ಉಳ್ಳಾಲ ಜುಲೈ.17: ಪವಿತ್ರ ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಪ್ರವಾಸಿ ದೇರಳಕಟ್ಟೆ ಅನಿವಾಸಿ ಸಂಘಟನೆ ಆಯೋಜಿಸಿದ್ದ ಈದ್ ಕಿಟ್ ವಿತರಣಾ ಸಮಾರಂಭದಲ್ಲಿ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.
ಅನ್ಸಾರುಲ್ ಮುಸ್ಲಿಮೀನ್ ಎಸೋಷಿಯನ್ ದೇರಳಕಟ್ಟೆ ಅಧ್ಯಕ್ಷ ಉಸ್ಮಾನ್ (ಅಲಿಯಬ್ಬ) ದೇರಳಕಟ್ಟೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಬಡವರು ಕೀರಿಮೆಯಿಂದ ಹೊರ ಬರಬೇಕೆಂದು ಕರೆ ನೀಡಿದರು. ಇಸ್ಲಾಂ ಧರ್ಮದಲ್ಲಿ ಹಬ್ಬ ಆಚರಿಸುವಾಗ ಬಡವರು ಕೂಡ ಶ್ರೀಮಂತರಂತೆ ಆಚರಿಸಬೇಕು. ಈ ಹಿನ್ನೆಲೆಯಲ್ಲಿ ಪ್ರವಾಸಿ ದೇರಳಕಟ್ಟೆ ಈದ್ ಕಿಟ್ ವಿತರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಅವರು ಹೇಳಿದರು.
ಕಾರ್ಯದರ್ಶಿ ಅಬ್ದುಲ್ ಖಾದರ್ ರವರು ಸಂಘಟನೆಯ ಸದಸ್ಯರ ತನು, ಮನ, ಧನದಿಂದ ಸಹಕಾರ, ಪರಿಶ್ರಮದಿಂದ ಇಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ನೆರವೆರಲು ಕಾರಣವೆಂದು ಸಂಘಟನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರವಾಸಿ ದೇರಳಕಟ್ಟೆಯ ಊರಿನ ಮೇಲ್ವಿಚಾರಕ , ಬೆಳ್ಮ ಗ್ರಾಮ ನಾಗರಿಕ ಹಿತ ರಕ್ಷಣಾ ವೇದಿಕೆಯ ಕಾಯ೯ದಶಿ೯ ಡಿ ಎ ಅಶ್ರಫ್ ಮಾತನಾಡಿ ನಾಡಿನ ಪ್ರತಿಯೊಬ್ಬ ಬಡ ಮುಸ್ಲಿಂ ಕುಟುಂಬ ಇತರರಂತೆ ಈದುಲ್ ಫಿತ್ರ್ ಆಚರಿಸಲೆಂದು ಸಂಘಟನೆ ನಮ್ಮ ಆಸುಪಾಸಿನ ತೀರ ಬಡ ಕುಟುಂಬವನ್ನು ಆಯ್ದು “ಈದ್ ಕಿಟ್ ” ವಿತರಿಸುತ್ತಿದೆ ಎಂದರು.
ಅಜೀಜ್ ನಾಟೆಕಲ್ , ಪ್ರವಾಸಿ ದೇರಳಕಟ್ಟೆಯ ಅಧ್ಯಕ್ಷ ನಾಸೀರ್ ಅಹ್ಮದ್ , ಕರಾವಳಿ ಟೆಂಟ್ ವಕ್ಸ್೯ ಮಾಲೀಕ ರಶೀದ್ ದೇರಳಕಟ್ಟೆ, ಹನೀಫ್ ದೇರಳಕಟ್ಟೆ, ಹಸನ್.ಡಿ, ಇಸಾಕ್.ಡಿ, ಬಾವುಂಞ, ಹನೀಫ್ ಅಲಿಯಬ್ಬ, ಮೊದಲಾದವರು ಈ ಸಂದಭಱ ಉಪಸ್ಥಿತರಿದ್ದರು.
ಎಸ್ ಎಸ್ ಗಾಯ್ಸ್ ನ ಇರ್ಫಾನ್ ಅಹ್ಮದ್ ಸ್ವಾಗತಿಸಿದರು, ಉಸ್ಮಾನ್ ಎಮ್ ಎಚ್ ಕಾರ್ಯಕ್ರಮ ನಿರೂಪಿಸಿದರು.
