ಕನ್ನಡ ವಾರ್ತೆಗಳು

ರೇಸಿಂಗ್‌ ಬೈಕ್ ಖ್ಯಾತಿಯ ಕೆಟಿ‌ಎಂನಿಂದ ಆರೇಂಜ್ ಡೇ ಕಾರ್ಯಕ್ರಮ : ಮೈನವಿರೇಳಿಸಿದ ಪ್ರದರ್ಶನ

Pinterest LinkedIn Tumblr

KTM_Race_photo_1

ಮಂಗಳೂರು: ಸೆ.28: ಯುರೋಪಿಯನ್ ರೇಸಿಂಗ್‌ನ ದಂತಕತೆ ಆಗಿರುವ ಕೆಟಿ‌ಎಂ ಕಂಪನಿಯೂ ತನ್ನ ಬೈಕ್ ಪ್ರೀಯ ಗ್ರಾಹಕರಿಗಾಗಿ ಬಾನುವಾರ ಸಂಜೆ ಮಂಗಳೂರಿನಲ್ಲಿ ಆರೇಂಜ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ತಮ್ಮ ಕೋರ್ ರೇಸಿಂಗ್ ಸ್ಪರ್ಧೆಯ ಅನುಕೂಲತೆಗೆ ತಕ್ಕಂತೆ ದ್ವಿಚಕ್ರವಾಹನವನ್ನು ವಿನ್ಯಾಸಗೊಳಿಸಲಾಗಿರುವುದನ್ನು ಬಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.

ಕೆಟಿ‌ಎಂ ವತಿಯಿಂದ ಮಂಗಳೂರಿನ ಮಿಲಾಗ್ರೀಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಆರೇಂಜ್ ಡೇ ಕಾರ್ಯಕ್ರಮಕ್ಕೆ ಅನೇಕ ಮಂದಿ ಬೈಕ್ ಸವಾರರು ಬಂದು ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಂಡಿದ್ದಾರೆ. ಇವರಿಗೆ ನುರಿತ ತಜ್ಞರು ಕೆಟಿ‌ಎಂ ಬೈಕ್‌ನ ಮಹತ್ವವನ್ನು ಪ್ರದರ್ಶಿಸಿ, ವಿವರಿಸಿದರು. 200ಕ್ಕೂ ಅಧಿಕ ಡ್ಯೂಕ್ ಗ್ರಾಹಕರು, ಆರ್‌ಸಿ ಬೈಕ್ 200 ಗ್ರಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

KTM_Race_photo_2 KTM_Race_photo_3 KTM_Race_photo_4 KTM_Race_photo_5 KTM_Race_photo_6 KTM_Race_photo_7 KTM_Race_photo_8 KTM_Race_photo_9 KTM_Race_photo_10 KTM_Race_photo_11 KTM_Race_photo_12

ಈ ಸಂದರ್ಭದಲ್ಲಿ ಕೆಟಿ‌ಎಂ ಭಾರತದ ಮುಖ್ಯಸ್ಥ ಅಮಿತ ನಂದಿ ಅವರು ಮಾತನಾಡಿ, ಕೆಟಿ‌ಎಂ ಬ್ರ್ಯಾಂಡ್ ಬೈಕ್ ತನ್ನದೇ ಆದ ವಿಶಿಷ್ಟ ಗುಣ ಲಕ್ಷಣಗಳಿಂದಾಗಿ ಬೈಕ್ ಸವಾರರ ಮನಗೆದ್ದಿದೆ. ಕೆಟಿ‌ಎಂ ಬೈಕ್ ಖರೀದಿಸಿರುವ ಗ್ರಾಹಕರು ರೇಸ್‌ನಲ್ಲಿ ಸಾಕಷ್ಟು ರೋಮಾಂಚನವನ್ನು ಅನುಭವಿಸಿದ್ದಾರೆ. ಇಂತಹ ಪ್ರಮುಖ ಕಾರ್ಯಕ್ರಮಗಳನ್ನು ರಾಜ್ಯದ ಪ್ರತಿ ನಗರಗಳಲ್ಲಿಯೂ ಆಯೋಜಿಸಲು ಉದ್ದೇಶೀಸಲಾಗಿದೆ ಎಂದರು.

ಇಂದಿನ ಮಂಗಳೂರಿನ ಕಾರ್ಯಕ್ರಮ ಅತ್ಯಂತ ಯಶಸ್ಸುಗೊಂಡಿದ್ದು, ಗ್ರಾಹಕರಿಗೆ ಆರ್‌ಸಿ‌ಎಸ್‌ನ ಶಕ್ತಿಯುತ ಪ್ರದರ್ಶನ ಮತ್ತು ರೇಸ್ ಪಥದಲ್ಲಿ ಸಂವಹನ ನಡೆಸಲು ಅವಕಾಶ ಕಲ್ಪಿಸಿತ್ತು ಎಂದರು. ಭಾರತದ ಅಹ್ಮದಾಬಾದ್, ದೆಹಲಿ, ಪುಣೆ,ಕೋಲ್ಕತಾ, ಬೆಂಗಳೂರು, ಚೆನ್ನೈ, ಮುಂಬೈ, ಕೊಚ್ಚಿ, ಇನ್ನೂ ಅನೇಕ ಕಡೆಗಳಲ್ಲಿ ಕೂಡ ಆರೇಂಜ್ ಡೇ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಅಮಿತ ನಂದಿ ಮಾಹಿತಿ ನೀಡಿದರು.

ಸತತ 14 ಪ್ರತಿಷ್ಠಿತ ಡಾಕರ್ ರ್‍ಯಾಲಿ ಪ್ರಶಸ್ತಿಗಳನ್ನು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೆಚ್ಚು 250ಕ್ಕೂ ಹೆಚ್ಚು ವಿಶ್ವಚಾಂಪಿಯನ್‌ಶಿಪ್ ಪ್ರಶಸ್ತಿಗಳ ಪಡೆದಿರುವ ರೇಸಿಂಗ್ ಕೆಟಿ‌ಎಂ ಬ್ರ್ಯಾಂಡ್‌ನ ಒಂದು ಅವಿಭಾಜ್ಯ ಅಂಗವಾಗಿದೆ. ಮಿಶ್ರಲೋಹದ ಬಿಡಿಭಾಗಗಳು ಪ್ರಖರವಾದ ಬೆಳಕಿನ ಸೌಲಭ್ಯ ಹೊಂದಿದೆ.

Write A Comment