ಕನ್ನಡ ವಾರ್ತೆಗಳು

ಹೊಸನಗರ ಮೇಳದ ಯಕ್ಷೋತ್ಸವಕ್ಕೆ ಚಾಲನೆ

Pinterest LinkedIn Tumblr

mumbai_yakasha_photo_1

ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್

ಮುಂಬಯಿ: ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ 9ನೇ ವಾರ್ಷಿಕ ಮುಂಬಯಿ ಪ್ರವಾಸ, ಯಕ್ಷೋತ್ಸವ ಜು. 5ರಿಂದ 12ರ ವರೆಗೆ ಜರಗಲಿ ದ್ದು, ಜು. 5ರಂದು ಉದ್ಘಾಟನಾ ಸಮಾರಂಭ ಮಾಟುಂಗ (ಪ.) ಕರ್ನಾಟಕ ಸಂಘದ ಡಾ| ಎಂ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಜರಗಿತು. ಸಂತಾಕ್ರೂಸ್ ಪೇಜಾವರ ಮಠದ ಪ್ರಬಂಧಕ ರೆಂಜಾಳ ರಾಮದಾಸ ಉಪಾಧ್ಯಾಯ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಹೊಸನಗರ ಮೇಳದಲ್ಲಿ ಉತ್ತಮ ಕಲಾವಿದರಿದ್ದು ಪರಿಪೂರ್ಣ ಯಕ್ಷಗಾನಕ್ಕೆ ಖ್ಯಾತಿಯನ್ನು ಪಡೆದಿದೆ ಎಂದರು. ಅತಿಥಿಯಾಗಿ ಹಿರಿಯ ಕಲಾವಿದ ಶೇಣಿ ಶ್ಯಾಮ ಭಟ್ ಆಗಮಿಸಿ ಶುಭ ಹಾರೈಸಿದರು.

mumbai_yakasha_photo_2 mumbai_yakasha_photo_3 mumbai_yakasha_photo_4 mumbai_yakasha_photo_6 mumbai_yakasha_photo_5

ಸಂಚಾಲಕ ಪ್ರಕಾಶ್ ಭಟ್ ಪ್ರಾಸ್ತಾವಿಕ ನುಡುಗಳನ್ನಾಡಿದರು. ವೇದಿಕೆಯಲ್ಲಿ ರವೀಂದ್ರನಾಥ ಭಂಡಾರಿ ಉಪಸ್ಥಿತರಿದ್ದರು. ಕರ್ನೂರು ಮೋಹನ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

ಮೊದಲ ದಿನ ವಂಶವಾಹಿನಿ ಯಕ್ಷಗಾನ ಪ್ರದರ್ಶನಗೊಂಡಿತು. ಜು. 11ರ ವರೆಗೆ ಪ್ರತಿದಿನ ಸಂಜೆ 6ರಿಂದ ಡಾ| ಎಂ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಕ್ರಮ ವಾಗಿ ಪಾದ ಪ್ರತೀಕ್ಷೆ, ಚಂದ್ರಾವಳಿ -ಕದಂಬ ಕೌಶಿಕೆ, ಸುದರ್ಶನ ವಿಜಯ, ಊರ್ವಶಿ ಶಾಪ, ಭಾರ್ಗವ ವಿಜಯ, ಹಿರಣ್ಯಾಕ್ಷ್ಯ-ಹಿರಣ್ಯ ಕಶಿಪು, ವಿರೋಚನ, ಜ್ವಾಲಾ-ಜಾಹ್ನವಿ, ಅಮರೇಂದ್ರ ಪದ ವಿಜಯ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.
ಜು. 12ರಂದು ಮಧ್ಯಾಹ್ನ ಕುರ್ಲಾ (ಪೂ.) ಬಂಟರ ಭವನದಲ್ಲಿ ಸಮಾ ರೋಪ ಸಮಾರಂಭ ಜರಗಲಿದ್ದು, ಈ ಸಂದರ್ಭ ಕೃಷ್ಣ-ಕೃಷ್ಣ-ಶ್ರೀಕೃಷ್ಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Write A Comment