ಕನ್ನಡ ವಾರ್ತೆಗಳು

ಎಜ್ಯುಕೇಶನ್ ವರ್ಲ್ಡ್ ಅವಾರ್ಡ್ ಸಂಸ್ಥೆಯ ವಾರ್ಷಿಕ ಪುರಸ್ಕಾರ ಪ್ರದಾನ : ರಾಯನ್’ಸ್ ಶಿಕ್ಷಣ ಸಂಸ್ಥೆಗಳಿಗೆ ಪುರಸ್ಕಾರಗಳ ಸರಮಾಳೆ

Pinterest LinkedIn Tumblr

Education_World_Awards

ಮುಂಬಯಿ, ಸೆ.29: ಎಜ್ಯುಕೇಶನ್ ವರ್ಲ್ಡ್ ಅವಾರ್ಡ್ ಸಂಸ್ಥೆಯು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಇತರ ಅನೇಕ ಚಟುವಟಿಕೆಗಳಿಗಾಗಿ ಸರ್ವೋತ್ಕೃಷ್ಟ ಶಿಕ್ಷಣ ಸಂಸ್ಥೆಯನ್ನಾಗಿಸಿ ಹಲವಾರು ಪುರಸ್ಕಾರಗಳ ಸರಮಾಳೆಗಳನ್ನಿತ್ತು ಅಭಿನಂದಿಸಿದೆ.

ಕಳೆದ ಶನಿವಾರ ನವ ದೆಹಲಿಯ ಖಾಸಾಗಿ ಹೊಟೇಲುವೊಂದರಲ್ಲಿ ಎಜ್ಯುಕೇಶನ್ ವರ್ಲ್ಡ್ ಅವಾರ್ಡ್ ಸಂಸ್ಥೆಯು ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಬಯಿ ಅಂಧೇರಿ ಪಶ್ಚಿಮದಲ್ಲಿನ ರಾಯನ್ ಗ್ಲೋಬಲ್ ಶಾಲೆಗೆ ರಾಷ್ಟ್ರದ ಹತ್ತು ಶಾಲೆಗಳ ಪಯ್ಕಿ ಸರ್ವೋತ್ಕೃಷ್ಟ ಶಾಲೆಯಾಗಿ ಗುರುತಿಸಿದೆ. ಅಂತೆಯೇ ರಾಯನ್’ಸ್ ಸಂಸ್ಥೆಗಳ ಶಾಲೆಗಳಿಗೆ ವಿವಿಧ ಸಾಧನೆಗಳ ಅನನ್ಯ ಸೇವೆಗೆ ಪುರಸ್ಕಾರಗಳನ್ನಿತ್ತು ಗೌರವಿಸಿತು. ಭಾರತ ರಾಷ್ಟ್ರದಲ್ಲಿನ ವಿವಿಧ ರಾಜ್ಯಗಳಲ್ಲಿನ ರಾಯನ್’ಸ್ ಸಂಸ್ಥೆಯ ನಾನಾ ಶಾಲೆಗಳಿಗೂ ಉತ್ತಮ ಪ್ರಶಸ್ತಿ ಪ್ರಾಪ್ತಿಸಿದಲ್ಲದೆ 47 ರಾಯನ್ ಸಂಸ್ಥೆಗಳು ಗುಣಮಟ್ಟದ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಕ್ರೀಡೆ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಸರ್ವೋತ್ಕೃಷ್ಟ ಶಾಲಾ ಪಟ್ಟಿಗೂ ಸೇರ್ಪಡೆ ಗೊಳಿಸಿ ಪ್ರಶಂಸಿದೆ. ಸಮಾರಂಭದಲ್ಲಿ ರಾಯನ್ ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್‌ನ ಪ್ರಧಾನ ಕಾರ್ಯನಿರ್ವಹಕ ಅಧಿಕಾರಿ ರಾಯನ್ ಎ.ಪಿಂಟೋ ಮತ್ತು ನಿರ್ದೇಶಕಿ ಸ್ನೇಹಲ್ ಪಿಂಟೋ ಉಪಸ್ಥಿತರಿದ್ದು ಪ್ರಶಸ್ತಿಗಳನ್ನು ಸ್ವೀಕರಿಸಿದರು.

ರಾಯನ್ ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್‌ನ ಕಾರ್ಯಾಧ್ಯಕ್ಷ ಡಾ| ಆಗಸ್ಟಿನ್ ಎಫ್. ಪಿಂಟೋ ಮತ್ತು ಪ್ರವರ್ತಕಿ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೊ ಅವರು ನಮ್ಮ ಸಂಸ್ಥೆಯ 47 ಶಾಲೆಗಳು ಉತ್ತಮ ಗುಣಮಟ್ಟದ ಶಾಲೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಅತೀವ ಸಂತೋಷದ ವಿಷಯ. ಮೊದಲಿಗೆ ನಾನು ದೇವರಿಗೆ ಧನ್ಯವಾದಗೈಯುತ್ತೇನೆ. ರಾಯನ್ ಸ್ಕೂಲ್‌ನ ಎಲ್ಲಾ ಕಾರ್ಯನಿರತ ಶಿಕ್ಷಕ ವೃಂದಕ್ಕೆ ನಾನು ಅಭಿವಂದಿಸುತ್ತೇನೆ. ಅವರು ವಿದ್ಯಾರ್ಥಿಗಳಿಗೆ ನೀಡುವ ಸ್ಪೂರ್ತಿ, ಆಸಕ್ತಿ, ಮೂಲಭೂತ ಸೌಕರ್ಯ, ಆರ್ಥಿಕ ಮೌಲ್ಯ ಮತ್ತು ಉತ್ತಮ ವಿದ್ಯಾಭ್ಯಾಸ ನೀಡಿ ಪ್ರೋತ್ಸಹಿಸುವ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ. ಭವಿಷ್ಯತ್ತಿನುದ್ದಕ್ಕೂ ವಿದ್ಯಾರ್ಥಿಗಳಿಗೆ ದೇಶ ವಿದೇಶಗಳಲ್ಲಿ ಅತ್ಯುತ್ತಮ ಭವಿಷ್ಯ ನೀಡುವ ಮೌಲಿಕ ಶೈಕ್ಷಣಿಕ ನೀಡುವುದಾಗಿ ಭರವಸೆಯನ್ನೀಡುತ್ತೇವೆ ಎಂದು ನುಡಿದರು.

Write A Comment