ಮಂಗಳೂರು, ಅ.18: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶನಿವಾರ ನಗರದ ಕೊಡಿಯಾಲ್ ಬೈಲಿನಲ್ಲಿರುವ ಬಿಷಪ್ ಹೌಸಿಗೆ ಭೇಟಿ ನೀಡಿದರು. ಪ್ರಕೃತಿ ಸಂರಕ್ಷಣೆಯ ಬಗ್ಗೆ ಕೈಸ್ತರು ಹೊಂದಿರುವ ವಿಶೇಷ ಕಾಳಜಿ ಮತ್ತು ಸ್ಫೂರ್ತಿಯ ಬಗ್ಗೆ ನಳಿನ್ ಕುಮಾರ್ ಮೆಚ್ಚುಗೆ ವ್ಯಕ್ತ ಪಡಿಸಿದರು.
ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಹಾಗೂ ಸಂಸದರಾದ ನಳಿನ್ ಕುಮಾರ್ ದ.ಕ.ಜಿಲ್ಲೆಯಲ್ಲಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ಫಾ.ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಪ್ಯಾಟ್ರಿಕ್ ರೊಡ್ರಿಗಸ್, ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ಜೋಸೆಫ್ ಲೋಬೊ, ಜಾನ್ ವಾಸ್, ವಲೇರಿಯನ್ ಡಿಸೋಜ, ವಲೇರಿಯನ್ ಫೆರ್ನಾಂಡಿಸ್, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ರಂಗನಾಥ್ ಕಿಣಿ, ಮಾರ್ಸಲ್ ಮೊಂತೇರೊ ಮುಂತಾದವರು ಉಪಸ್ಥಿತರಿದ್ದರು.
