ಮಂಗಳೂರು,ಜುಲೈ.14 : ಉಳ್ಳಾಲ ಸುನ್ನೀ ಯುವ ಜನ ಸಂಘ (ಎಸ್ ವೈ ಎಸ್) ಮತ್ತು ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ ಎಸ್ ಎಫ್) ಮುಕ್ಕಚ್ಚೇರಿ ಶಾಖೆ ವತಿಯಿಂದ ಇಫ್ತಾರ್ ಮೀಟ್ ಮತ್ತು ತಝ್ಕಿಯತ್ ನೈಟ್ ಶಿಬಿರ ಮುಕ್ಕಚ್ಚೇರಿ ಸಿದ್ದೀಕ್ ಜುಮಾ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು. ಶಿಬಿರದಲ್ಲಿ ಪಟ್ಲ ಜುಮಾ ಮಸೀದಿಯ ಖತೀಬರಾದ ಎಂ ಸಿ ಮುಹಮ್ಮದ್ ಫೈಝಿ ಆತ್ಮ ಸಂಸ್ಕರಣೆ ಎಂಬ ವಿಷಯದಲ್ಲೂ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ಮದುವೆಯ ಶಿಷ್ಟಾಚಾರಗಳು ಎಂಬ ವಿಷಯದಲ್ಲೂ ತರಗತಿ ನಡೆಸಿದರು.
ವೇದಿಕೆಯಲ್ಲಿ ಮುಕ್ಕಚ್ಚೇರಿ ಜುಮಾ ಮಸೀದಿಯ ಇಮಾಮರಾದ ಮುನೀರ್ ಸಖಾಫಿ ಸಾಲೆತ್ತೂರು,ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಇದರ ಕಾರ್ಯದರ್ಶಿ ಅಶ್ರಫ್ ಹಾಜಿ ಮುಕ್ಕಚ್ಚೇರಿ ಹಾಗೂ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಮುಂತಾದವರು ಉಪಸ್ಥಿತರಿದ್ದರು

