ಕನ್ನಡ ವಾರ್ತೆಗಳು

ಕರಾವಳಿಯ್ಯಾದಂತ ಎ.ಪಿ.ಜೆ. ಅಬ್ದುಲ್ ಕಲಾಂರಿಗೆ ಭಾವಾ ಪೂರ್ಣ ಶ್ರದ್ಧಾಂಜಲಿ.

Pinterest LinkedIn Tumblr

Jrlobo_kalma_tribute_1

ಮಂಗಳೂರು, ಜುಲೈ.28: ಅಗಲಿದ ಮಹಾನ್ ಚೇತನ, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೂ ನಮ್ಮ ಕರಾವಳಿ ಜಿಲ್ಲೆಗಳಿಗೂ ವಿಶೇಷವಾದ ನಂಟಿತ್ತು.

ಕರ್ನಾಟಕಕ್ಕೆ ಭೇಟಿ ನೀಡಿದಾಗಲೆಲ್ಲ ಕರಾವಳಿ ಭಾಗಕ್ಕೂ ಬಂದು ಹೋಗುತ್ತಿದ್ದರು ಕಲಾಂ. ಮಂಗಳೂರು ನಗರ, ಇಲ್ಲಿನ ಸುತ್ತಮುತ್ತಲ ಪರಿಸರವನ್ನು ಬಹುವಾಗಿ ಇಷ್ಟಪಡುತ್ತಿದ್ದ ಅವರು, ಯಾವುದೇ ಸಮಾರಂಭಕ್ಕೆ ಕರೆದರೂ ನಿರಾಸೆಗೊಳಿಸುತ್ತಿರಲಿಲ್ಲ. ಶಿಕ್ಷಣ ಹಾಗೂ ಸೃಷ್ಟಿಶೀಲ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧನೆ ಮಾಡುತ್ತಿದ್ದೀರಿ ಎಂದು ಕರಾವಳಿಯ ಜನರ ಬೆನ್ನುತಟ್ಟುತ್ತಿದ್ದರು `ಕಲಾಂ ಮೇಸ್ಟ್ರು’.

ದ.ಕ ಜಿಲ್ಲಾ ಹಾಲು ಉತ್ಪಾದಕರ ಸಂಘ ಕುಲಶೇಖರ್ ವತಿಯಿಂದ ಶ್ರದ್ದಾಂಜಲಿ ಅರ್ಪಣೆ: 

Kmf_Kalma_tribut_1 Kmf_Kalma_tribut_2 Kmf_Kalma_tribut_3 Kmf_Kalma_tribut_4 Kmf_Kalma_tribut_5

ಕರಾವಳಿಗೆ ಐದು ಬಾರಿ ಕಲಾಂ ಭೇಟಿ:

ರಾಷ್ಟ್ರಪತಿಯಾಗಿದ್ದಾಗ ಮತ್ತು ಬಳಿಕ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸುಮಾರು ಐದು ಬಾರಿ ನಮ್ಮ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಿಶೇಷ ಉಪನ್ಯಾಸವನ್ನು ಅವರು ನೀಡಿದ್ದರು. 2003ರ ಮಾರ್ಚ್‍ನಲ್ಲಿ ಮಣಿಪಾಲ ಕೆಎಂಸಿಯ ಸ್ವರ್ಣ ಮಹೋತ್ಸವವನ್ನು ಅವರು ಉದ್ಘಾಟಿಸಿದ್ದರು. ನಂತರ 2014ರ ಏ.2ರಂದು ಮಣಿಪಾಲದಲ್ಲಿ ಟ್ಯಾಪ್ಮಿ ಘಟಿಕೋತ್ಸವ, ಬಂಟಕಲ್ಲು ಎಂಜಿನಿಯರಿಂಗ್ ಕಾಲೇಜಿನ ಮೂರು ಬ್ಲಾಕ್‍ಗಳ ಉದ್ಘಾಟನೆಯಲ್ಲಿ ಅವರು ಸಂತಸದಿಂದ ಪಾಲ್ಗೊಂಡಿದ್ದರಲ್ಲದೆ, ವಿದ್ಯಾರ್ಥಿಗಳೊಂದಿಗೆ ತಾಸುಗಳ ಕಾಲ ಸಂವಾದ ನಡೆಸಿದ್ದರು. 2014 ಏಪ್ರಿಲ್‍ನಲ್ಲಿ ಲೋಕಸಭಾ ಚುನಾವಣೆಯ ಮುಂಚಿತವಾಗಿ @h18 = ಒಡನಾಟ ನೆನಪಿಸಿಕೊಂಡ ಡಾ.ವೀರೇಂದ್ರ ಹೆಗ್ಗಡೆ.

Abdul_Kalam_Seminar_1 Abdul_Kalam_Seminar_10 Abdul_Kalam_Seminar_11 Abdul_Kalam_Seminar_12 Abdul_Kalam_Seminar_13 Abdul_Kalam_Seminar_14

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

Abdul_Kalam_udupi_3

ಮೇರು ವ್ಯಕ್ತಿತ್ವದ ಡಾ. ಅಬ್ದುಲ್ ಕಲಾಂ, ಸರ್ವಮಾನ್ಯರು, ಅಜಾತ ಶತ್ರು. ಅವರು ಜ್ಞಾನ ಮತ್ತು ವಿಜ್ಞಾನ ಎರಡರಲ್ಲೂ ಸಾಟಿ ಇಲ್ಲದಂತೆ ಮೆರೆದವರು. ಒಂದು ಕ್ಷಣವೂ ಪೋಲಾಗದಂತೆ ಬದುಕಿದವರು. ಅವರು ಆಯುಷ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡದಲ್ಲದೆ, ಸದುಪಯೋಗ ಪಡಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯಕ್ಕೂ ಆಗಾಗ ಭೇಟಿ ಕೊಡುತ್ತಾ ಕನ್ನಡಿಗರ ಸ್ನೇಹಾಕಾಂಕ್ಷಿಗಳಾಗಿದ್ದರು. ಶ್ರೀ ಕ್ಷೇತ್ರದ ಮೇಲೆ ಅವರಿಗೆ ವಿಶೇಷ ಅಭಿಮಾನ ಹಾಗೂ ಗೌರವನ್ನು ಹೊಂದಿದ್ದರು. ಅವರ ನಿಧನದಿಂದ ಶತಮಾನದ ಶ್ರೇಷ್ಠ ವ್ಯಕ್ತಿಯೋೀರ್ವರನ್ನು ಕಳೆದುಕೊಂಡಿದ್ದೇವೆ ಎಂದು ಡಾ.ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.

Write A Comment