ಕನ್ನಡ ವಾರ್ತೆಗಳು

ಬ್ಯಾರಿ ಅಕಾಡಮಿಯ ಕಾರ್ಯ ಶ್ಲಾಘನೀಯ: ಬ್ಯಾರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ, ಬಿ.ಎ. ಮೊಯ್ದಿನ್

Pinterest LinkedIn Tumblr

Beary_Mahila_sahitya_1

ಸುರತ್ಕಲ್, ಅ.18: ಬ್ಯಾರಿ ಜನಾಂಗವು ಸ್ವಾಭಿಮಾನಿ ಮತ್ತು ಮತೀಯ ಸೌಹಾರ್ದಕ್ಕೆ ಒತ್ತು ನೀಡುವಲ್ಲಿ ಮುಂಚೂಣಿಯಲ್ಲಿದೆ. ‘ಬ್ಯಾರಿ’ ಎನ್ನಲು ಜನರ ಮನದಲ್ಲಿದ್ದ ಸಂಕೋಚ ವನ್ನು ದೂರವಾಗಿಸುವಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಪಾತ್ರ ಶ್ಲಾಘನೀಯ ಎಂದು ಮಾಜಿ ಸಚಿವ ಬಿ.ಎ. ಮೊಯ್ದಿನ್ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಬ್ಯಾರಿ ಭಾಷಾ ಮಾಸಾ ಚರಣೆಯ ಪ್ರಯುಕ್ತ ಶನಿವಾರ ಕೃಷ್ಣಾಪುರದಲ್ಲಿ ಹಮ್ಮಿಕೊಂಡ ‘ಬ್ಯಾರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಮೊಯ್ದಿನ್ ಬಾವಾ ವಹಿಸಿ ದ್ದರು. ಬ್ಯಾರಿ ಮಾಸಾಚರಣೆಯ ಮಹತ್ವದ ಕುರಿತು ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಮಾತನಾಡಿದರು.

Beary_Mahila_sahitya_2 Beary_Mahila_sahitya_3 Beary_Mahila_sahitya_4 Beary_Mahila_sahitya_5 Beary_Mahila_sahitya_6 Beary_Mahila_sahitya_7 Beary_Mahila_sahitya_8 Beary_Mahila_sahitya_9 Beary_Mahila_sahitya_10 Beary_Mahila_sahitya_11 Beary_Mahila_sahitya_12 Beary_Mahila_sahitya_13 Beary_Mahila_sahitya_14 Beary_Mahila_sahitya_15 Beary_Mahila_sahitya_16 Beary_Mahila_sahitya_17 Beary_Mahila_sahitya_18 Beary_Mahila_sahitya_19 Beary_Mahila_sahitya_20

ರಾಜ್ಯ ಅಲ್ಪಸಂಖ್ಯಾತರ ಅಭಿ ವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ಬಿ. ಅಬೂಬಕರ್, ಮುಡಾ ಆಯುಕ್ತ ಮುಹಮ್ಮದ್ ನಝೀರ್, ಮಂಗ ಳೂರು ವಿ.ವಿ. ಸೆನೆಟ್ ಸದಸ್ಯ ರಿಯಾಝ್ ಹುಸೇನ್ ಬಂಟ್ವಾಳ, ನೂರುಲ್ ಹುದಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಪಿ.ಎ. ಇಲ್ಯಾಸ್, ಅನುಪಮ ಮಾಸಿಕದ ಸಂಪಾದಕಿ ಶಹನಾಝ್ ಎಂ, ಅಖಿಲ ಭಾರತ ಬ್ಯಾರಿ ಪರಿಷತ್‌ನ ಸ್ಥಾಪಕಾಧ್ಯಕ್ಷ ಜೆ.ಹುಸೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸದಸ್ಯರಾದ ಅಲಿಯಬ್ಬ ಜೋಕಟ್ಟೆ, ಝಕರಿಯಾ ಕಲ್ಲಡ್ಕ, ಲೇಖಕ ಅಬ್ದುಲ್ ಅಝೀಝ್ ಹಕ್ ಉಪಸ್ಥಿತರಿದ್ದರು.

ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿ ದರು. ಸದಸ್ಯರಾದ ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು. ಮುಹಮ್ಮದ್ ಶರೀಫ್ ನಿರ್ಮುಂಜೆ ಧ್ಯೇಯಗೀತೆ ಹಾಡಿದರು. ಝುಹರಾ ಅಬ್ಬಾಸ್ ವಂದಿಸಿದರು.
ಸನ್ಮಾನ: ಬ್ಯಾರಿ ಮಹಿಳಾ ಸಾಧಕಿರಾದ ಯರಾದ ಮರಿಯಮ್ ಇಸ್ಮಾಯೀಲ್ (ಸಾಹಿತ್ಯ), ಮರಿಯಮ್ಮ ಕೃಷ್ಣಾಪುರ (ಪ್ರಸೂತಿ ತಜ್ಞೆ), ಖತೀಜಮ್ಮ (ನಾಟಿ ವೈದ್ಯೆ)ಅವರನ್ನು ಸನ್ಮಾನಿಸಲಾಯಿತು.

ಕೃತಿ ಬಿಡುಗಡೆ:

ಮರಿಯಮ್ ಇಸ್ಮಾಯೀಲ್‌ರ ನಾಟಕ ಕೃತಿ ‘ಕುರಾಸೆ’ ಯನ್ನು ಮಾಜಿ ಮೇಯರ್ ಗುಲ್ಝಾರ್ ಬಾನು ಬಿಡುಗಡೆಗೊಳಿಸಿದರು.

Write A Comment