ಅಂತರಾಷ್ಟ್ರೀಯ

ಭಾರೀ ಬೆಲೆಬಾಳುವ ಕಲ್ಲನ್ನು ಕದ್ದ ಕಳ್ಳ ….ಬಳಿಕ ಬಂದ ಸಂಕಷ್ಟಕ್ಕೆ ಹೆದರಿ 20 ವರ್ಷಗಳ ಬಳಿಕ ಹಿಂದಿರುಗಿಸಿದ !

Pinterest LinkedIn Tumblr

stone

ಜೆರುಸಲೇಂ: ಪುರಾತನ ವಸ್ತುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಮೌಲ್ಯವಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಾಗಿ ಅದೆಷ್ಟೇ ಬಿಗಿ ಭದ್ರತೆ ಇದ್ದರೂ ಅಂಥ ವಸ್ತುಗಳನ್ನು ಕಳವು ಮಾಡಲು ಐನಾತಿ ಕಳ್ಳರು ಸದಾ ಹೊಂಚು ಹಾಕುತ್ತಲೇ ಇರುತ್ತಾರೆ. ಇದೇ ಲೆಕ್ಕಾಚಾರದಲ್ಲಿ ವ್ಯಕ್ತಿಯೊಬ್ಬ ಕದ್ದ ಸ್ಲಿಂಗ್ ಸ್ಟೋನ್ಸ್​ಗಳು ನಾನಾ ರೀತಿಯ ಸಂಕಷ್ಟಗಳಿಗೆ ಕಾರಣವಾಗಿದೆ. ಆದ್ದರಿಂದಲೇ ಆತ 20 ವರ್ಷಗಳ ಬಳಿಕ ಅವನ್ನು ಮರಳಿಸಿದ್ದಾನೆ.

ಇಸ್ರೇಲ್ ಬಳಿಯಿರುವ ಗೋಲನ್ ಹೈಟ್ಸ್ ಎಂಬಲ್ಲಿ ಗಮ್ಲಾ ಪುರಾತನ ನಗರ ಸಂರಕ್ಷಿತ ಪ್ರದೇಶವೆಂದು ಘೊಷಿಸಲಾಗಿದೆ. ಅಲ್ಲಿಗೆ ನುಗ್ಗಿದ್ದ ವ್ಯಕ್ತಿಯೊಬ್ಬ ರೋಮನ್ನರನ್ನು 2 ಸಾವಿರ ವರ್ಷಗಳ ಹಿಂದೆ ಬಳಸಲಾಗಿದ್ದ ಸ್ಲಿಂಗ್ ಸ್ಟೋನ್ಸ್ ಸಿಕ್ಕಿವೆ. ಬಹುದೊಡ್ಡ ನಿಧಿಯೇ ಸಿಕ್ಕಿತೆಂದು ಭಾವಿಸಿದ ಆತ ಅವನ್ನು ಗೌಪ್ಯವಾಗಿ ಮನೆಗೆ ಸಾಗಿಸಿದ್ದಾನೆ.

ಅಂದಿನಿಂದ ಒಂದರೆ ಮೇಲೆ ಮತ್ತೊಂದರಂತೆ ಸಂಕಷ್ಟಗಳ ಸರಮಾಲೆಯೇ ಆತನ ಮೇಲೆ ಬಿದ್ದಿದೆ. 20 ವರ್ಷಗಳ ಕಾಲ ಸಾಕಷ್ಟು ಹೆಣಗಾಡಿದ ಬಳಿಕ, ತಾನು ಕದ್ದ ಸ್ಲಿಂಗ್ ಸ್ಟೋನ್​ಗಳೇ ಇದಕ್ಕೆ ಕಾರಣವೆಂದು ಭಾವಿಸಿದ ಆತ ಕೆಲವು ದಿನಗಳ ಹಿಂದೆ ಇಸ್ರೇಲ್​ನ ದಕ್ಷಿಣ ಭಾಗದಲ್ಲಿರುವ ಬೀರ್​ಶಿಬಾ ಎಂಬ ನಗರದಲ್ಲಿರುವ ಇಸ್ಲಾಮಿಕ್ ವಸ್ತುಸಂಗ್ರಹಾಲಯದ ಮುಂಭಾಗದಲ್ಲಿ ಅವನ್ನು ಇಟ್ಟು ಹೋಗಿದ್ದಾನೆ. ಹೋಗುವಾಗ 1995ರಲ್ಲಿ ಇವನ್ನು ಕದ್ದ ದಿನದಿಂದ ಸಾಕಷ್ಟು ತೊಂದರೆಗೆ ಸಿಲುಕಿಕೊಂಡೆ. ಆದ್ದರಿಂದ ಇವುಗಳನ್ನು ಯಾರೂ ಕೂಡ ಕದಿಯಬಾರದೆಂಬ ಒಕ್ಕಣೆಯ ಹಿಬ್ರೂ ಭಾಷೆಯ ಎಚ್ಚರಿಕೆಯ ಪತ್ರವನ್ನು ಬರೆದಿಟ್ಟು ಹೋಗಿದ್ದಾನೆ.

Write A Comment