ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜಾ ಸದ್ಯ ಉಡುಪಿ ಪೊಲೀಸರ ವಶದಲ್ಲಿದ್ದಾನೆ. ಶನಿವಾರ ಬೆಳಗಾವಿಯಿಂದ ಉಡುಪಿಗೆ ಆತನನು ಕರೆತರಲಾಗಿದ್ದು ಪೊಲೀಸರು ಆತನ ಮೇಲಿರುವ ಕೆಲವು ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ಬನ್ನಂಜೆ ರಾಜನ ಆರೋಗ್ಯ ತಪಾಸಣೆಯನ್ನು ಭಾನುವಾರ ನಡೆಸಲಾಗಿದ್ದು, ಆರೋಗ್ಯ ಸಮಸ್ಯೆ ಇಲ್ಲ ಎಂಬುದಾಗಿ ಮೂಲಗಳು ತಿಳಿಸಿದೆ.
ಉಡುಪಿ, ಮಂಗಳೂರು, ಬೆಂಗಳೂರು, ಕಾರವಾರ ಸೇರಿದಂತೆ ರಾಜ್ಯದ ವಿವಿಧೆಡೆ ಸುಮಾರು 50 ಪ್ರಕರಣಗಳಲ್ಲಿ ಬನ್ನಂಜೆ ರಾಜ ಆರೋಪಿಯಾಗಿದ್ದರೂ, ಸಾಕ್ಷಿಗಳಿರುವ ಮತ್ತು ಗಂಭೀರವಾದ ಒಟ್ಟು 16 ಪ್ರಕರಣಗಳ ವಿಚಾರಣೆಯಷ್ಟೆ ಸದ್ಯ ನಡೆಯಲಿದೆ. ದುಬೈ ಮತ್ತು ಮೊರಕ್ಕೋದಲ್ಲಿ ಉದ್ಯಮಿಯಾಗಿರುವ, ಭಾರತದಲ್ಲಿ ಭೂಗತ ಪಾತಕಿಯಾಗಿರುವ, ಬನ್ನಂಜೆ ರಾಜನನ್ನು ಮೊರಕ್ಕೋದಿಂದ ಬೆಂಗಳುರಿಗೆ ಕರೆತಂದ ಬಳಿಕ ಶುಕ್ರವಾರ ಬೆಳಗಾವಿಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬೆಳಗಾವಿ ನ್ಯಾಯಾಲಯವು ಆ.೨೮ರವರೆಗೂ ಉಡುಪಿ ಪೊಲೀಸ್ ಕಸ್ಟಡಿಗೆ ನೀಡಿತ್ತು. ಬಳಿಕ ಉಡುಪಿ ಪೊಲೀಸರು ಶನಿವಾರ ಉಡುಪಿಗೆ ಕರೆತಂದಿದ್ದರು.
ಉಡುಪಿ ನಗರ ಪೊಲೀಸ್ ಠಾಣೆ ಪಕ್ಕದಲ್ಲಿರುವ ಶೆಣೈ ಕ್ಯಾಂಟೀನ್‌ನ ತರಕಾರಿ ಊಟ. ರಾತ್ರಿ ನೆಲದ ಮೇಲೆಯೇ ನಿದ್ದೆ ಮಾಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿದೆ.