ಕನ್ನಡ ವಾರ್ತೆಗಳು

ಹರ್ಷ ವಾರದ ಅತಿಥಿ ಸಚಿವ ವಿನಯ ಕುಮಾರ್ ಸೊರಕೆ

Pinterest LinkedIn Tumblr

Harsh_varada_athithi

ಮಂಗಳೂರು,ಜುಲೈ.16 : ಮಂಗಳೂರು ಆಕಾಶವಾಣಿಯ ಹರ್ಷ ವಾರದ ಅತಿಥಿಯ 195 ನೇ ಕಾರ್ಯಕ್ರಮದಲ್ಲಿ ಜುಲ್ಯಾ 19 ರಂದು ಬೆಳಿಗ್ಗೆ 8.50ಕ್ಕೆ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಖಾತೆಯ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ಭಾಗವಹಿಸಲಿದ್ದಾರೆ.

ಪುತ್ತೂರಿನಲ್ಲಿ 1985 ರಲ್ಲಿ ತಮ್ಮ 28ನೇ ವಯಸ್ಸಿನಲ್ಲಿ ಶಾಸಕರಾಗಿ ನಂತರ ಎರಡನೇ ಬಾರಿಗೆ 1996ರಲ್ಲಿ ಆಯ್ಕೆ ಹೊಂದಿ ರಾಜಕೀಯ ವರ್ಚಸ್ಸು ಬೆಳೆಸಿಕೊಂಡವರು. 1982 ರಲ್ಲಿ ಎನ್‌ಎಸ್‌ಯು ರಾಜ್ಯ ಘಟಕದ ಅಧ್ಯಕ್ಷ, ಭೂಸುದಾರಣಾ ಚಳವಳಿಯಲ್ಲಿ ದೇವರಾಜ ಅರಸರ ಪಾದಯಾತ್ರೆಯಲ್ಲಿ ಭಾಗವಹಿಸಿ, ಸಿಂಡಿಕೇಟ್ ಬ್ಯಾಂಕಿನ ನಿರ್ದೇಶಕರಾಗಿ, ಎಪಿಸಿಸಿ ಕಾರ್ಯದರ್ಶಿ, ಸೇವಾದಳದ ಉಸ್ತುವಾರಿಯಾಗಿ ದುಡಿದ ಅನುಭವಿ. ಬಳಿಕ ಉಡುಪಿ ಲೋಕಸಭಾ ಸದಸ್ಯರಾಗಿ ಆಯ್ಕೆ ಹೊಂದಿ ಅಭಿವೃದ್ಧಿ ಯೋಜನೆಗಳಿಗೆ ರೂವಾರಿಯಾದವರು. ವಾರಾಹಿ ನೀರಾವರಿ ಯೋಜನೆ, ಕರಾವಳಿ ಪ್ರವಾಸೋಧ್ಯಮ ಹಾಗೂ ಇತರ ಅಭಿವೃದ್ಧಿ ಯೋಜನೆಗಳ ಕರಡು ಸಿದ್ದಪಡಿಸಲು ಶ್ರಮವಹಿಸಿದವರು. ಬಳಿಕ ಕಾಪು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ರಾಜ್ಯ ಸಚಿವ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿ ರಾಜ್ಯಾದ್ಯಾಂತ ಅಭಿವೃದ್ಧಿಗೆ ಹೊಸ ಹೆಜ್ಜೆ ಹಾಕಿದರು. ಸ್ಮಾರ್ಟ್‌ಸಿಟಿ, ಅಮೃತ ಯೋಜನೆ ಸೇರಿದಂತೆ ಕೇಂದ್ರ – ರಾಜ್ಯ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹೊಸ ಸ್ಪರ್ಶ ನೀಡಿ ಜಾರಿ ಮಾಡಲು ಅಹರ್ಸಿಶಿ ದುಡಿಯುತ್ತಿರುವ ಕ್ರಿಯಾಶೀಲ ಸಚಿವರು. ಬಡವರ – ದೀನದಲಿತರ ಬಗ್ಗೆ ವಿಶೇಷ ಕಾಳಜಿ ವಹಿಸುವ ಸಚಿವರು ತಮ್ಮ ಜೀವನದ ಸಾಧನೆಯನ್ನು ಖಾಸ್‌ಬಾತ್‌ನೊಂದಿಗೆ ತಿಳಿಸಿದ್ದಾರೆ.

ಇವರನ್ನು ಕಾರ್‍ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅತಿಥಿಯಾಗಿ ದೈವ ನರ್ತಕರಾದ ಶ್ರೀ ದೇಜಪ್ಪ ಸರಪಾಡಿ ಭಾಗವಹಿಸಲಿದ್ದಾರೆ.

Write A Comment