ಕನ್ನಡ ವಾರ್ತೆಗಳು

ಎರಡು ಮುಸ್ಲಿಂ ಪಂಗಡಗಳ ಮಧ್ಯೆ ಜಾಗದ ತಕರಾರು : ಅಸಿರ್‌ಖಾನ್‌ ಪ್ರಾರ್ಥನಾ ಮಂದಿರ ನೆಲಸಮ

Pinterest LinkedIn Tumblr

ಮೂಡಬಿದಿರೆ: ಒಂದು ಪಂಗಡದ ಪ್ರಾರ್ಥನಾ ಮಂದಿರವನ್ನು ಇನ್ನೊಂದು ಪಂಗಡದ ಸಲಾಫಿಗಳು ಧ್ವಂಸಗೊಳಿಸಿದ ಅಪರೂಪದ ಪ್ರಕರಣವೊಂದು ಕಡಂದಲೆಯ ಗೋಳಿದಡಿಯಲ್ಲಿ ನಡೆದಿದ್ದು, ಇದೀಗ ಪರಿಸರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ

ಕಡಂದಲೆಯ ಗೋಳಿದಡಿಯಲ್ಲಿರುವ ಖಬರಸ್ತಾನದಲ್ಲಿ ಸುಮಾರು 700 ವರ್ಷಗಳಿಂದ ಸುನ್ನಿ (ತುರ್ಕಿ) ಪಂಗಡದ ಮುಸ್ಲಿಮರು ಆರಾಧಿಸಿಕೊಂಡು ಬಂದಿರುವ ಅಸಿರ್‌ಖಾನ್‌ ಪ್ರಾರ್ಥನಾ ಮಂದಿರವನ್ನು ಮುಸ್ಲಿಂ ಧರ್ಮದ ಇನ್ನೊಂದು ಪಂಗಡವಾದ ಸಲಾಫಿಗಳು ಧ್ವಂಸಗೊಳಿಸಿದ್ದರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಮೂಡಬಿದಿರೆ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಬ್ಬದ ಸಂದರ್ಭ ಇಲ್ಲಿ ವಿಶೇಷಪೂಜೆ ಸಲ್ಲಿಸಲಾಗುತ್ತಿದೆ.ಇದೇ ಜಾಗಕ್ಕೆ ತಾಗಿಕೊಂಡು ಮುಸ್ಲಿಮರ ಇನ್ನೊಂದು ಪಂಗಡವಾದ ಸಲಾಫಿಗಳು ಮಸೀದಿಯನ್ನು ನಿರ್ಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಎರಡು ಪಂಗಡದವರ ಮಧ್ಯೆ ಜಾಗದ ವಿಷಯದಲ್ಲಿ ವೈಷ್ಯಮ್ಯ ಉಂಟಾಗಿದೆ ಎನ್ನಲಾಗಿದೆ. ರವಿವಾರ ಸಲಾಫಿ ತಂಡದವರು ಯಾರು ಇಲ್ಲದ ಸಮಯ ನೋಡಿ ಜೆಸಿಬಿ ಯಂತ್ರದ ಮೂಲಕ ಅಸಿರ್‌ಖಾನ್‌ ಮಂದಿರ ವನ್ನು ನೆಲಸಮಗೊಳಿಸಿದ್ದಾರೆನ್ನಲಾಗಿದೆ.

ವಿಷಯ ತಿಳಿದ ಸುನ್ನಿ ಪಂಗಡದವರು ಸ್ಥಳಕ್ಕಾಗಮಿಸಿದ್ದು, ಬಿಗುವಿನ ವಾತಾವರಣ ಉಂಟಾಗಿದೆ ಎನ್ನಲಾಗಿದೆ. ತತ್‌ಕ್ಷಣ ಊರಿನ ಗಣ್ಯರಾದ ಜಿ.ಪಂ. ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ರಮೇಶ್‌ ಪೂಜಾರಿ, ಪಂ. ಸದಸ್ಯ ದಿನೇಶ್‌ ಮೊದಲಾದವರು ಇತ್ತಂಡಗಳನ್ನು ಸಮಾಧಾನ ಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

Write A Comment