ಕುಂದಾಪುರ: ತಾಲೂಕಿನ ದಬ್ಬೆಕಟ್ಟೆ ಬಸ್ಸು ನಿಲ್ದಾಣದ ಬಳಿ ಟಿಪ್ಪರ್‌ವೊಂದು ಪಲ್ಟಿಯಾದ ಪರಿಣಾಮ ಎರಡು ದನಗಳು ಲಾರಿಯಡಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಹಾಲಾಡಿಯಿಂದ ಜಲ್ಲಿತುಂಬಿಕೊಂಡ ಟಿಪ್ಪರ್ ಕುಂದಾಪುರದತ್ತ ಸಾಗುತ್ತಿತ್ತು. ದಬ್ಬೆಕಟ್ಟೆ ಜಂಕ್ಷನ್ ತಿರುವಿನಲ್ಲಿ ದನಗಳು ರಸ್ತೆಯನ್ನು ದಾಟುತ್ತಿದ್ದನ್ನು ಕಂಡ ಚಾಲಕನು ಅವುಗಳನ್ನು ತಪ್ಪಿಸುವ ಭರದಲ್ಲಿ ಬ್ರೇಕ್ ಹಾಕಿದಾಗ ಟಿಪ್ಪರ್ ಪಲ್ಟಿಯಾಗಿತ್ತು. ಪಲ್ಟಿಯಾದ ಲಾರಿಯಡಿ ಒಂದು ದನ ಸಿಲುಕಿ ಸಾವನ್ನಪ್ಪಿದರೆ, ಟಿಪ್ಪರ್ ಢಿಕ್ಕಿಯ ಹೊಡೆತಕ್ಕೆ ಇನ್ನೊಂದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದೆ.
ಇನ್ನೊಂದು ದನ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದೆ.






