್ದಾರೆ. ಗಿರೀಶ ರೈ ಕಟ್ಟೆಪದವು ಭಾಗವತರಾಗಿ, ಜನಾರ್ಧನ ತೋಳ್ಪಡಿತ್ತಾಯ ಮದ್ದಳೆಗಾರರಾಗಿ, ಸುಬ್ರಹ್ಮಣ್ಯ ಭಟ್, ದೇಲಂತ ಮಜಲು ಚಂಡೆವಾದಕರಾಗಿ ಪಾಲ್ಗೊಳ್ಳಲಿದ್ದಾರೆ.
ಹಾಸ್ಯ ಕಲಾವಿದರ ತಾಳಮದ್ದಳೆ ಅಪರೂಪವಾಗಿದ್ದು, ಹೊಸದಾಗಿ ಈ ಪ್ರಯೋಗ ನಡೆಸಲಾಗುತ್ತಿದೆ. ಸಮಾಜ ಬಾಂಧವರೆಲ್ಲರೂ ಈ ಸಮಾರಂಭದಲ್ಲಿ ಭಾಗವಹಿಸಬೇಕೆಂದು ವಿನಂತಿಸಲಾಗಿದೆ.

ಬಿ.ಜಗನ್ನಾಥ ಶೆಟ್ಟಿ ಅಧ್ಯಕ್ಷ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ , ಬಿ.ಅಪ್ಪಣ್ಣ ಹೆಗ್ಡೆ, ಯು ಸೀತಾರಾಮಶೆಟ್ಟಿ ಅಶೋಕ್ ಕುಮಾರ್ ಶೆಟ್ಟಿ, ವೈ. ಗೌತಮ್ ಹೆಗ್ಡೆ, ಆವರ್ಸೆ ಸುಧಾಕರ ಶೆಟ್ಟಿ, ಸದಾಶಿವ ಶೆಟ್ಟಿ, ಯು.ಎಸ್.ಶೆಣೈ, ಡಾ|ಸುಬೋದ್ ಕುಮಾರ್ ಮಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Write A Comment