ಕನ್ನಡ ವಾರ್ತೆಗಳು

ಮೈಸೂರು ದಸರಾದಲ್ಲಿ ವಜ್ರಮುಷ್ಠಿ ಕಾಳಗ ಏರ್ಪಡಿಸಲು ಮನವಿ.

Pinterest LinkedIn Tumblr

vajra_musthi_photo

ಬೆಂಗಳೂರು, ಸೆ.25  :ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ವಜ್ರಮುಷ್ಠಿ ಕಾಳಗ ಸಂಪ್ರದಾಯಬದ್ಧವಾಗಿ ನಡೆದು ಬಂದಿದ್ದು, ಈ ಬಾರಿ ಕೂಡಾ ನಡೆಸಬೇಕೆಂದು ಉಸ್ತಾದ್ ಕೃಷ್ಣಜಟ್ಟಿ ಮತ್ತಿತರರು ಮನವಿ ಮಾಡಿದ್ದಾರೆ.

1131 ರಿಂದಲೂ ಮೈಸೂರು ಒಡೆಯರ ವಜ್ರಮುಷ್ಠಿ ಕಾಳಗ ಆಯೋಜಿಸುತ್ತಾ ಬಂದ್ದಿದು, ಇದು ದಸರಾ ಉತ್ಸವದ ಒಂದು ಸಾಂಪ್ರದಾಯಿಕ ಕಾಳಗವಾಗಿದೆ. ಈ ವರ್ಷ ಮೈಸೂರು ಅರಮನೆಗೆ ಹೊಸ ರಾಜ ಯಧುವೀರಕೃಷ್ಣದತ್ತ ಚಾಮರಾಜ ಒಡೆಯರ್ ಬಂದಿದ್ದಾರೆ. ಅವರಿಗೆ ಕುಸ್ತಿ ಕಾಳಗದ ಬಗ್ಗೆ ಅಷ್ಟಾಗಿ ಅರಿವಿರಲಾರದು. ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಒಂದೆರಡು ದಿನಗಳಲ್ಲಿ ರಾಣಿ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿ ಇದರ ಬಗ್ಗೆ ಮನವಿ ಸಲ್ಲಿಸುಬೇಕು ಎಂದು ವಜ್ರ ಮುಷ್ಠಿ ಕಾಳಗ ಸಂಘದ ಸದಸ್ಯರು ತಿಳಿಸಿದ್ದಾರೆ.

Write A Comment