ಕನ್ನಡ ವಾರ್ತೆಗಳು

‘ಸ್ಮಾರ್ಟ್ ಮಂಗಳೂರು ಕಲ್ಪನೆ ಹೇಗಿರಬೇಕು’ – ಸಲಹೆ, ಸೂಚನೆಗಳನ್ನು ಸಲ್ಲಿಸಲು ಸಾರ್ವಜನಿಕರಲ್ಲಿ ಮನವಿ :ಅಯ್ಕೆಯಾದ ಸ್ಟೇಟ್‌ಮೆಂಟ್‌ಗೆ 1 ಲಕ್ಷ ರೂ ನಗದು ಬಹುಮಾನ

Pinterest LinkedIn Tumblr

Dc_rai_meet_1

ಮಂಗಳೂರು, ಸೆ.24: ಕೇಂದ್ರದ ಸ್ಮಾರ್ಟ್ ಸಿಟಿಗಳ ಪ್ರಥಮ 20ರಲ್ಲಿ ಮಂಗಳೂರು ಆಯ್ಕೆಯಾಗುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯ ಪರಿಕಲ್ಪನೆ ಕುರಿತಂತೆ ಸಾರ್ವ ಜನಿಕರು ತಮ್ಮ ಅಭಿಪ್ರಾಯದ ಜೊತೆಗೆ ಸಲಹೆ, ಸೂಚನೆಗಳನ್ನು ವೆಬ್‌ಸೈಟ್ ಮೂಲಕ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮನವಿ ಮಾಡಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಯಾಗಿ ಪ್ರಥಮ 20 ನಗರಗಳಲ್ಲಿ ಮಂಗಳೂರು ಕಾಣಿಸಿಕೊಳ್ಳಬೇಕಾದರೆ ಇಲ್ಲಿನ ಆವಶ್ಯಕತೆಗಳು ಹಾಗೂ ವಿಶೇಷತೆಗಳ ಕುರಿತು ಅಭಿಪ್ರಾಯ, ಸೂಚನೆಗಳನ್ನು ಈಗಾಗಲೇ ಆರಂಭಿಸಲಾಗಿರುವ ವೆಬ್‌ಸೈಟ್‌ಗೆ ಸಾರ್ವ ಜನಿಕರು ಸಲ್ಲಿಸಬಹುದು. ಅಭಿಪ್ರಾಯಗಳನ್ನು ಇಮೇಲ್ ಅಥವಾ ಪತ್ರ ಮೂಲಕ ಸಂಬಂಧಪಟ್ಟ ವಿಳಾಸಕ್ಕೆ ಕಳುಹಿ ಸಬಹುದು.

ಪ್ರಥಮ ಹಂತದಲ್ಲಿ ಮಂಗಳೂರು ನಗರ ಸೇರ್ಪಡೆಗೊಳ್ಳುವ ಇರಾದೆಯಲ್ಲಿ ಸಾರ್ವಜನಿಕರಿಂದ ವಿಷನ್ ಸ್ಟೇಟ್‌ಮೆಂಟ್ ಆಹ್ವಾನಿಸಲಾಗಿದೆ. ಇದು ಆರ್ಥಿಕ, ಸಾಮಾಜಿಕ, ಪ್ರಾಕೃತಿಕ ದೃಷ್ಟಿಕೋನದೊಂದಿಗೆ ಮಂಗಳೂರು ನಗರದ ಭೌಗೋಳಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವಂತಿರಬೇಕು ಎಂದವರು ವಿವರಿಸಿದರು.

ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಭವಿಷ್ಯದ 20ರಿಂದ 30 ವರ್ಷಗಳ ಅಭಿವೃದ್ದಿಯ ಚಿತ್ರಣ ವನ್ನು ಸಿಟಿ ವಿಷನ್ ನೀಡುವಂತಿರಬೇಕು. ಆರ್ಥಿಕ ಚಟು ವಟಿಕೆ, ಧಾರಣೆ ಮತ್ತು ಆರ್ಥಿಕ ಸೇರ್ಪಡೆಯ ವಿಚಾರ ಧಾರೆಯನ್ನು ಈ ವಿಷನ್ ಹೊಂದಿರಬೇಕು. ಬಳಿಕ ವಿಷನ್ ಸ್ಟೇಟ್‌ಮೆಂಟ್ ಆಧಾರದಲ್ಲಿ ಮಂಗಳೂರಿನ ನೈಜ ಸ್ವರೂಪ ವನ್ನು ಬಿಂಬಿಸುವ ಟ್ಯಾಗ್‌ಲೈನ್ ರೂಪಿಸಲಾಗುತ್ತದೆ ಎಂದ ವರು ಹೇಳಿದರು.

ಮನಪಾ ಆಯುಕ್ತ ಡಾ. ಗೋಪಾಲಕೃಷ್ಣ ಮಾತನಾಡಿ, ಸ್ಮಾರ್ಟ್ ಸಿಟಿ ವಿಷನ್ ಅನ್ನು ವರ್ಷಾವಧಿ ಆಧಾರದಲ್ಲಿ ವ್ಯವಸ್ಥಿತವಾಗಿ ಜಾರಿಗೊಳಿಸಲು ಉದ್ದೇಶಿಸಿದೆ. ಪ್ರಥಮ ಹಂತದಲ್ಲಿ 20 ನಗರಗಳನ್ನು ಸ್ಮಾರ್ಟ್ ಸಿಟಿಗಾಗಿ ಆಯ್ಕೆಗೊಳ್ಳಲಿದ್ದು, ಮಂಗಳೂರು ಈ ಪಟ್ಟಿಯಲ್ಲಿ ಗುರುತಿಸಲು ಶ್ರಮಿಸಬೇಕಾಗಿದೆ. ಇದಕ್ಕಾಗಿ ಸ್ಮಾರ್ಟ್ ಸಿಟಿ ಪ್ರೋಸಲ್ (ಎಸ್‌ಸಿಪಿ) ತಯಾರಿಸಿ ಸ್ಮಾರ್ಟ್ ಸಿಟಿ ಚಾಲೆಂಜ್‌ಗಾಗಿ ಸಲ್ಲಿಸಬೇಕಾಗಿದೆ.

ಸ್ಮಾರ್ಟ್ ಸಿಟಿ ಗಿಟ್ಟಿಸಲು ಮಂಗಳೂರು ಸಲವಾದಲ್ಲಿ ವಿಶೇಷ ಉದ್ದೇಶ ವ್ಯವಸ್ಥೆ(ಎಸ್‌ಪಿವಿ)ಯನ್ನು ಸಾರ್ವಜನಿಕ ನಿಯಮಿತ ಸಂಸ್ಥೆಯ ರೂಪದಲ್ಲಿ ರಚಿಸಿ, ಎಸ್‌ಪಿವಿಯಲ್ಲಿ ಮಂಗಳೂರು ಪಾಲಿಕೆ ಹಾಗೂ ರಾಜ್ಯ ಸರಕಾರವನ್ನು ಷೇರುದಾರರನ್ನಾಗಿ ನೇಮಿಸಬೇಕಾಗುವುದು. ಅಲ್ಲದೆ, ಇದಕ್ಕಾಗಿ ಪೂರ್ಣಕಾಲಿಕ ಸಿಇಒ ನೇಮಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಸ್ಮಾರ್ಟ್ ಸಿಟಿಗಾಗಿ ಎರಡು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಾಜ್ಯ ಹಂತದಲ್ಲಿ ಮಾನದಂಡಗಳನ್ನು ಆಧರಿಸಿ 100 ನಗರಗಳನ್ನು ಕೇಂದ್ರ ಸರಕಾರ ಆಯ್ಕೆ ಮಾಡ ಬೇಕಾಗಿದ್ದು, ಇದರಲ್ಲಿ ಕರ್ನಾಟಕದ ಆರು ನಗರಗಳಲ್ಲಿ ಮಂಗಳೂರು ಸೇರಿದಂತೆ 98 ನಗರಗಳು ಆಯ್ಕೆಗೊಳ್ಳುವ ಮೂಲಕ ಪ್ರಥಮ ಹಂತ ಪೂರ್ಣಗೊಂಡಿದೆ.

ಇದೀಗ ದ್ವಿತೀಯ ಹಂತಕ್ಕಾಗಿ ನಗರದ ಸಲಹೆಗಾರರು/ ಸಮಾಲೋಚಕರ ಸಹಾಯದೊಂದಿಗೆ ನಗರಗಳು ಪ್ರಸ್ತಾವನೆ ಯನ್ನು ಸಿದ್ಧಪಡಿಸಬೇಕಾಗಿದೆ. ಆ ಕಾರ್ಯ ಪ್ರಸ್ತುತ ನಡೆ ಯುತ್ತಿದೆ. ಅಕ್ಟೋಬರ್ 15ರೊಳಗೆ ಪ್ರಸ್ತಾವನೆಯನ್ನು ಸಿದ್ಧ ಪಡಿಸಿ ಜನಪ್ರತಿನಿಧಿಗಳ ಸಲಹೆಗಳೊಂದಿಗೆ ನವೆಂಬರ್ 27ರೊಳಗೆ ವರದಿಯನ್ನು ರಾಜ್ಯದ ಉನ್ನತ ಮಟ್ಟದ ಸಮಿತಿಗೆ ಕಳುಹಿಸಬೇಕಿದೆ. ಬಳಿಕ ಅಲ್ಲಿಂದ ವರದಿಯು ಡಿಸೆಂಬರ್ 15ರೊಳಗೆ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿದೆ. ಅಲ್ಲಿ ಉನ್ನತ ಮಟ್ಟದ ಸಮಿತಿಯ ಪರಿಶೀಲನೆಯ ಬಳಿಕ ಪ್ರಥಮ 20 ಸ್ಮಾರ್ಟ್ ಸಿಟಿಗಳು ಆಯ್ಕೆಗೊಳ್ಳುತ್ತವೆ ಎಂದು ಎ.ಬಿ.ಇಬ್ರಾಹೀಂ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ಮುಖ್ಯಪ್ರತಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿಯ ಅಧ್ಯಕ್ಷ ಹರಿನಾಥ್ ಮೊದಲಾದವರು ಉಪಸ್ಥಿತರಿದ್ದರು.

ವಿಷನ್ ಸ್ಟೇಟ್‌ಮೆಂಟ್ ಸ್ಪರ್ಧೆ :1 ಲಕ್ಷ ರೂ. ನಗದು ಪುರಸ್ಕರ

‘ಸ್ಮಾರ್ಟ್ ಮಂಗಳೂರು ಕಲ್ಪನೆ ಹೇಗಿರಬೇಕು’ ಎಂಬ ಕುರಿತಾಗಿ ಗರಿಷ್ಠ 50 ಶಬ್ದಗಳಿಗೆ ಸೀಮಿ ತಗೊಳಿಸಿ, ವಿಷನ್ ಸ್ಟೇಟ್‌ಮೆಂಟ್(ಅಭಿ ಪ್ರಾಯ) ಅನ್ನು ಸಾರ್ವ ಜನಿಕರಿಂದ ಆಹ್ವಾನಿ ಸಲಾಗಿದೆ. ಆಯ್ದ ವಿಷನ್ ಸ್ಟೇಟ್‌ಮೆಂಟ್‌ಗೆ 1 ಲಕ್ಷ ರೂ. ನಗದು ಮತ್ತು ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು. ಒಂದು ವೇಳೆ ಯಾವುದೇ ವಿಷನ್ ಸ್ಟೇಟ್‌ಮೆಂಟ್ ಆಯ್ಕೆ ಆಗದಿದ್ದಲ್ಲಿ ಉತ್ಕೃಷ್ಟವಾದ 3 ಅಭಿಪ್ರಾಯಗಳಿಗೆ ತಲಾ 25,000 ರೂ. ನಗದು ನೀಡಿ ಪುರಸ್ಕರಿಸಲಾಗುತ್ತದೆ. ಅಕ್ಟೋಬರ್ 15 ಅಭಿಪ್ರಾಯ ತಿಳಿಸಲು ಕೊನೆಯ ದಿನವಾಗಿರುತ್ತದೆ.

ವಿಷನ್ ಸ್ಟೇಟ್‌ಮೆಂಟ್ ಕಳುಹಿಸಬೇಕಾದ ವಿಳಾಸ

https//secure.mygov.in/ group-issue/smart-city-vision-mangaluru-through-peoples participation/

smartcitymangaluru@gmail.com

https:/ www.facebook.com/ smartcitymangaluru.

ಡ್ರಾಪ್‌ಬಾಕ್ಸ್: ಇದಲ್ಲದೆ ಲಾಲ್‌ಬಾಗ್‌ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ಕಚೇರಿ, ಕದ್ರಿ ಮತ್ತು ಸುರತ್ಕಲ್‌ನಲ್ಲಿರುವ ಉಪ ಕಚೇರಿ, ಬಿಜೈಯಲ್ಲಿರುವ ಭಾರತ್ ಮಹಲ್, ಕೆ.ಎಸ್.ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್, ಹಾಗೂ ಪಾಂಡೇಶ್ವರದಲ್ಲಿರುವ ಫೋರಂ ಫಿಝಾ ಮಾಲ್‌ಗಳಲ್ಲಿ ಇಡಲಾಗಿರುವ ಡ್ರಾಪ್ ಬಾಕ್ಸ್‌ಗಳಲ್ಲೂ ಹಾಕಬಹುದಾಗಿದೆ.

Write A Comment