ಮಂಗಳೂರು ಅಗಸ್ಟ್ .05 : ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಕೂಡಲೇ ಪುಷ್ಫವನ್ನು ಹಿಡಿದು ರೈಲಿಗೆ ತೋರಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ ಸ್ಥಳೀಯ ನಿವಾಸಿ ಫ್ರಾಂಕ್ಲಿನ್ ಫೆರ್ನಾಂಡಿಸ್ ಅವರನ್ನು ಮಂಗಳೂರು ಉತ್ತರ ಶಾಸಕ ಮೊಹಿದೀನ್ ಬಾವಾ ಅವರು ಮಂಗಳವರ ಸನ್ಮಾನಿಸಿದರು.
ಫ್ರಾಂಕ್ಲಿನ್ ಅವರ ಪಚ್ಚನಾಡಿಯ ಮನೆಗೆ ತೆರಳಿ ಸನ್ಮಾನಿಸಿದ ಶಾಸಕರು, ಇದೊಂದು ಮಹಾನ್ ಸಾಹಸ ಹಾಗೂ ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ರೈಲು ಹಳಿಯಲ್ಲಿ ಬಿರುಕು ಕಂಡ ಕೂಡಲೇ ಕಾರ್ಯಪ್ರವೃತ್ತರಾಗಿ, ರಥ ಪುಷ್ಪ ಹೂವನ್ನು ಹಿಡಿದು ವೇಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ರೈಲಿಗೆ ರಥ ಹೂವನ್ನು ತೋರಿಸುವ ಮೂಲಕ ರೈಲನು ನಿಲ್ಲಿಸಿ, ಭೀಕರ ಅಪಘಾತವಾಘುವುದನ್ನು ತಪ್ಪಿಸಿದ್ದಾರೆ. ಇದು ಅತ್ಯಂತ ಮಾಣವೀಯ ಕಾರ್ಯವಗಿದೆ ಎಂದರು.
ತಪ್ಪಿದ ರೈಲು ಅಪಘಾತ: ಪುರಸ್ಕರಿಸಲು ಸಂಸದರ ಮನವಿ:
ನಗರದ ಹೊರವಲಯದ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಸ್ಥಳೀಯರಾದ ಶ್ರೀ.ಫ್ರಾಂಕ್ಲಿನ್ ಫೆರ್ನಾಂಡಿಸ್ ಇವರು ರಥಪುಷ್ಪ ವನ್ನು ಹಿಡಿದು ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುತ್ತಾರೆ. ಇವರ ಈ ಕಾರ್ಯಕ್ಕೆ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಮೆಚ್ಚುಗೆ ವ್ಯಕ್ತಪಡಿಸಿ ಇಲಾಖೆಯು ಉತ್ತಮ ಸೇವೆ ನೀಡುವಲ್ಲಿ ಜನಸಾಮಾನ್ಯರ ಇಂತಹ ಕಾರ್ಯವನ್ನು ಇಲಾಖೆಯು ಪ್ರೋತ್ಸಾಹಿಸ ಬೇಕೆಂದು ತಿಳಿಸಿರುತ್ತಾರೆ.
ಸಂಸದರು ಈ ಘಟನೆಯ ಸಂಪೂರ್ಣ ಮಾಹಿತಿಯನ್ನು ಮಾನ್ಯ ಕೇಂದ್ರ ರೈಲ್ವೇ ಸಚಿವರಾದ ಶ್ರೀ.ಸುರೇಶ್ ಪ್ರಭು ಇವರಿಗೆ ಗಮನಕ್ಕೆ ತಂದಿರುತ್ತಾರೆ, ಅಲ್ಲದೇ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುವ ಶ್ರೀ.ಫ್ರಾಂಕ್ಲಿನ್ ಫೆರ್ನಾಂಡಿಸ್ ಇವರಿಗೆ ರೈಲ್ವೇ ಇಲಾಖೆಯು ಪುರಸ್ಕರಿಸಿ ಗೌರವಿಸಬೇಕೆಂದು ಸಂಸದರು ಸಚಿವರಲ್ಲಿ ವಿನಂತಿಸಿರುತ್ತಾರೆ.
ಫ್ರಾಂಕ್ಲಿನ್ ಫೆರ್ನಾಂಡಿಸ್ ಅವರಿಗೆ ಸರಕಾರದಿಂದ ಪುರಸ್ಕಾರ ಸಿಗಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು. ಕಾರ್ಪೋರೇಟರ್ ಕವಿತಾ ಸನಿಲ್ ಮತ್ತಿತರರು ಈ ಸಂದರ್ಭದಲ್ಲಿದ್ದರು.