
(ಸಾಂದರ್ಭಿಕ ಚಿತ್ರ)
ಕುಂದಾಪುರ: ಪಂಚಾಯತ್‌ನ ಮಾಜಿ ಅಧ್ಯಕ್ಷರೋರ್ವರು ಕುರ್ಚಿ ವ್ಯಾಮೋಹಕ್ಕೆ ಬಿದ್ದು, ತನಗೊಂದು ವಿಶೇಷ ಕುರ್ಚಿಯನ್ನು ಸ್ವತಃ ಹಣದಿಂದಲೇ ಖರೀಧಿಸಿ ತಂದು ಪಂಚಾಯತ್‌ನಲ್ಲಿಟ್ಟು ಕುಳಿತುಕೊಂಡ ಅಪರೂಪದ ಘಟನೆ ಆಜ್ರಿ ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.
ಆಜ್ರಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಗೋವಿಂದ ಶೆಟ್ಟಿಯವರೇ ಈ ಕುರ್ಚಿ ಪ್ರೇಮಕ್ಕೆ ಗಂಟು ಬಿದ್ದ ಸದಸ್ಯ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅವರು, ಬುಧವಾರ ನಡೆದ ಸದಸ್ಯರ ಸಾಮಾನ್ಯ ಸಭೆಗೆ ತೆರಳುವಾಗ ಹೊಸ ಕುಷನ್ ಚೇರನ್ನು ತಗೆದುಕೊಂಡೇ ತೆರಳಿದ್ದರು. ಈ ಹಿಂದೆ ಅಧ್ಯಕ್ಷ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಅವರಿ ಈಗ ಸದಸ್ಯರಾದ್ದರಿಂದ ಮಾಮೂಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಇಚ್ಚಿಸದೇ ತಾನೇ ಒಂದು ದುಬಾರಿಯ ಕುರ್ಚಿಯನ್ನು ಖರೀಧಿಸಿ ತಂದು ಸಭೆಯ ಹಾಕಿ ಕುಳಿತೇ ಬಿಟ್ಟರು.
ಇದೇ ಕುರ್ಚಿ ವಿಚಾರ ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಗ್ರಾ.ಪಂ.ನಲ್ಲಿ ಎಲ್ಲಾ ಸದಸ್ಯರೂ ಒಂದೇ. ಇಲ್ಲಿ ಮೇಲೆ-ಕೀಳು ಬೇಧವಿಲ್ಲ. ಎಲ್ಲರೂ ಸಮನಾಗಿ ಕುಳಿತುಕೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಸದಸ್ಯರು ವ್ಯಕ್ತ ಪಡಿಸಿದರೂ ಕೂಡಾ, ಸದಸ್ಯ ಗೋವಿಂದ ಶೆಟ್ಟಿ ಅದಕ್ಕೆ ತುಟಿ ಪಿಕ್ಕೆನ್ನಲಿಲ್ಲ. ಸದಸ್ಯರು ಬರುವಾಗ ಕುರ್ಚಿಯನ್ನು ತಗೆದುಕೊಂಡು ಬರುವುದು ಸರಿಯಲ್ಲ, ಒಂದಾ ಕುರ್ಚಿಯನ್ನು ಪಂಚಾಯತ್‌ಗೆ ಹಸ್ತಾಂತರಿಸಬೇಕು, ಇಲ್ಲ ಮನೆಗೆ ತಗೆದುಕೊಂಡು ಹೋಗಬೇಕು. ಸದಸ್ಯರು ಪ್ರತ್ಯೇಕ ಪ್ರತ್ಯೇಕ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ ಎನ್ನುವ ಮಾತುಗಳು ಕೇಳಿ ಬಂದವು.
ತನಗೆ ಮಾಮೂಲಿ ಕುರ್ಚಿಯಲ್ಲಿ ಕೂರಲು ಇಚ್ಚಿಸದ ಶೆಟ್ಟರು ರಾಜ್ಯದ ಮೊದಲ ಬಾರಿಗೆ ಎನ್ನುವಂತೆ ಬರುವಾಗಲೇ ಒಂದು ಕುರ್ಚಿಯ ವ್ಯವಸ್ಥೆಯನ್ನು ಮಾಡಿಕೊಂಡು ಬಂದಿರುವುದು ಆತ್ಯಂತ ಅಚ್ಚರಿಯ ವಿದ್ಯಮಾನ.