ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಜುಲೈ .30 : ಭಾರತದ ಮುಂಚೂಣಿಯ ಗಿಡಮೂಲಿಕೆಯ ಆರೋಗ್ಯ ಮತ್ತು ವೈಯಕ್ತಿಕ ಆರೈಕೆಯ ಕಂಪನಿ ದಿ ಹಿಮಾಲಯ ಡ್ರಗ್ ಕಂಪನಿ ವತಿಯಿಂದ ಗುರುವಾರ ನಗರದ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಪ್ಯೂರ್ ಸ್ಕಿನ್ ಫೇಷಿಯಲ್ ಕುರಿತ ಕಾರ್ಯಾಗಾರ ಹಾಗೂ ಹಿಮಾಲಯ ಶ್ರೇಣಿಯ ಹರ್ಬಲ್ ಉತ್ಪನ್ನಗಳ `ಅಟ್ ಹೋಮ್’ ಫೇಷಿಯಲ್‌ನ ಸಾಮರ್ಥ್ಯದ ಪ್ರಾತ್ಯಕ್ಷಿಕೆ ನಡೆಯಿತು.
ಕಾರ್ಯಕ್ರಮವನ್ನು ನಗರದ ಬೆಂದೂರ್‌ವೆಲ್‌ನ ಕೊಲೊಸೋ ಆಸ್ಪತ್ರೆಯ ಮುಂಭಾಗದಲ್ಲಿ ಕಾರ್ಯನಿರ್ವಾಹಿಸುತ್ತಿರುವ ಚೇತನಾಸ್ ಬ್ಯೂಟಿಸ್ ಲಾಂಜ್‌ನ ಮಾಲಾಕಿ, ಖ್ಯಾತ ಬ್ಯೂಟಿಷಿಯನ್ ಶ್ರೀಮತಿ ಚೇತನಾ ಅವರು ನಡೆಸಿಕೊಟ್ಟರು. ಚರ್ಮವನ್ನು ಮೃದು ಹಾಗೂ ಆಕರ್ಷಕಗೊಳಿಸುವ ವಿವಿಧ ಫೇಷಿಯಲ್ ತಂತ್ರಗಳನ್ನು ಅವರು ನಿರೂಪಿಸಿದರು.
ಚರ್ಮದ ಆರೈಕೆಯ ಗುಟ್ಟುಗಳ ಮಾಹಿತಿ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿ ಪರಸ್ಪರ ಹಿಮಾಲಯ ಹರ್ಬಲ್ಸ್ ಡೀಪ್ ಕ್ಲೀನ್ಸಿಂಗ್ ಶ್ರೇಣಿ ಬಳಸಿ ಫೇಷಿಯಲ್ಸ್ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಹಿಮಾಲಯ ಕಂಪನಿಯ ಕಾರ್ಪೊರೇಟ್ ಕಮ್ಯುನಿಕೇಷನ್ ಅಧಿಕಾರಿ ರಾಧಿಕ ಅವರು ಮಾದ್ಯಮದೊಂದಿಗೆ ಮಾತನಾಡಿ, ಚರ್ಮದ ಬಗ್ಗೆ ಚಿಕ್ಕ ವಯಸ್ಸಿನಲ್ಲಿಯೇ ಎಚ್ಚರಿಕೆ ವಹಿಸುವುದರಿಂದ ವಯಸ್ಸಾಗುವಿಕೆಯ ಪರಿಣಾಮ ಕಡಿಮೆಯಾಗುತ್ತದೆ ಮತ್ತು ನೀವು ಆಕರ್ಷಕವಾಗಿ ಕಾಣುತ್ತೀರಿ. ಚರ್ಮದ ಆರೈಕೆ ಎಂದರೆ ಕ್ಲೀನ್ಸಿಂಗ್, ಮಾಯಿಶ್ಚರೈಸಿಂಗ್ ಮತ್ತು ಟೋನಿಂಗ್ ಮಾತ್ರವಲ್ಲ. ಇದು ನಿಮ್ಮ ಒತ್ತಡದ ಕೆಲಸಗಳ ನಡುವೆ ನಿಮ್ಮ ಚರ್ಮದ ಉತ್ತಮಗೊಳಿಸಲು ಸಮಯ ವ್ಯಯಿಸುವುದು. ಇದನ್ನು ಮನಸ್ಸಿನಲ್ಲಿರಿಸಿಕೊಂಡು ಹಿಮಾಲಯ `ಅಟ್ ಹೋಮ್’ ಪ್ಯೂರ್ ಸ್ಕಿನ್ ಫೇಷಿಯಲ್ ಕಿಟ್ ಅನ್ನು ಬಿಡುಗಡೆ ಮಾಡಿದ್ದು ಇದು ನಿಮ್ಮ ಮನೆಯಲ್ಲಿಯೇ ನೀವು ಬಯಸಿದ ಚರ್ಮ ಪಡೆದುಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಸೌಂದರ್ಯ ತಜ್ಞೆ ಹಾಗೂ ಸೇಂಟ್ ಆಗ್ನೆಸ್ ಕಾಲೇಜಿನ ಹಳೆ ವಿದ್ಯಾರ್ಥಿನಿಯೂ ಆಗಿರುವ ಚೇತನಾ ಅವರು ಮಾತನಾಡಿ, `ನಿಮ್ಮ ಚರ್ಮ ನಿಮ್ಮ ಆರೋಗ್ಯದ ನೈಜ ಪ್ರತಿಫಲನ, ನಾವು ನಡೆಸುವ ಒತ್ತಡದ ಜೀವನದಲ್ಲಿ ವಾರಕ್ಕೊಮ್ಮೆ ಡೀಪ್ ಕ್ಲೀನ್ಸಿಂಗ್ ಫೇಷಿಯಲ್‌ನಿಂದ ಚರ್ಮದ ಆರೈಕೆ ಮಾಡುವುದು ಮುಖ್ಯ. ಯುವತಿಯರು ಸಮಯದ ಒತ್ತಡದಲ್ಲಿರುತ್ತಾರೆ ಮತ್ತು ಹಿಮಾಲಯದ `ಅಟ್ ಹೋಮ್’ ಫೇಷಿಯಲ್ ಕಿಟ್ ನಿಮ್ಮ ಚರ್ಮಕ್ಕೆ ಆರೈಕೆ ಮತ್ತು ಪೋಷಣೆಯನ್ನು ಯಾವುದೇ ಸ್ಪಾ ಅಥವಾ ಬ್ಯೂಟಿ ಪಾರ್ಲರ್‌ಗೆ ಹೋಗದೆ ನೀಡುತ್ತದೆ’ ಎಂದರು.
ಆಯುರ್ವೇದದ ನೈಸರ್ಗಿಕ ವಿಜ್ಞಾನದಿಂದ ಉನ್ನತಗೊಂಡ ಹಿಮಾಲಯದ ಉತ್ಪನ್ನಗಳು ಚರ್ಮದ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ ಎಂದು ಸಾಬೀತಾಗಿದೆ. ಡೀಪ್ ಕ್ಲೀನ್ಸಿಂಗ್ ಫೇಷಿಯಲ್ ನಂತರ ಮಸಾಜ್‌ನಿಂದ ಅಶುದ್ಧತೆ, ರಂಧ್ರಗಳು ಮತ್ತು ಟಾಕ್ಸಿನ್‌ಗಳನ್ನು ನಿವಾರಿಸುವುದಲ್ಲದೆ ಚರ್ಮವನ್ನು ನವೋತ್ಸಾಹ ಮತ್ತು ಪುನರ್ ಯೌವನಯುಕ್ತವಾಗಿಸುತ್ತವೆ ಎಂದು ಚೇತನಾ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 0824 – 4250454 ದೂರವಾಣಿ ನಂಬ್ರವನ್ನು ಸಂಪರ್ಕಿಸುವಂತೆ ಕೋರಲಾಗಿದೆ.