ಕನ್ನಡ ವಾರ್ತೆಗಳು

ಕಾವೂರು ಕೊಲೆ ಪ್ರಕರಣ : ಮೂವರು ಆರೋಪಿಗಳ ಸೆರೆ.

Pinterest LinkedIn Tumblr

murdered_at_Kavoor_1

ಮಂಗಳೂರು,ಅ.12: ಕಾವೂರು ಅಂಬಿಕಾನಗರದಲ್ಲಿ ಅ. 7 ರಂದು ರಾತ್ರಿ ಭೂವಿವಾದಕ್ಕೆ ಸಂಭಂದಿಸಿದಂತೆ ಮಹಮದ್‌ (55) ಅವರನ್ನು ಕೊಲೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ನಾಸಿರ್‌ (31), ಇಮ್ರಾನ್‌ (23) ಮತ್ತು ಕಲಂದರ್‌ ಶಾಫಿ (23) ಎಂದು ಹೆಸರಿಸಲಾಗಿದೆ. ಕೃತ್ಯ ಎಸಗಿದ ಬಳಿಕ ಕಳೆದ 4 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಅ. 11 ರಂದು ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅ. 7 ರಂದು ರಾತ್ರಿ 8 ಗಂಟೆಯ ವೇಳೆಗೆ ಕಾವೂರು ಮುರ ಅಂಬಿಕಾನಗರದ ನಿವಾಸಿ. ವೃತ್ತಿಯಲ್ಲಿ ಗುಜರಿ ವ್ಯಾಪಾರಿಯಾಗಿದ್ದ ಮಹಮದ್‌ ಅವರು ಸಮೀಪದ ಇಕ್ಬಾಲ್‌ ಅವರ ಮನೆಗೆ ಹೋಗಿದ್ದು, ಅಲ್ಲಿಂದ ವಾಪಸಾಗುವಾಗ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಆಸ್ತಿ ವಿವಾದ ಹಾಗೂ ಹಳೆ ದ್ವೇಷ ಇದಕ್ಕೆ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ.

ಬಂಧಿತ ಮೂವರೂ ಆರೋಪಿಗಳು ಕುಂಜತ್ತಬೈಲ್‌ ನಿವಾಸಿಗಳಾಗಿದ್ದಾರೆ. ಆರೋಪಿಗಳನ್ನು ರವಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆ. 27 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕಾವೂರು ಪೊಲೀಸರು ತಿಳಿಸಿದ್ದಾರೆ.

ಆಸ್ತಿ ವಿವಾದ / ಹಳೆ ದ್ವೇಷ :

ಮಹಮ್ಮದ್‍ರ ನೆರೆಕರೆಯಲ್ಲಿಯೇ ಅವರ ಸಂಬಂಧಿಕರು ವಾಸವಾಗಿದ್ದಾರೆ. ಅವರ ಮತ್ತು ಮಹಮ್ಮದ್‍ರ ನಡುವೆ ಆಸ್ತಿ ವಿವಾದವಿದ್ದು, ಹಲವಾರು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಹಳೆ ದ್ವೇಷದಿಂದ ಆಗಾಗ್ಗೆ ಅವರ ನಡುವೆ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ.

ಅ. 7 ರಂದು ರಾತ್ರಿಯೂ ಇದೇ ವಿಷಯದಲ್ಲಿ ಮಹಮ್ಮದ್ ಮತ್ತು ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, ಈ ಸಂಧರ್ಭ ಅವರನ್ನು ಚೂರಿಯಿಂದ ನಾಲ್ಕೆದು ಬಾರಿ ಇರಿಯಲಾಗಿತ್ತು. ತೀವ್ರವಾಗಿ ಗಾಯಗೊಂಡ ಮಹಮ್ಮದ್ ರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಾವೂರು ಠಾಣಾ ಪೊಲೀಸರು ಕೇವಲ ನಾಲ್ಕು ದಿನಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment