ಉಡುಪಿ: ಮತಾಂಧ ಶಕ್ತಿಗಳು ಹಿಂದೂ ಸಮಾಜದ ಮೇಲೆ ವ್ಯವಸ್ಥಿತ ಷಡ್ಯಂತರ ರೂಪಿಸುತ್ತಿದ್ದು ಸ್ಥಳೀಯರ ಶಾಂತಿ ನೆಮ್ಮದಿ ಹಾಳುಗೇಡವುವ ಮೂಲಕ ಜನರಿಗೆ ಸಮಸ್ಯೆಯನ್ನುಂಟು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಓಟ್‌ಬ್ಯಾಂಕ್ ರಾಜಕೀಯ ಮಾಡುತ್ತಾ ಕಾಂಗ್ರೆಸ್ ಸರಕಾರ ಅವರಿಗೆ ರಕ್ಷಣೆ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇವೆಲ್ಲವುದಕ್ಕೂ ತಕ್ಕ ಉತ್ತರ ಹಿಂದೂ ಸಮಾಜ ನೀಡುತ್ತದೆ ಎಂದು ಹಿಂದುಜಾಗರಣಾ ವೇದಿಕೆಯ ರಾಜ್ಯ ಸಹಸಂಚಾಲಕ ಸತ್ಯಜೀತ್ ಸುರತ್ಕಲ್ ಹೇಳಿದ್ದಾರೆ.
ಸಾಸ್ತಾನದಲ್ಲಿ ಇತ್ತೀಚಿಗೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಪ್ರವೀಣ್ ಕುಂದರ್ ಫ್ಯಾನ್ಸಿ ಅಂಗಡಿಗೆ ಕಿಡಿಗೆಡಿಗಳು ಬೆಂಕಿ ಹಚ್ಚಿದರ ವಿರುದ್ಧ ಸಾಸ್ತಾನ ಬಸ್ ನಿಲ್ದಾಣದ ಬಳಿ ಹಿಂದೂ ಜಾಗರಣಾ ವೇದಿಕೆ ಸಾಸ್ತಾನ ಘಟಕ ಆಯೋಜಿಸಿದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಹಿಂದುಗಳು ಶಾಂತಿಯುತರಾಗಿದ್ದಾರೆ ನಿಜ ಆದರೇ ಅದು ಅವರ ದೌರ್ಬಲ್ಯವಲ್ಲ. ಸಮಾಜಕ್ಕೆ ಶಾಂತಿಯೂ ತಿಳಿದಿದೆ,ಹೋರಾಟಕ್ಕೂ ಸಿದ್ದರಿದ್ದೇವೆ. ಹಿಂದಿನ ರಾಜ್ಯ ಸರಕಾರ ಸಂಪೂರ್ಣ ಗೋ ಹತ್ಯೆ ಕಾನೂನು ಜಾರಿಗೆ ತರಬೇಕನುವಷ್ಟರಲ್ಲಿ ಈ ಕಾಂಗ್ರೇಸ್ ಸರಕಾರ ಅದಕ್ಕೂ ಅಡ್ಡಗಾಲು ಹಾಕಿ ಗೋ ಹತ್ಯೆ ಕಾನೂನನ್ನು ರದ್ದುಗೊಳಿಸಿತು. ಈ ದಿಸೆಯಲ್ಲಿ ಇಂದು ರಾಜಮಾರ್ಗವಾಗಿ ಅಕ್ರಮ ಗೋ ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಎಲ್ಲಾ ವಿಚಾರದಲ್ಲಿಯೂ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಇನ್ನೊಂದು ಕೋಮಿನ ತುಷ್ಠಿಕರಣ ನಡೆಯುತ್ತಿದೆ ಎಂದು ಆರೋಪಿಸಿದರು.
ಸಾಸ್ತಾನ ಪ್ರಕರಣದಲ್ಲಿ ಇನ್ನೊಂದು ವಾರದಲ್ಲಿ ಕಿಡಿಗೇಡಿಗಳನ್ನು ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ಉಘ್ರ ಹೋರಾಟ ನಿಶ್ಚಿತ ಎಂದು ಅವರು ಇದೇ ಸಂದರ್ಭ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಅರವಿಂದ ಕೋಟೇಶ್ವರ, ಸಂಘಟನೆಯ ತಾಲ್ಲೂಕು ಸಂಚಾಲಕ ಚಂದ್ರ ಶಿರಿಯಾರ, ಸಮಾಜ ಸೇವಕ ರಶಿರಾಜ್ ಸಾಸ್ತಾನ ಉಪಸ್ಥಿತರಿದ್ದರು.
೫೦ ಸಾವಿರ ಧನಸಹಾಯ: ಈ ಸಂದರ್ಭದಲ್ಲಿ ಇತ್ತೀಚಿಗೆ ಕಿಡಿಗಡಿಗಳಿಂದ ಹಾನಿಗೋಳಗಾದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಫ್ಯಾನ್ಸಿ ಮತ್ತು ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗೆ ಬಗ್ಗೆ ಧನ ಸಹಾಯ ಮಾಡಲಾಯಿತು ಸುಮಾರು ೫೦ಸಾವಿರ ರೂವನ್ನು ಸತ್ಯಜೀತ್ ಸುರತ್ಕಲ್ ನೆತ್ರತ್ವದಲ್ಲಿ ಮಳಿಗೆಯ ಮಾಲಿಕ ಪ್ರವೀಣ್ ಹಸ್ತಾಂತರಿಸಲಾಯಿತು.