ಕನ್ನಡ ವಾರ್ತೆಗಳು

ಬಿಜೈ ಕಾಪಿಕಾಡ್ : ಬಸ್ಸಿನಡಿಗೆ ಬಿದ್ದ ಬಾಲಕ : ತೀವ್ರ ರಕ್ತಸ್ತ್ರಾವ – ರಕ್ತಕಾಗಿ ವೈದ್ಯರ ಹುಡುಕಾಟ

Pinterest LinkedIn Tumblr

Cycle_Bus_axident_1

ವರದಿ/ ಚಿತ್ರ : ಸತೀಶ್ ಕಾಪಿಕಾಡ್.

ಮಂಗಳೂರು,ಜುಲೈ.28 : ಬಾಲಕನ ನಿಯಂತ್ರಣ ತಪ್ಪಿದ ಸೈಕಲ್ ರಸ್ತೆ ವಿಭಾಜಕಕ್ಕೆ ಬಡಿದು ರಸ್ತೆಗೆ ಬಿದ್ದ ಬಾಲಕನ ಸೊಂಟದ ಕೆಳ ಭಾಗದ ಮೇಲಿನಿಂದ ಬಸ್ ಚಲಿಸಿದ ಪರಿಣಾಮ ಬಾಲಕನ ಎರಡೂ ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಬಿಜೈ ಕಾಪಿಕಾಡ್‌ನ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ.

ಹ್ಯಾಟ್‌ಹಿಲ್ ನಿವಾಸಿ ಅಮೋಗ್ ಶೆಟ್ಟಿ (13) ಎಂಬ ಬಾಲಕ ತನ್ನ ಸೈಕಲ್ ನಲ್ಲಿ ಹ್ಯಾಟ್‌ಹಿಲ್‌ನಿಂದ ( ಇಳಿಜಾರು ರಸ್ತೆಯಲ್ಲಿ) ಬಿಜೈ ಕಾಪಿಕಾಡ್‌ನ ಮೈಸೂರು ಬ್ಯಾಂಕ್ ಮುಂಭಾಗದ ಮುಖ್ಯ ರಸ್ತೆಗೆ ಬರುತ್ತಿದ್ದಾಗ ವೇಗವಾಗಿ ಬಂದ ಸೈಕಲ್ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಬಡಿದು ಬಾಲಕ ರಸ್ತೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಅದೇ ಸಂದರ್ಭದಲ್ಲಿ ಬಿಜೈ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಬಜ್ಪೆ ಕಡೆಗೆ ಸಾಗುತ್ತಿದ್ದ 47 ನಂಬ್ರದ ಕೃಷ್ಣ ಪ್ರಸಾದ್ ಬಸ್ಸಿನ ಮುಂದಿನ ಚಕ್ರ ಈ ಬಾಲಕನ ಎರಡೂ ಕಾಲಿನ ಮೇಲೆ ಚಲಿಸಿದ ಪರಿಣಾಮ ಗಂಭೀರ ಗಾಯಗೊಂಡ ಬಾಲಕನ ದೇಹದಿಂದ ವಿಪರಿತ ರಕ್ತಸ್ತ್ರಾವ ಉಂಟಾಗಿದೆ.

Cycle_Bus_axident_2 Cycle_Bus_axident_3 Cycle_Bus_axident_4 Cycle_Bus_axident_5 Cycle_Bus_axident_6 Cycle_Bus_axident_7 Cycle_Bus_axident_8 Cycle_Bus_axident_9 Cycle_Bus_axident_10 Cycle_Bus_axident_11 Cycle_Bus_axident_12 Cycle_Bus_axident_13 Cycle_Bus_axident_14 Cycle_Bus_axident_15 Cycle_Bus_axident_16 Cycle_Bus_axident_17 Cycle_Bus_axident_18 Cycle_Bus_axident_19 Cycle_Bus_axident_20 Cycle_Bus_axident_21 Cycle_Bus_axident_22 Cycle_Bus_axident_23 Cycle_Bus_axident_24

ಗಂಭೀರವಾಗಿ ಗಾಯಗೊಂಡ ಬಾಲಕನನ್ನು ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಸಮೀಪದ ಎ.ಜೆ.ಆಸ್ಪತ್ರೆಗೆ ದಾಖಾಲಿಸಿದ್ದಾರೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾಲಕನಿಗೆ ರಕ್ತ ಕೊಡಲು ಮುಂದೆ ಬನ್ನಿ..

ಅಪಘಾತದಲ್ಲಿ ಬಾಲಕನ ದೇಹದಿಂದ ತೀವ್ರ ರಕ್ತಸ್ತ್ರಾವ ಉಂಟಾದ ಕಾರಣ ಬಾಲಕನಿಗೆ ಹೆಚ್ಚಿನ ಪ್ರಮಾಣದ ( O – ) ಒ – ನೆಗೆಟಿವ್ ರಕ್ತ ಅವಶ್ಯಕತೆ ಇದ್ದು, ವೈದ್ಯರು ನಗರದ ಎಲ್ಲಾ ಆಸ್ಪತ್ರೆಗಳನ್ನು ಸಂಪರ್ಕಿಸಿದ್ದಾರೆ. ಬಾಲಕನ ಪ್ರಾಣ ಉಳಿಸಲು ವೈದ್ಯರು ನಿರಂತರ ಪ್ರಯತ್ನದಲ್ಲಿ ತೊಡಗಿದ್ದು, ಯಾರಾದರೂ ದಾನಿಗಳು ರಕ್ತ ನೀಡುವುದಾದರೆ ತಕ್ಷಣ ಎ.ಜೆ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

1 Comment

  1. Hello sir;
    Im having 0-ve blood and I would like to donate….my decision may help a kid to live his life….please call up on 9028442250
    Problem is that im working at pune…

Write A Comment