ಮಂಗಳೂರು,ಜೂನ್.18: ಹಳೆಯಂಗಡಿ ಬಳಿಯ ಪಾವಂಜೆ ಶ್ರಿ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ತಂತ್ರಿ ಎಚ್.ದಿವಾಕರ ಭಟ್‌ರವರು ಯಕ್ಷಗಾನದ ಚಿಕ್ಕ ಮೇಳವನ್ನು ಬುಧವಾರ ಉದ್ಘಾಟಿಸಿದರು.
ಮೇಳದ ವ್ಯವಸ್ಥಾಪಕ ಹಾಗೂ ಯಕ್ಷಗಾನರಂಗದ ಖ್ಯಾತ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು, ಹಿಮ್ಮೇಳ ಹಾಗೂ ಮುಮ್ಮೇಳದ ಕಲಾವಿದರಾದ ಗಣೇಶ್ ನೆಲ್ಲಿಕಟ್ಟೆ, ಸುಕುಮಾರ್ ಮಂದಾರ್ತಿ, ಸುಧೀರ್ ಉಪ್ಪೂರು, ಈಶ್ವರ ಭಂಡಾರಿ, ದೀಪಕ್ ಬೆಳಂಜೆ, ದೇವಳದ ಮುರಳೀಧರ ಭಟ್, ಎಚ್.ರಾಮಚಂದ್ರ ಶೆಣೈ, ರಾಮದಾಸ್ ಪಾವಂಜೆ, ಸುಧಾಕರ ಅಮಿನ್, ಜಗದೀಶ್ ನಂದಿಕೂರು ಇನ್ನಿತರರು ಹಾಜರಿದ್ದರು.
_ನರೇಂದ್ರ ಕೆರೆಕಾಡು
