ಮಂಗಳೂರು,ಜುಲೈ.21 : ಸುರತ್ಕಲ್ ಶ್ರೀ ಶಾರದಾ ಸೇವಾ ಟ್ರಸ್ಟ್ ಸುರತ್ಕಲ್ (ರಿ) ಸಾರ್ವಜನಿಕ ಶ್ರೀ ಶಾರದಾ ಮಾತೃ ಮಂಡಳಿ ಸುರತ್ಕಲ್, ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಸ್ನಾತಕೋತ್ತರ ಕೇಂದ್ರ, ಮಂಗಳೂರು ಕಲ್ಕೂರ ಪ್ರತಿಷ್ಠಾನ, ಕೊಡಿಯಾಲ್ ಬೈಲು, ಮಂಗಳೂರು ಶ್ರೀಕೃಷ್ಣ ಗೀತಾ ಜ್ಞಾನ ಸಮಿತಿ, ಕದ್ರಿ, ಸಾಹಿತ್ಯ ಕೇಂದ್ರ ಮಂಗಳೂರು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಯಸ್ ಎಲ್.ಶೇಟ್ ಜುವೆಲ್ಲರ್ಸ್ ಮತ್ತು ಡೈಮಂಡ್ ಹೌಸ್ ಮಂಗಳೂರು ಬಲ್ಮಠ ಡಯಾಗ್ನೋಸ್ಟಿಕ್ & ರೀಸರ್ಚ್ ಸೆಂಟರ್ ಮತ್ತು ಬಲ್ಮಠ ಸ್ಕ್ಯಾನ್ ಸೆಂಟರ್ ಬಲ್ಮಠ ಮಂಗಳೂರು ಇವರ ಸಹಯೋಗದಲ್ಲಿ “ಚಂದನ “ ದೂರದರ್ಶನದ ” ಸತ್ಯ ದರ್ಶನ” ಖ್ಯಾತಿಯ ಡಾ. ಪಾವಗಡ ಪ್ರಕಾಶರಾಯರಿಂದ ಶ್ರೀಮದ್ಭಗವದ್ಗೀತಾ ಪ್ರವಚನ ಮಾಲೆ -05 ಕಾರ್ಯಕ್ರಮ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಭಾಂಗಣದಲ್ಲಿ ತಾ.26.07.2015 ನೇ ರವಿವಾರದಿಂದ ತಾ.02-08-2015 ನೇ ರವಿವಾರ ತನಕ 8 ದಿನಗಳ ಕಾಲ ಪ್ರತಿದಿನ ಸಂಜೆ ಗಂಟೆ 6 ರಿಂದ 7.45ರ ತನಕ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಅವರು ತಿಳಿಸಿದ್ದಾರೆ.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.26.07.2015 ನೇ ರವಿವಾರ ಸಂಜೆ ಗಂಟೆ 6ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಇದರ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ವಹಿಸಲಿದ್ದಾರೆ. ಪ್ರವಚನ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ(ರಿ) ಉಜಿರೆ ಇದರ ಕಾರ್ಯದರ್ಶಿ ಶ್ರೀ ಡಿ. ಹರ್ಷೇಂದ್ರ ಕುಮಾರ್, ಇವರು ಉದ್ಘಾಟಿಸಲಿದ್ದಾರೆ ಎಂದರು.
ಕರ್ನಾಟಕ ಬ್ಯಾಂಕ್ ನ ಮುಖ್ಯ ಜನರಲ್ ಮೇನೇಜರ್ ಶ್ರೀ ಎಂ.ಯಸ್ ಮಹಾಬಲೇಶ್ವರ ಭಟ್, ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀ ಯಂ.ಬಿ.ಪುರಾಣಿಕ್, ಯಸ್.ಎಲ್.ಶೇಟ್ ಜುವೆಲ್ಲರ್ಸ್ ಮತ್ತು ಡೈಮಂಡ್ ಹೌಸ್ ನ ಮಾಲಕ ಯಂ ಪ್ರಶಾಂತ್ ಶೇಟ್, ಬಲ್ಮಠ ಡಯಗ್ನೋಸ್ಟಿಕ್ & ರೀಸರ್ಚ್ ಸೆಂಟರ್ ನ ಚೇಯರ್ ಮ್ಯಾನ್ ಡಾ.ಐ.ಜಿ.ಭಟ್, ಮತ್ತು ಸುಧಾರಕ್ ರಾವ್ ಪೇಜಾವರ ಮುಂತಾದವರು ಅಥಿಗಳಾಗಿ ಭಾಗವಹಿಸಿಲಿರುವರು ಎಂದು ಅವರು ವಿವರಿಸಿದರು.
ತಾ.27-07-2015 ರಿಂದ 02-08-2015 ರ ತನಕ ಸಂಜೆ ಗಂಟೆ 6ಕ್ಕೆ ದಿನಕ್ಕೆ ಇಬ್ಬರು ಗಣ್ಯವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ , ದೀಪ ಬೆಳಗಿಸಿ ಶುಭ ಹಾರೈಸಲಿರುವರು, ದಿನಾಂಕ 02-08-2015 ರಂದು ಸಮಾರೋಪ ಸಮಾರಂಭ ಜರಗಲಿದ್ದು ಧರ್ಮದರ್ಶಿ ಹರಿಕೃಷ್ಣ ಪುನರೂರು ರವರು ಅಧ್ಯಕ್ಷತೆ ಹಾಗೂ ಡಾ.ಬಿ.ಯಶೋವರ್ಮ ಮತ್ತು ಡಾ.ರಾಘವೇಂದ್ರ ಭಟ್ ಕೆ ಇವರು ಮುಖ್ಯ ಅಥಿತಿಗಳಾಗಿರುತ್ತಾರೆ ಎಂದು ಕಲ್ಕೂರ ತಿಳಿಸಿದರು.
ಪೂರಕ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು, ಪ್ರತಿದಿನ ಸಂಜೆ ಗಂಟೆ 5 ರಿಂದ 6 ತನಕ ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮವು ಇರುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುರತ್ಕಲ್ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಎನ್.ಕೃಷ್ಣ ಶೆಟ್ಟಿ, ಸುರತ್ಕಲ್ ಶ್ರೀ ಶಾರದಾ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ರಾಮ ರಾವ್ , ಜನಾರ್ಧನ ಮುಂತಾದವರು ಉಪಸ್ಥಿತರಿದ್ದರು.


