ಕನ್ನಡ ವಾರ್ತೆಗಳು

ಶ್ರೀವರ ಗೋಲ್ಡ್ ಸ್ಕೀಂ ಮೂಲಕ 1.75 ಕೋಟಿ ರೂ.ವಂಚನೆ ಪ್ರಕರಣ : ಶ್ರೀವರ ಜುವೆಲ್ಲರ್ಸ್ ಮಾಲೀಕ ನಾಪತ್ತೆ – ಪುತ್ರ ಸೆರೆ

Pinterest LinkedIn Tumblr

Shrivara_Skim_arest_1

ಪುತ್ತೂರು : ಮಾಸಿಕ ಕಂತು ಕಟ್ಟುವ ಗೋಲ್ಡ್ ಸ್ಕೀಂ ನಡೆಸಿ ಕೋಟಿಗಟ್ಟಲೆ ಹಣ ವಂಚಿಸಿ ಪರಾರಿಯಾದ ಪುತ್ತೂರಿನ ಶ್ರೀವರ ಜುವೆಲ್ಲರ್ಸ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಧಾನ ಆರೋಪಿ, ಜುವೆಲ್ಲರ್ಸ್ ಮಾಲೀಕ ಬಾಲಕೃಷ್ಣ ಭಟ್ ಇನ್ನೂ ನಾಪತ್ತೆಯಾಗಿರುವ ನಡುವೆಯೇ ಆತನ ಪುತ್ರ ವರದೇಶ್‌ನನ್ನು ಪುತ್ತೂರು ಪೊಲೀಸರು ಬಂಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದ 25 ದಿನಗಳ ಬಳಿಕ ಒಬ್ಬನ ಬಂಧನವಾಗಿದ್ದು, ಇದೀಗ ಪೊಲೀಸರು ಪ್ರಧಾನ ಆರೋಪಿ ಬಾಲಕೃಷ್ಣ ಭಟ್ ಶೋಧನೆಯಲ್ಲಿದ್ದಾರೆ.

ಜು.3ರಂದು ವಂಚನಾ ಜಾಲ ಬೆಳಕಿಗೆ ಬಂದಿತ್ತು. ಪುತ್ತೂರಿನ ಪುನೀತ್ ಎಂಬವರು ಪೊಲೀಸ್ ದೂರು ನೀಡಿದ್ದರು. ಇದರ ಬೆನ್ನಲ್ಲೇ ಜುವೆಲ್ಲರ್ಸ್ ಮಾಲೀಕ ಬಾಲಕೃಷ್ಣ ಭಟ್ ತನ್ನ ಕುಟುಂಬ ಸಮೇತ ಪರಾರಿಯಾಗಿದ್ದು, ಜುವೆಲ್ಲರ್ಸ್‌ನ ಪುತ್ತೂರು, ಸುಳ್ಯ ಮತ್ತು ಮಡಿಕೇರಿ ಮಳಿಗೆ ಬಂದ್ ಮಾಡಲಾಗಿತ್ತು. ಈ ನಡುವೆ ಪುತ್ತೂರು ಪೊಲೀಸರು ಪುತ್ತೂರಿನ ಮಳಿಗೆಯನ್ನು ಒಂದು ವಾರ ಕಾಲ ಮಹಜರು ನಡೆಸಿ ಮಳಿಗೆಗೆ ಬೀಗ ಜಡಿದಿದ್ದರು.

ಈ ಸಂದರ್ಭ ವರದೇಶ್‌ನ ಪಾಸ್‌ಪೋರ್ಟ್ ಸಿಕ್ಕಿದ್ದು, ಇದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಕಳೆದ 25 ದಿನಗಳಿಂದ ಪೊಲೀಸರಿಗೆ ಯಾವುದೇ ಸುಳಿವು ನೀಡದೇ ಬಚ್ಚಿಟ್ಟುಕೊಂಡಿದ್ದ ವರದೇಶ್ ಕೊನೆಗೂ ಕುಶಾಲನಗರದಲ್ಲಿ ಇರುವ ಸುಳಿವು ಪೊಲೀಸರಿಗೆ ಸಿಕ್ಕಿದ್ದು, ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾರ್ಗದರ್ಶನದಂತೆ ಪೊಲೀಸ್ ತಂಡ ಸೋಮವಾರ ಕುಶಾಲನಗರಕ್ಕೆ ತೆರಳಿತ್ತು. ಮಂಗಳವಾರ ಆರೋಪಿಯೊಂದಿಗೆ ಪುತ್ತೂರಿಗೆ ಬಂದಿದ್ದಾರೆ. ಬಂತನನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

ವರದೇಶ್ ಬಂಧನದೊಂದಿಗೆ ಪ್ರಕರಣದ ತನಿಖೆಗೆ ಪುಷ್ಟಿ ಬಂದಂತಾಗಿದೆ. ಈಗಾಗಲೇ 600ಕ್ಕೂ ಅಕ ಮಂದಿ ನೊಂದ ಗ್ರಾಹಕರು ಪೊಲೀಸ್ ದೂರು ನೀಡಿದ್ದು, ಶ್ರೀವರ ಗೋಲ್ಡ್ ಸ್ಕೀಂ ಮೂಲಕ 1.75 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.

Write A Comment