ಕನ್ನಡ ವಾರ್ತೆಗಳು

ವಾಟ್ಸಾಪ್ ವಿಡಿಯೊ ಅವಾಂತರ: ಅಪ್ರಾಪ್ತೆಯ ಅಶ್ಲೀಲ ವಿಡಿಯೊ ರವಾನೆ, ಬ್ಲ್ಯಾಕ್‌ಮೇಲ್; ಪೋಕ್ಸೋ ಕಾಯ್ದೆಯಡಿ ನಾಲ್ವರ ಬಂಧನ

Pinterest LinkedIn Tumblr

ಕುಂದಾಪುರ: ಅಪ್ರಾಪ್ತ ವಯಸ್ಸಿನ ಯುವತಿಯನ್ನು ಬೆದರಿಸಿ ಆಕೆಯ ಅಶ್ಲೀಲ ದೃಶ್ಯಗಳ ವಿಡಿಯೋ ಪಡೆದು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಲ್ಲದೇ ಈ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣವಾದ ವಾಟ್ಸಾಪ್‌ನಲ್ಲಿ ಸ್ನೇಹಿತರಿಗೆ ರವಾನಿಸಿದ ಇಬ್ಬರು ಹಾಗೂ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಸೇರಿದಂತೆ ಒಟ್ಟು ನಾಲ್ವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿಗಳಾದ ಕೋಟ ನಿವಾಸಿಗಳಾದ ಗಣೇಶ ಮೊಗವೀರ (27), ನಾಗರಾಜ್ (25), ಶ್ರೀನಿವಾಸ್ (23) ಹಾಗೂ ಹರೀಶ್ (26) ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿತ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಆಟೋ ರಿಕ್ಷಾ ಚಾಲಕರೆಂಬ ಬಗ್ಗೆ ಮಾಹಿತಿಯಿದೆ.

Kota_Pocso Case_Four Arrest.

(ಗಣೇಶ್, ನಾಗರಾಜ್, ಶ್ರೀನಿವಾಸ್)

Kota_Pocso Case_Four Arrest,

Kota_Pocso Case_Four Arrest, (2)

Kota_Pocso Case_Four Arrest, (1)

ಘಟನೆ ವಿವರ: ಕೋಟ ಸಮೀಪದ ತನ್ನ ದೂರದ ಸಂಬಂಧಿಯಾದ ಅಪ್ರಾಪ್ತೆ ಯುವತಿಯೋರ್ವಳೊಂದಿಗೆ ಕೋಟದ ನಿವಾಸಿ ಗಣೇಶ್ ಎಂಬಾತ ಕಳೆದ ಒಂದೂವರೆ ವರ್ಷದಿಂದ ಪ್ರೀತಿಯ ನಾಟಕವಾಡಿದ್ದ. ಹಿಗೆಯೇ ಪ್ರೀತಿಯ ನಾಟಕವಾಡಿದ ಗಣೇಶ್ ಅದ್ಯೇಗೋ ಆಕೆಗೆ ಮರಳು ಮಾಡಿ ತೆಗಿಸಿಕೊಂಡ ಆಕೆಯೊಂದಿಗಿದ್ದ ಫೋಟೋವನ್ನು ತನ್ನ ಗೆಳೆಯನಾದ ನಾಗರಾಜ ಎಂಬಾತನಿಗೆ ತೋರಿಸಿದ್ದು ಈ ಫೋಟೋ ವಿಚಾರನವನ್ನಿಟ್ಟುಕೊಂಡು ನಾಗರಾಜ್ ಈ ಅಪ್ರಾಪ್ತೆ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ ಆಕೆಯ ಸಲುಗೆ ಬೆಳೆಸಿದ್ದ. ಈ ನಡುವೆಯೇ ಗಣೇಶ ಹಾಗೂ ಆ ಅಪ್ರಾಪ್ತೆಯ ಪ್ರೇಮ ಮುರಿದುಬಿದ್ದಿತ್ತು. ಆಕೆ ನಾಗರಾಜ ಮಾಡಿದ ಬ್ಲ್ಯಾಕ್‌ಮೇಲ್ ಕಾರಣಕ್ಕಾಗಿಯೇ ನಾಗರಾಜನೊಂದಿಗೆ ಆತ್ಮೀಯತೆಯಿಂದಿದ್ದು, ಈ ನಡುವೆಯೇ ನಾಗರಾಜ್ ಹಾಗೂ ಗಣೇಶ್ ಒಟ್ಟು ಸೇರಿ ಇವಳ ಅಶ್ಲೀಲ ಚಿತ್ರ ರವಾನಿಸುವಂತೆ ಬೆದರಿಕೆಯೊಡ್ಡಿದ್ದರು ಅಲ್ಲದೇ ಮನೆಯವರಲ್ಲಿಯೇ ಹೇಳಿದರೇ ಎಲ್ಲಾ ವಿಚಾರವನ್ನು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಹಾಕುವುದಾಗಿಯೂ ಬೆದರಿಸಿದ್ದರು. ಇದರಿಂದ ಹೆದರಿದ ಯುವತಿ ಗಣೇಶ್ ಎಂಬಾತನಿಗೆ ತನ್ನ ವಿಡಿಯೋವನ್ನು ವಾಟ್ಸಾಫ್ ಮೂಲಕ ಕಳುಹಿಸಿದ್ದು ತದನಂತರ ಗಣೇಶ ಅದನ್ನು ನಾಗರಾಜ್ ಸೇರಿದಂತೆ ಹತ್ತಾರು ಜನರಿಗೆ ರವಾನಿಸಿ ಕೆಲವು ವಾಟ್ಸಾಪ್ ಗ್ರೂಪ್‌ಗಳಿಗೆ ಕಳುಹಿಸಿದ್ದ. ಈ ವಿಡೀಯೋ ನೋಡಿದ ಶ್ರೀನಿವಾಸ ಮತ್ತು ಹರೀಶ್ ಎಂಬಿಬ್ಬರು ಆಕೆಗೆ ಮತ್ತಷ್ಟು ಬ್ಲ್ಯಾಕ್‌ಮೇಲ್ ಮಾಡಿ ತಮ್ಮೊಡನೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ. ಈ ವಿಚಾರ ತಿಳಿದರೂ ಕೂಡ ಯುವತಿ ಕಳೆದ ಒಂದೂವರೆ ತಿಂಗಳುಗಳಿಂದ ಮನೆಯಲ್ಲಿ ಯಾವುದೇ ವಿಚಾರವನ್ನು ತಿಳಿಸದೇ ಮರೆಮಾಚಿದ್ದಳು. ಈ ನಡುವೆ ಯುವತಿಯ ಸಹೋದರನಿಗೆ ಸ್ನೇಹಿತನೋರ್ವ ಈ ವಾಟ್ಸಾಪ್ ವಿಡಿಯೋ ಅವಾಂತರದ ಬಗ್ಗೆ ಗಮನಕ್ಕೆ ತಂದಿದ್ದು ಆಕೆಯ ಸಹೋದರ ಮನೆಯಲ್ಲಿ ಈಕೆಯನ್ನು ವಿಚಾರಿಸುವಾಗ ಸತ್ಯಾಂಶ ತಿಳಿದಿದೆ.

ಕೂಡಲೇ ಎಚ್ಚೆತ್ತುಕೊಂಡ ಯುವತಿಯ ಪೋಷಕರು ಕೋಟ ಪೊಲೀಸರ ಮೊರೆಹೋಗಿದ್ದು, ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ನಾಜೂಕಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ನಾಲ್ವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ವಾಟ್ಸಾಪ್ ಅವಾಂತರದ ಪ್ರಕರಣದಲ್ಲಿ ಇನ್ನು ಕೆಲವು ಕಿಡಿಗೇಡಿಗಳ ಪಾತ್ರವಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಿಯುಸಿ ವಿದ್ಯಾಭ್ಯಾಸದ ಬಳಿಕ ಮನೆಯಲ್ಲಿಯೇ ಇದ್ದ ಈ ಯುವತಿ ಬಡ ಕುಟುಂಬದವಳಾಗಿದ್ದು, ಬಂಧಿತ ಆರೋಪಿಗಳ ಪೈಕಿ ಗಣೇಶನೇ ಆಕೆಗೆ ಬಲವಂತವಾಗಿ ಮೊಬೈಲ್ ಖರೀದಿಸಿಕೊಟ್ಟಿದ್ದು ಈ ವಿಚಾರ ಆಕೆಯ ಮನೆಯಲ್ಲಿಯೂ ತಿಳಿದಿರಲಿಲ್ಲ ಎಂದು ಆಕೆ ತನಿಖೆ ವೇಳೆ ತಿಳಿಸಿದ್ದು ಇಬ್ಬರೂ ಬಲವಂತ ಹಾಗೂ ಬೆದರಿಕೆ ಮೂಲಕ ನನ್ನನ್ನು ಅತ್ಯಾಚಾರ ನಡೆಸಿದ್ದಾರೆಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ ಎನ್ನಲಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment