ಕನ್ನಡ ವಾರ್ತೆಗಳು

ಅಂಚೆ ನೌಕರರ ಗಣೇಶ ಚತುರ್ಥಿ ಹಬ್ಬ ಕಸಿದುಕೊಂಡಿದ್ದ್ಯಾರು?|ಹಬ್ಬಕ್ಕೆ ಅಂಚೆ ನೌಕರರಿಗೆ ರಜೆ ಇರಲಿಲ್ಲ ಯಾಕೇ..?

Pinterest LinkedIn Tumblr

ವಿಶೇಷ ವರದಿ
ಸಮಸ್ತ ನಾಡಿಗೆ ನಾಡೇ ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ಮೂಡಿನಲ್ಲಿರುವಾಗ ಊರಿನ ಅಂಚೆ ನೌಕರರು ಮಾತ್ರ ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ರು. ಅವರಿಗೆ ಹಬ್ಬವೂ ಇಲ್ಲ, ಹಬ್ಬದ ಗೌಜಿ ಗಮ್ಮತ್ತು ಇರಲಿಲ್ಲ, ಯಾಕೆಂದ್ರೇ ಅವರಿಗೆ ಹಬ್ಬಕ್ಕೆ ರಜೆ ಇರಲೇ ಇಲ್ಲ.

Post Office

(ಸಾಂದರ್ಭಿಕ ಚಿತ್ರ)

ಕೇಂದ್ರ ಸರಕಾರದ ಅಧೀನದಲ್ಲಿರುವ ಅಂಚೆ ಇಲಾಖೆ ನೌಕರರಿಗೆ ಇಷ್ಟು ವರ್ಷವೂ ಗಣಪತಿ ಹಬ್ಬಕ್ಕೆ (ಚೌತಿಗೆ) ರಜೆ ನೀಡಲಾಗುತಿತ್ತು. ಆದ್ರೇ ಈ ಬಾರೀ ಯಾವುದೇ ಕಾರಣವನಿಟ್ಟುಕೊಂಡು ರಾಜ್ಯದಾದ್ಯಂತ ಅಂಚೆ ನೌಕರರಿಗೆ ಚೌತಿಯ ರಜೆ ನೀಡಿಲ್ಲ. ಚೌತಿ ರಜೆಯ ಬದಲಾಗಿ ಚಾಂದ್ರಮಾನ ಯುಗಾದಿ ಹಬ್ಬಕ್ಕೆ ರಜೆಯನ್ನು ನೀಡಲಾಗಿತ್ತಂತೆ. ರಾಜ್ಯದಲಿರುವ ಎಲ್ಲಾ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್, ವಿವಿಧ ಶ್ರೇಣಿಯ ನೌಕರರು, ಪೋಸ್ಟ್ ಮನ್ ಸೇರಿದಂತೆ ಎಲ್ಲರೂ ಚೌತಿಯ ದಿನದಂದು ಕೂಡ ರಜೆಯಿಲ್ಲದೇ ಎಂದಿನಂತೆ ಡ್ಯುಟಿ ಮಾಡುವ ಹಾಗಾಗಿತ್ತು. ಅಂದಾಜು ರಾಜ್ಯದಲ್ಲಿ ೩೫ ಸಾವಿರಕ್ಕೂ ಅಧಿಕ ಮಂದಿಗೆ ನಿನ್ನೆ ರಜೆಯಿರಲಿಲ್ಲವಂತೆ.

ರಾಷ್ಟ್ರೀಯ ಹಬ್ಬವಾದ ಗಣೇಶ ಚತುರ್ಥಿಯ ದಿನ ನೌಕರಿಗೆ ರಜೆ ನೀಡದೇ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆಂದು ಕೆಲವು ಅಂಚೆ ಇಲಾಖೆಯ ನೌಕರರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಚಾಂದ್ರಮಾನ ಹಬ್ಬಕ್ಕೆ ರಜೆ ನೀಡಿ ಇಷ್ಟು ದೊಡ್ಡ ಹಬ್ಬದಲ್ಲಿ ನಾವು ಮನೆಯವರೊಂದಿಗೆ ಬೆರೆತು ಹಬ್ಬ ಆಚರಿಸಲು ಅಡ್ಡಿ ಮಾಡಿದ್ದಕ್ಕೆ ಅವರಲ್ಲಿ ಅತೀವ ನೋವಿತ್ತು. ಆದರೂ ಸರಕಾರಿ ಕೆಲಸ ದೇವರ ಕೆಲಸ ಎಂಬಂತೆ ಕೆಲಸದಲ್ಲಿಯೇ ತಮ್ಮ ಚೌತಿ ಹಬ್ಬವನ್ನು ಕಛೇರಿಯಲ್ಲಿ ಆಚರಿಸಿದ್ರು ನಮ್ಮ ಅಂಚೆ ಇಲಾಖೆಯವರು.

ಸಾಮಾನ್ಯ ಕೆಲಸಗಾರರಿಂದ ಹಿಡಿದು ಎಲ್ಲರೂ ಹಬ್ಬದ ಗೌಜಿನಲ್ಲಿ ಬ್ಯುಸಿಯಿದ್ದ ಸಂದರ್ಭ ತಮ್ಮ ಹಬ್ಬದ ಮೂಡನ್ನು ಬದಿಗಿಟ್ಟು ಅವರವರ ವ್ಯಾಪ್ತಿಯ ಜನರಿಗೆ ಅಂಚೆ ಸೇವೆಯನ್ನು ನೀಡಿದ ಅಂಚೆ ಇಲಾಖೆಯ ನೌಕರರು ನಿಜಕ್ಕೂ ಗ್ರೇಟ್ ಅಲ್ಲವೇ..ಅವರಿಗೆ ನಮ್ಮ ಹ್ಯಾಟ್ಸಾಪ್..!

ವರದಿ- ಯೋಗೀಶ್ ಕುಂಭಾಸಿ

Write A Comment