ರಾಷ್ಟ್ರೀಯ

ಅಶ್ಲೀಲವಲ್ಲದ ವೆಬ್‌ಸೈಟ್ ನಿಷೇಧ ತೆರವು

Pinterest LinkedIn Tumblr

sex

ಹೊಸದಿಲ್ಲಿ: 857 ವೆಬ್‌ಸೈಟ್‌ಗಳಿಗೆ ನಿಷೇಧ ಹೇರಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರಕಾರ ಆದೇಶವನ್ನು ಮರು ಪರಿಶೀಲಿಸಿದ್ದು, ಅಶ್ಲೀಲವಲ್ಲದ ವೆಬ್‌ಸೈಟ್‌ಗಳ ಮೇಲಿನ ನಿಷೇಧವನ್ನು ರದ್ದುಪಡಿಸಲು ನಿರ್ಧರಿಸಿದೆ.

ಭಾರತದ ಕಾನೂನಿಗೆ ವಿರುದ್ಧವಾಗಿರುವ ಮಕ್ಕಳ ನೀಲಿ ಚಿತ್ರಗಳಿರುವ ಪೋರ್ನ್ ಸೈಟ್‌ಗಳನ್ನು ಮಾತ್ರ ನಿಷೇಧಿಸಲಾಗಿದೆ. ವಯಸ್ಕರ ನೀಲಿ ಚಿತ್ರಗಳ ವೆಬ್‌ಸೈಟ್‌ಗಳನ್ನು ನಿಷೇಧಿಸಿಲ್ಲ. ಈ ನಿಷೇಧ ನ್ಯಾಯಾಲಯದ ಆದೇಶ ಬರುವವರೆಗೆ ಮುಂದುವರಿಯಲಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.

ದೂರುದಾರರು ಸುಪ್ರೀಂಕೋರ್ಟ್‌ಗೆ ಪೋರ್ನ್ ಸೈಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪಟ್ಟಿ ಸಲ್ಲಿಸಿದ್ದರು. ಇದರನ್ವಯ ನಿಷೇಧ ವಿಧಿಸಲಾಗಿದೆ. ಈ ಸಂಬಂಧ ಅಂತಿಮ ಆದೇಶ ಬರುವವರೆಗೆ ಸರಕಾರ ತಾತ್ಕಾಲಿಕ ಕ್ರಮ ಕೈಗೊಂಡಿರುವುದಾಗಿ ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ನಿಷೇಧಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಸಚಿವರು ಮಂಗಳವಾರ ಸಭೆ ಕರೆದಿದ್ದರು. ಐಟಿ ಕಾರ‌್ಯದರ್ಶಿ ಆರ್.ಎಸ್. ಶರ್ಮಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಮತ್ತಿತರರು ಭಾಗವಹಿಸಿದ್ದರು.

Write A Comment