ಕನ್ನಡ ವಾರ್ತೆಗಳು

ಪಬ್ಲಿಕ್ ಪರೀಕ್ಷೆ ಉಳ್ಳಾಲ ಸಯ್ಯಿದ್ ಮದನಿ ಮದ್ರಸ ಉತ್ತಮ ಫಲಿತಾಂಶ.

Pinterest LinkedIn Tumblr

ullala_student_result

ಉಳ್ಳಾಲ ಜುಲೈ.29: ಸಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ (ರಿ) ಅಧೀನದ ಮದ್ರಸಗಳು 2014-15 ನೇ ಸಾಲಿನ ಶೈಕ್ಷಣಿಕ ವರ್ಷದ ಫಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ. 5 ನೇ ತರಗತಿಯಲ್ಲಿ ಕಲ್ಲಾಪು ಮಿಫ್ತಾಹುಲ್ ಉಲೂಮ್ ಮದ್ರಸ ಕಲ್ಲಾಪು ವಿದ್ಯಾರ್ಥಿ ಮುಹಮ್ಮದ್ ತಮೀಮ್ 554  ಅಂಕ ಪಡೆದು ಟ್ರಸ್ಟ್ ಅಧೀನದ ಮದ್ರಸಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಮುಕ್ಕಚ್ಚೇರಿ ಅಲ್ ಮುಬಾರಕ್ ಮದ್ರಸ ವಿದ್ಯಾರ್ಥಿನಿ ಫಾತಿಮತುಲ್ ಫಹೀಮಾ 539 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾಳೆ.

7ನೇ ತರಗತಿಯಲ್ಲಿ ಕಲ್ಲಾಪು ಮಿಫ್ತಾಹುಲ್ ಉಲೂಮ್ ಮದ್ರಸ ವಿಧ್ಯಾರ್ಥಿನಿ ಅನಾನ್ ಫಾತಿಮ 494 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾಳೆ, ಕೋಡಿ ಹಿದಾಯತುಸ್ಸಿಬಿಯಾನ್ ಮದ್ರಸ ವಿದ್ಯಾರ್ಥಿನಿ ಆಮಿನ ರುಪೈದ 474 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾಳೆ.

10 ನೇ ತರಗತಿಯಲ್ಲಿ ಮದನಿ ನಗರ ಖುವ್ವತುಲ್ ಇಸ್ಲಾಮ್ ಮದ್ರಸ ವಿದ್ಯಾರ್ಥಿನಿ ತನ್‌ವೀರ 272 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾಳೆ. ಅಕ್ಕರೆಕರೆ ಜನ್ನತುಲ್ ಉಲೂಮ್ ಮದ್ರಸ ವಿದ್ಯಾರ್ಥಿ ಸಲ್‌ಮಾನ್ ಫಾರಿಸ್ 257  ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಎಂದು ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ (ರಿ) ಅಧ್ಯಕ್ಷ ಹಾಜಿ ಯು.ಎಸ್ ಹಂಝರವರು ತಿಳಿಸಿದ್ದಾರೆ.

Write A Comment