ಮನೋರಂಜನೆ

ಬೆಂಗಳೂರು ಸೇರಿ 8 ಕಡೆ ಟಿ20 ವಿಶ್ವ ಕಪ್ ಪಂದ್ಯ

Pinterest LinkedIn Tumblr

cricket

ಹೊಸದಿಲ್ಲಿ: ಬೆಂಗಳೂರು ಸೇರಿ ಎಂಟು ಕಡೆಗಳಲ್ಲಿ 2016ರ ಐಸಿಸಿ ಟ್ವೆಂಟಿ20 ವಿಶ್ವ ಕಪ್‌ ಪಂದ್ಯಾವಳಿಗಳು ನಡೆಯಲಿವೆ, ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಪ್ರಾಧಿಕಾರ (ಬಿಸಿಸಿಐ) ಘೋಷಿಸಿದೆ. ಪಂದ್ಯಗಳ ದಿನಾಂಕಗಳಿನ್ನೂ ನಿರ್ಧಾರವಾಗಿಲ್ಲ.

ಮಾರ್ಚ್ 11ರಿಂದ ಏಪ್ರಿಲ್ 3ರವರೆಗೆ ಬೆಂಗಳೂರು, ಚೆನ್ನೈ, ಧರ್ಮಶಾಲಾ, ಮೊಹಾಲಿ, ಮುಂಬಯಿ, ನಾಗ್ಪುರ ಮತ್ತು ಹೊಸದಿಲ್ಲಿಯಲ್ಲಿ ಪಂದ್ಯಗಳು ನಡೆಯಲಿವೆ. ದೇಶದ ಪುರಾತನ ಕ್ರಿಕೆಟ್ ಕ್ರೀಡಾಂಗಣವಾದ ಈಡನ್ ಗಾರ್ಡನ್‌ನಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಈ ಕ್ರೀಡಾಂಗಣದಲ್ಲಿ ಈಗಾಗಲೇ ಮೂರು ಅಂತಾರಾಷ್ಟ್ರೀಯ ಟಿ20 ಸೇರಿ ಅನೇಕ ಪ್ರತಿಷ್ಠಿತ ಪಂದ್ಯಗಳು ನಡೆದಿವೆ.

ಪಂದ್ಯ ನಡೆಯುವ ಸ್ಥಳಗಳನ್ನು ಘೋಷಿಸಿದ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ‘ಇಂಥದ್ದೊಂದು ಪ್ರತಿಷ್ಠಿತ ಪಂದ್ಯದ ಆತಿಥ್ಯ ವಹಿಸುತ್ತಿರುವುದಕ್ಕೆ ಬಿಸಿಸಿಐಗೆ ಹೆಮ್ಮೆ ಎನಿಸುತ್ತಿದೆ. ಈಗಾಗಲೇ ಪಂದ್ಯಾವಳಿಗೆ ತಕ್ಕ ತಯಾರಿ ನಡೆಸಲಾಗುತ್ತಿದೆ. ಈ ಪಂದ್ಯವನ್ನು ಸ್ಮರಣೀಯವಾಗಿಸಲು ಬಿಸಿಸಿಐ ಸಕಲ ಸಿದ್ಧತೆಗಳನ್ನೂ ನಡೆಸಲಿದೆ,’ ಎಂದರು.

Write A Comment