ಕನ್ನಡ ವಾರ್ತೆಗಳು

 ಸತತ ನಾಲ್ಕನೇ ವರ್ಷದ ಅಮೇರಿಕಾ ಯಕ್ಷಮಂಜೂಷ ಅಭಿಯಾನ ಪ್ರಾರಂಭ.

Pinterest LinkedIn Tumblr

yaksh_manjushg_photo

ಮಂಗಳೂರು, ಸೆ.23: ವಿದ್ಯಾಕೋಳ್ಯೂರು ನೇತೃತ್ವದ ಯಕ್ಷಮಂಜೂಷ ತಂಡದ 10 ಮಂದಿ ಕಲಾವಿದರು ಇಂದು (ಸೆ.23) ತಮ್ಮ ಸತತ ನಾಲ್ಕನೇ ವರ್ಷದ `ಅಮೆರಿಕಾ ಯಕ್ಷಗಾನ ಅಭಿಯಾನ’ ಪ್ರಾರಂಭಿಸಲಿದ್ದಾರೆ.

ಅಮೆರಿಕಾದ ವಿಶ್ವವಿದ್ಯಾಲಯಗಳ ಮೂಲಕ ಪ್ರಪಂಚದ ಎಲ್ಲಾ ದೇಶಗಳ ಯುವ ಮನಸ್ಸುಗಳನ್ನು ಮಂತ್ರಮುಗ್ದಗೊಳಿಸಿದ ಯಕ್ಷಮಂಜೂಷ ತಂಡ, ಈ ಬಾರಿ ಓರ್‍ಲ್ಯಾಂಡೋ, ಅಟ್ಲಾಂಟಾ, ಸ್ಯಾನ್‍ಹೋಸೆ, ಫೀನಿಕ್ಸ್, ಲಾಸ್‍ಎಂಜೆಲಿಸ್, ವಾಶಿಂಗ್‍ಟನ್, ಹ್ಯೂಸ್ಟನ್, ರ್ಯಾಲಿ, ಎಡಿಸನ್ ಮುಂತಾದೆಡೆಗಳಲ್ಲಿ ಸೀಮಿತ ಅವಧಿಯ ಸುಮಾರು 15 ಪ್ರದರ್ಶನಗಳನ್ನು ನೀಡಲಿದೆ.

ಯಕ್ಷಗಾನವನ್ನು ಕನ್ನಡದಲ್ಲೇ ನಡೆಸಿದರೂ ಯಕ್ಷಗಾನ ನಡೆಯುತ್ತಿರುವಂತೆಯೇ ಪ್ರೇಕ್ಷಕರಿಗೆ ಇಂಗ್ಲಿಷ್ ಭಾಷಾಂತರದ ಉಪಶೀರ್ಷಿಕೆ ಸಿಗುವುದರಿಂದ ಯಕ್ಷ ಮಂಜೂಷ ಕರ್ನಾಟಕದ ಈ ಕಲೆಯ ಪ್ರಚಾರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಯಾರೂ ಈ ತನಕ ಮಾಡದ ಸಾಧನೆ ಮಾಡುತ್ತಿರುವುದರಿಂದಲೇ ವಿದೇಶೀಯರಿಗೂ ಕರ್ನಾಟಕದ ಕಲೆಯ ಮೇಲೆ ಹೆಚ್ಚಿನ ಆಸಕ್ತಿ ಮೂಡಿದೆ. ವಿದ್ಯಾಕೋಳ್ಯೂರು ಅವರ ಯಕ್ಷಗಾನ ಪ್ರಸ್ತುತಿ ಮತ್ತು ಜನಸಂಪರ್ಕಕದ ಪರಿಣಾಮವಾಗಿ ಅಮೆರಿಕಾದ ಯುನಿವರ್ಸಿಟಿ ಆಫ್ ನಾರ್ತ್ ಕೆರೋಲಿನಾದ ಇಬ್ಬರು ಪ್ರಾಚಾರ್ಯರು ಈಗಾಗಲೇ ಮಂಗಳೂರು, ಕಾರ್ಕಳ, ಮೂಡಬಿದಿರೆ ಮುಂತಾದ ಕಡೆಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿದ್ದಾರೆ. ಮುಂಬರುವ ವರ್ಷ ಸುಮಾರು 20 ಮಂದಿ ವಿದೇಶೀ ವಿದ್ಯಾರ್ಥಿಗಳ ತಂಡವೊಂದು ಭಾರತದ ಕಲೆ, ಸಂಸ್ಕಂತಿಯ ಅಧ್ಯಯನಕ್ಕಾಗಿ ಮಂಗಳೂರಿಗೆ ಬರಲಿದ್ದು, ಯಕ್ಷಗಾನದ ಮೂಲಕ ಭಾರತೀಯ ಸಂಸ್ಕಂತಿಯನ್ನು ನೋಡುವ ಅವರ ಪ್ರಯತ್ನ ಯಕ್ಷಗಾನಕ್ಕೆ ಮಾತ್ರವಲ್ಲ ಕರ್ನಾಟಕಕ್ಕೂ ಹೆಮ್ಮೆ ತರುವ ವಿಷಯವಾಗಿದೆ. ಈ ನಿರಂತರ ಅಮೆರಿಕಾ ಪ್ರವಾಸ ಆರ್ಥಿಕವಾಗಿ ಪ್ರಯೋಜನಕಾರಿ ಅಲ್ಲದಿದ್ದರೂ, ವಿಶ್ವಭೂಪಟದಲ್ಲಿ ಯಕ್ಷಗಾನಕ್ಕೊಂದು ಸ್ಫ್ಪುಟವಾದ ಸ್ಥಾನ ಒದಗಿಸುವಲ್ಲಿ ಅತ್ಯಂತ ಮಹತ್ವಪೂರ್ಣವಾಗಿದ್ದು, ತಂಡ ನ.5ರಂದು ಮಂಗಳೂರಿಗೆ ವಾಪಸ್ಸಾಗಲಿದೆ.

ತಂಡಗಳು :
ಸುಮಾರು 6 ವಾರಗಳ ಈ ಅಭಿಯಾನದಲ್ಲಿ, ವಿದ್ಯಾಕೋಳ್ಯೂರರ ಜೊತೆಗೆ, ಯುವ ಭಾಗವತ ಪಟ್ಲ ಸತೀಶ ಶೆಟ್ಟಿ, ಮದ್ದಳೆಗಾರ ಪದ್ಮನಾಭ ಉಪಾಧ್ಯಾಯ, ಚೆಂಡೆ ವಾದಕರಾಗಿ ದೇವಾನಂದ ಭಟ್ ಬೆಳುವಾಯಿ ಹಾಗೂ ಮುಮ್ಮೇಳದಲ್ಲಿ ಚಂದ್ರಶೇಖರ ಧರ್ಮಸ್ಥಳ, ಹರಿನಾರಾಯಣ ಭಟ್ ಎಡನೀರು, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಮೋಹನ ಬೆಳ್ಳಿಪ್ಪಾಡಿ, ಅರುಣ್ ಜಾರ್ಕಳ ಮತ್ತು ಸಹಕಾರಕ್ಕಾಗಿ ಸರವು ಕೃಷ್ಣ ಭಟ್ ತೆರಳಲಿದ್ದಾರೆ.

Write A Comment