ಕನ್ನಡ ವಾರ್ತೆಗಳು

20 ದಿನದ ಮಗು ಹಾಗೂ ಬಾಣಂತಿ ಸೇರಿದಂತೆ ಹಲವರ ರಕ್ಷಣೆ; ಮಾನವೀಯತೆ ಮೆರೆದ ಪೊಲೀಸ್, ಅಗ್ನಿಶಾಮಕ ದಳ, ಹಾಗೂ ಸಂಘಟನೆಗಳು

Pinterest LinkedIn Tumblr

ಕುಂದಾಪುರ: ಭಾನುವಾರ ರಾತ್ರಿ ಸುಮಾರಿಗೆ ಉಡುಪಿ ತಾಲೂಕಿನ ಶಿರಿಯಾರ ಕೊಳ್ಕೆಬೈಲು ಎಂಬಲ್ಲಿ ಕೆಲವು ಮನೆಗಳು ನೆರೆಯಿಂದ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿತ್ತು.

ಈ ಹಿನ್ನೆಲೆಯಲ್ಲಿ ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಹಾಯಕ್ಕಾಗಿ ತೆಕ್ಕಟ್ಟೆ ಫ್ರೆಂಡ್ಸ್‌ಗೆ ಕರೆಮಾಡಿದ್ದು ಕೂಡಲೇ ದೋಣಿ ವ್ಯವಸ್ಥೆ ಮಾಡಿಕೊಂಡು ತಮ್ಮ ‘ಗೆಳೆಯ’ ಆಂಬುಲೆನ್ಸ್‌ನ್ನು ತೆಗೆದುಕೊಂಡು ಇವರ ತಂಡ ಕೊಳ್ಕೆಬೈಲಿಗೆ ತೆರಳಿದೆ. ಅಷ್ಟೊತ್ತಿಗಾಗಲೇ ಪೊಲೀಸರು ಹಾಗೂ ಅಗ್ನಿಶಾಮಕದಳ ಕಾರ್ಯನ್ಮುಖರಾಗಿದ್ದು ದೋಣಿಯ ಮೂಲಕ ಸಂಘದ ಸದಸ್ಯರು ರಕ್ಷಣಾ ಕಾರ್ಯಾಚರಣೆಗೆ ಮುಂದಾಗುತ್ತಾರೆ.

Kolkebailu_Child_Rescue (11) Kolkebailu_Child_Rescue (4)

Kolkebailu_Child_Rescue (7) Kolkebailu_Child_Rescue (8)

Kolkebailu_Child_Rescue (9) Kolkebailu_Child_Rescue (5) Kolkebailu_Child_Rescue (10)

Kolkebailu_Child_Rescue (2) Kolkebailu_Child_Rescue Kolkebailu_Child_Rescue (3) Kolkebailu_Child_Rescue (1)

ಈ ಸಂದರ್ಭ 20 ದಿನಗಳ ಹಸುಗೂಸು, ಬಾಣಂತಿ ತಾಯಿ, 80 ವರ್ಷದ ವೃದ್ಧೆ, 4 ವರ್ಷದ ಮಗು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರನ್ನು ದೋಣಿ ಮೂಲಕ ಕರೆತಂದು ಸುರಕ್ಷಿತ ಸ್ಥಳಕ್ಕೆ ಅವರನ್ನು ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಿಗ್ಗೆ ೪ ಗಂಟೆವರೆಗೂ ಈ ರಕ್ಷಣಾ ಕಾರ್ಯ ಮುಂದುವರೆದಿದ್ದು ಕುಂದಾಪುರ ಅಗ್ನಿಶಾಮಕ ದಳ, ಕೋಟ ಪೊಲೀಸರು, ತೆಕ್ಕಟ್ಟೆ ಫ್ರೆಂಡ್ಸ್ ತೆಕ್ಕಟ್ಟೆ (ರಿ.) ಇದರ ಸದಸ್ಯರು, ಜೈ ಭಾರ್ಗವ ಸಂಘದವರು ಇದ್ದರು.

Write A Comment