ಕನ್ನಡ ವಾರ್ತೆಗಳು

ಇಫಾರ್ ರಂಜಾನ್ ತಿಂಗಳಲ್ಲಿ ನಡೆಯುವ ಪುಣ್ಯದಾಯಕ ಕಾರ್ಯಕ್ರಮ

Pinterest LinkedIn Tumblr

Ullal_Darga_ifthar_1

ಉಳ್ಳಾಲ ಜು,14 : ಇಫ್ತಾರ್ ಕೂಟವು ಮುಸ್ಲಿಂ ಸಮುದಾಯದ ರಂಜಾನ್ ತಿಂಗಳಲ್ಲಿ ನಡೆಯುವ ಒಂದು ಕಾರ್ಯಕ್ರಮ. ಬೆಳಗ್ಗಿನಿಂದ ಉಪವಾಸ ವ್ರತ ಆಚಿರಸಿದವರಿಗೆ ಇಫ್ತಾರ್ ಕಾರ್ಯಕ್ರಮ ಏರ್ಪಡಿಸುವುದು ಸಾಧಾರಣ ಎಲ್ಲಾ ಕಡೆ ಇದೆ. ಬಹಳಷ್ಟು ಪುಣ್ಯದಾಯಕವಾದ ಈಕಾರ್ಯಕ್ರಮ ನಿರಂತರ ಉಳ್ಳಾಲದಲ್ಲೂ ಕೂಡಾ ನಡೆಯುತ್ತಿದೆ. ಬಹಳಷ್ಟು ಮಂದಿ ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಹೇಳಿದರು.ಅವರು ಉಳ್ಳಾಲ ದರ್ಗಾದಲ್ಲಿ ಸೋಮವಾರ ನಡೆದ ಇಫ್ತಾರ್ ಕುಟ ಸಮಾರಂಭದಲ್ಲಿ ಮಾತನಾಡಿದರು.

Ullal_Darga_ifthar_2 Ullal_Darga_ifthar_3 Ullal_Darga_ifthar_4 Ullal_Darga_ifthar_5 Ullal_Darga_ifthar_6 Ullal_Darga_ifthar_8 Ullal_Darga_ifthar_11 Ullal_Darga_ifthar_12 Ullal_Darga_ifthar_13 Ullal_Darga_ifthar_7 Ullal_Darga_ifthar_9 Ullal_Darga_ifthar_10

 ಈ ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಉಳ್ಳಾಲ ದರ್ಗಾ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಕೋಶಾಧಿಕಾರಿ ಬಿಲಾಲ್ ಮಹಮ್ಮದ್ ಹಾಜಿ, ಲೆಕ್ಕರಿಶೋಧಕ ಅಬ್ದುಲ್ ಹಮೀದ್ ಕಲ್ಲಾಪು, ದಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಂ, ಜಮಾ‌ಅತ್ ಸದಸ್ಯರು, ದಗಾ ಸಮಿತಿ ಸದಸ್ಯರು ಭಾಗವಹಿಸಿದ್ದರು.

_ಆರೀಫ್ ಕಲ್ಲಕಟ್ಟ.

Write A Comment