ಕನ್ನಡ ವಾರ್ತೆಗಳು

ಪ್ರವಾಸಿಗರ ಆಕರ್ಷಣೆಗೆ ನದಿ ಕಡಲು ಕಿನಾರೆಗಳ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಸೂಚನೆ.

Pinterest LinkedIn Tumblr

DC_Press_Meet

ಮಂಗಳೂರು, ಜುಲೈ. 15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೊಧ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಇಲ್ಲಿನ ಸುಂದರವಾದ ಕಡಲು,ನದಿ,ಪಶ್ಚಿಮ ಘಟ್ಟಗಳು, ಯಾತ್ರಾಸ್ಥಳಗಳು, ಐತಿಹಾಸಿಕ ಸ್ಥಳಗಳು ಸೇರಿದಂತೆ ಅನೇಕ ಸ್ಥಳಗಳನ್ನು ಪ್ರವಾಸಿ ಆಕರ್ಷಣೀಯ ಸ್ಥಳಗಳನ್ನಾಗಿ ಮಾಡುವಲ್ಲಿ ಪ್ರವಾಸೋಧ್ಯಮ ಆಭವೃದ್ಧಿಗೆ ಹೂಡಿಕೆದಾರರು ಮುಂದೆ ಬರಬೇಕೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಅವರು ಬುಧವಾರ ತಮ್ಮ ಕಛೇರಿಯಲ್ಲಿ ಈ ಸಂಬಂಧ ನಡೆದ ಪೂರ್ವಭಾವಿ ಸಭೆ ಆದ್ಯಕ್ಷತೆ‌  ವಹಿಸಿ ಮಾತನಾಡಿದರು. ಸಭೆಯಲ್ಲಿ ಹಾಜರಿದ್ದ ಕ್ರೇಡೈ ಕಾರ್ಯದರ್ಶಿ ನವೀನ್ ಕಾರ್ಡೋಜಾ ಮಾತನಾಡಿ ಮಂಗಳೂರಿನ ಕೂಳೂರಿನಿಂದ ತಣ್ಣೀರುಬಾವಿಗೆ ಹೋಗುವ ಮಾರ್ಗದ ಎಡಬದಿಯಲ್ಲಿ ಹೈದರಾಬಾದ್ ಹುಸೇನ್ ಸಾಗರದ ಇಕ್ಕೆಡೆಗಳಲ್ಲಿರುವ ನೆಕ್ಲೇಸ್ ರಸ್ತೆ ಮಾದರಿಯಲ್ಲಿ ಮಕ್ಕಳ ಅಮ್ಯೂಸ್‌ಮೆಂಟ್ ಪಾರ್ಕ್, ವಾಟರ್ ಸ್ಪೋರ್ಟ್ಸ, ಚಾಟ್ ಸ್ಟ್ರೀಟ್‌ಗಳನ್ನು ತಾತ್ಕಾಲಿಕ ಆಧಾರದಲ್ಲಿ ಆರಂಭಿಸಲು ಅವಕಾಶ ಕಲ್ಪಿಸಿದಲ್ಲಿ ಅತ್ಯಂತ ಪ್ರವಾಸಿ ಆಕಕ ತಾಣವಾಗುವುದರಲ್ಲಿ ಸಂದೇಹವಿಲ್ಲ ಎಂದು ತಮ್ಮ ಸಲಹೆಯನ್ನು ಸಭೆಯ ಮುಂದಿಟ್ಟರು. ಈ ಬಗ್ಗೆ ಸಾಧಕ ಬಾಧಕಗಳ ಅಧ್ಯಯನ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಬೋಟ್ ಹೌಸ್, ದ್ವೀಪಗಳ ಅಭಿವೃದ್ದಿ, ಆರೋಗ್ಯ ಪ್ರವಾಸೋಧ್ಯಮ, ಸಮುದಾಯ ಕೇಂದ್ರಗಳು ನೀರಿನಾಟದ ತಾಣಗಳು ಮುಂತಾದ ಪ್ರವಾಸಿ ಆಕರ್ಷಣೆ ಅಭಿವೃದ್ದಿಯನ್ನು ಮಾಡಲು ಖಾಸಗಿ ಬಂಡವಾಳ ಹೂಡಿಕೆದಾರರು ಮುಂದೆ ಬರಬೇಕೆಂದು ಜಿಲ್ಲಾಧಿಕಾರಿ ಹೂಡಿಕೆದಾರರಿಗೆ ಕರೆ ನೀಡಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಪ್ರಭಾಕರ್, ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹತ, ಕೆನರಾ ಚೇಂಬರ್ ಉಪಾಧ್ಯಕ್ಷ ರಾಮಮೋಹನರಾವ್ ಮಾರೂರು ಮುಂತಾದವರು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.

Write A Comment