ಕನ್ನಡ ವಾರ್ತೆಗಳು

ಬಿಲ್ಡರ್ ಹತ್ಯೆ ಯತ್ನ ಪ್ರಕರಣ : ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳ ಸೆರೆ

Pinterest LinkedIn Tumblr

Builder_3accsed_arest_1

ಮಂಗಳೂರು: ನಗರದ ಬಿಲ್ಡರ್ ಒಬ್ಬರ ಹತ್ಯೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಸೆ. 21 ರಂದು ಪ್ಯಾರಗಾನ್‌ ಬಿಲ್ಡರ್‌ ಆ್ಯಂಡ್‌ ಪ್ರಮೋಟರ್ನ ಮಾಲಕ ಪ್ರಕಾಶ್‌ ಪಿಂಟೊ ಅವರನ್ನು ಎಂ.ಜಿ ರೋಡ್‌ನ‌ ಬೆಸೆಂಟ್ ಸಮೀಪ ಇಬ್ರೋಸ್‌ ಕಾಂಪ್ಲೆಕ್ಸ್‌ನಲ್ಲಿರುವ ಅವರ ಕಚೇರಿ ಬಳಿ ಕೊಲೆ ಮಾಡಲು ಪ್ರಯತ್ನಿಸಿದಾಗ ಜನ ಸೇರಿದನ್ನು ಕಂಡು ಪರಾರಿಯಾಗಿದ್ದರು.

ಬಂಧಿತರನ್ನು ಫೈಝಲ್‌ ನಗರದ ಬಜಾಲ್‌ ನಂತೂರು ಶಾಲೆ ಬಳಿಯ ಸಿದ್ದಿಕ್‌ ಯಾನೆ ಅಬೂಬಕರ್‌ ಸಿದ್ದಿಕ್‌ (28), ಮೂಲತ: ಉಳ್ಳಾಲ ಹಳೆಕೋಟೆಯವನಾಗಿದ್ದು, ಪ್ರಸ್ತುತ ಬಜಾಲ್‌ ನಂತೂರಿನಲ್ಲಿ ವಾಸ್ತವ್ಯವಿರುವ ಉಮ್ಮರ್‌ ಫಾರೂಕ್‌ ಯಾನೆ ಎವರೆಸ್ಟ್‌ ಫಾರೂಕ್‌( 30) ಮತ್ತು ಉಳ್ಳಾಲ ಧರ್ಮನಗರದ ಅಲ್ತಾಫ್‌ ಯಾನೆ ಬೊಟ್ಟು ಅಲ್ತಾಫ್‌ (28) ಎಂದು ಗುರುತಿಸಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿ ರಾಜು ಯಾನೆ ಜಪಾನ್‌ ಮಂಗನನ್ನು ಘಟನೆ ನಡೆದ ದಿನವೇ ಬಂಧಿಸಲಾಗಿದ್ದು, ಈ ಮೂವರ ಬಂಧನೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 4 ಕ್ಕೇರಿದೆ

ದಿನಾಂಕ: 21-09-2015ರಂದು ಪ್ರಕಾಶ್‌ ಪಿಂಟೋ ಅವರು ತಮ್ಮ ಕಾರಿನಲ್ಲಿ ಬಂದು ಕಚೇರಿ ಬಳಿ ಇಳಿದು ಕಚೇರಿಗೆ ಹೋಗುತ್ತಿದ್ದ ವೇಳೆ 4-5 ಮಂದಿ ಯುವಕರು ತಲವಾರಿನೊಂದಿಗೆ ಅವರನ್ನು ಹಿಂಬಾಲಿಸಿ ಕೊಲೆಗೆ ಯತ್ನಿಸಿದ್ದರು ಈ ಸಮಯ ಸ್ಥಳದಲ್ಲಿ ಜನರು ಸೇರಿರುವುದನ್ನು ಕಂಡು ವಾಪಾಸು ಅವರು ಬಂದ ಚೆರ್ವಲೆಟ್ ಬೀಟ್ ಕಾರಿನಲ್ಲಿ ಓಡಿ ಹೋಗಿ ಕುಳಿತು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕಾಶ್‌ ಪಿಂಟೋ ಅವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದರು.

ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು ಉಪಯೋಗಿಸಿದ ಶೆವರ್ಲೆಟ್‌ ಕಾರಿನ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಅದೇ ದಿನ ಮಂಗಳೂರು ಚಿಲಿಂಬಿ ಬಳಿಯಿಂದ ಕಾರನ್ನು ಪತ್ತೆ ಹಚ್ಚಿ ಕಾರಿನಲ್ಲಿದ್ದವರ ಪೈಕಿ ಆರೋಪಿ ರಾಜು @ ಜಪಾನ್ ಮಂಗ ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು 2 ತಲವಾರುಗಳನ್ನು ವಶಪಡಿಸಿಕೊಂಡಿದ್ದರು. ನಂತರ ಈ ಕೃತ್ಯದಲ್ಲಿ ಭಾಗಿಯಾದ ಇತರ ಆರೋಪಿಗಳ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಇದೀಗ ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ಯಾರಗಾನ್‌ ಬಿಲ್ಡರ್ಸ್ ನ ಮಾಲಕ ಪ್ರಕಾಶ್‌ ಪಿಂಟೋ ಅವರು ರಿಯಲ್‌ ಎಸ್ಟೇಟ್‌ ಉದ್ಯಮವನ್ನು ನಡೆಸುತ್ತಿದ್ದು, ಅವರಿಗೂ ಮೂಡಬಿದ್ರೆಯ ವ್ಯಕ್ತಿಯೊಬ್ಬರಿಗೂ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕಾಶ್‌ ಪಿಂಟೋ ಅವರನ್ನು ಕೊಲೆ ಮಾಡಲು ರಾಜು ಯಾನೆ ಜಪಾನ್‌ ಮಂಗ ಎಂಬಾತನಿಗೆ ಮೂಡಬಿದ್ರೆಯ ವ್ಯಕಿ ¤ಸುಪಾರಿ ನೀಡಿದ್ದು, ಆತನೊಂದಿಗೆ ಸೇರಿ ಆರೋಪಿಗಳು ಈ ಕೊಲೆ ಯತ್ನ ನಡೆಸಿದ್ದರು.

ಆರೋಪಿ ಸಿದ್ದಿಕ್‌ 2 ತಿಂಗಳ ಹಿಂದೆ ಕಾಸರಗೋಡಿನ ಕುಂಬಳೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದನು. ಆರೋಪಿ ಉಮ್ಮರ್‌ ಫಾರೂಕ್‌ ಯಾನೆ ಎವರೆಸ್ಟ್‌ ಫಾರೂಕ್‌ ಈ ಹಿಂದೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2001 ರಲ್ಲಿ ಸಕಿನಾ ಎಂಬ ಮಹಿಳೆಯ ಕೊಲೆ ಪ್ರಕರಣ, 3 ದರೋಡೆ ಪ್ರಕರಣ ಹಾಗೂ ಒಂದು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದನು. ಆತನು ಈ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಇನ್ನೋರ್ವ ಆರೋಪಿ ಅಲ್ತಾಫ್‌ ಈ ಹಿಂದೆ 5 ಕೊಲೆಯತ್ನ, 3 ದರೋಡೆ, ಹಾಗೂ ಕೋಮುಗಲಭೆ ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಆತ ಕೂಡಾ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದನು.

ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಶ್ರೀ.-ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Write A Comment