ಕುಂದಾಪುರ: ಅನ್ಯಕೋಮಿನ ಯುವಕನ ಮೇಲೆ ಅದೇ ಊರಿನ ಇಬ್ಬರು ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕುಂದಾಪುರದ ಕೋಡಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಕೋಡಿ ನಿವಾಸಿ ಸಾಜಿದ್ (23) ಎಂಬಾತನೇ ಹಲ್ಲೆಗೊಳಗಾದ ಯುವಕನಾಗಿದ್ದು ದೀಪಕ್ ಹಾಗೂ ಕಾರ್ತಿಕ್ ಎಂಬ ಯುವಕರಿಬ್ಬರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಕೋಡಿ ನಿವಾಸಿ ಸಾಜಿದ್ ಮನೆ ಸಮೀಪದ ಅಂಗಡಿಗೆ ಬಿಸ್ಲೇರಿ ನೀರು ತರಲು ತೆರಳಿದ್ದು ಈ ಸಂದರ್ಭ ದೀಪಕ್ ಹಾಗೂ ಕಾರ್ತಿಕ್ ಎನ್ನುವ ಯುವಕರಿಬ್ಬರು ಸಾಜಿದ್‌ನನ್ನು ತಡೆದು ನಿಲ್ಲಿಸಿ ಅವ್ಯಾಚವಾಗಿ ನಿಂಧಿಸಿದ್ದಲ್ಲದೇ ಹಲ್ಲೆಗೆ ಮುಂದಾಗಿದ್ದಾರೆ. ಸಾಜೀದ್ ಅವರ ತಲೆಗೆ ರಾಡ್‌ನಿಂದ ಹೊಡೆದದ್ದಲ್ಲದೇ ಕಲ್ಲಿನಿಂದ ಸಾಜಿದ್‌ಗೆ ಮಾರಣಾಂತಿಕವಾಗಿ ಹೊಡೆದಿದ್ದಾರೆ. ಕೂಡಲೇ ಸಾಜೀದ್ ಸ್ನೇಹಿತರು ಆಗಮಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೂ ಸುದ್ದಿ ಮುಟ್ಟಿಸಿದ್ದಾರೆ. ಸದ್ಯ ಹಲ್ಲೆಗೊಳಗಾದ ಸಾಜಿದ್ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ನಡೆದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸ್ರು ಸಾಜೀದ್ ಹೇಳಿಕೆ ಪಡೆದು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.


