ಕನ್ನಡ ವಾರ್ತೆಗಳು

ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್ ವತಿಯಿಂದ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ

Pinterest LinkedIn Tumblr

ullal_ramzan_prgm_1

ಉಳ್ಳಾಲ ಜೂ,18  : ಮನುಷ್ಯ ಜೀವಿ ಈ ಭೂಲೋಕದಲ್ಲಿ ಜೀವಿಸಬೇಕಾದರೆ ಪರಸ್ಪರ ಸ್ನೇಹ, ಸೌಹಾರ್ದತೆ, ಸಹಕಾರ ಇದರೆ ಮಾತ್ರ ಸಾಧ್ಯ. ಇನ್ನೊಬ್ಬರ ಸಹಾಯ ಸಹಕಾರ ಅತ್ಯಗತ್ಯ. ಪ್ರವಾದಿ ಸ.ಅ ಕಲಿಸಿಕೊಟಾಗೆ ಪ್ರತ್ಯೇಕವಾಗಿ ರಂಝಾನ್ ತಿಂಗಳಲ್ಲಿ ಹೆಚ್ಚು ಬಡವರಿಗೆ ಅರ್ಹ ವ್ಯಕ್ತಿಗಳಿಗೆ ಸಹಾಯ ಮಾಡಿ ಹೆಚ್ಚು ಹೆಚ್ಚು ಪುಣ್ಯಗಳನ್ನು ಗಳಿಸಿರಿ ಎಂದು ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್ ಅಧ್ಯಕ್ಷ ಅಸೈಯ್ಯದ್ ಶಿಹಾಬುದ್ದೀನ್ ಅಲ್-ಮಶ್ಹೂರ್ ತಲಕ್ಕಿ ತಂಙಳ್ ಹೇಳಿದರು.

ಅವರು ಬುಧವಾರ ತೊಕ್ಕೊಟ್ಟಿನ ಅಲ್-ಅಮೀನ್ ಕಂಪೌಂಡ್‌ನಲ್ಲಿ ಅಯೋಜಿಸಿದ ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್ ವತಿಯಿಂದ ೧೧೧ಬಡ ನಿರ್ಗತಿಕ ಕುಟುಂಬಗಳಿಗೆ ಸುಮಾರು 2,22,000 ರೂಪಾಯಿ ಮೌಲ್ಯದ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ದು‌ಅ ನೆರವೇರಿಸಿ ಮಾತನಾಡಿದರು.ರಂಝಾನ್ ತಿಂಗಳಲ್ಲಿ ಹೆಚ್ಚಾಗಿ ಮಸೀದಿಯ ಬಾಗಿಲಲ್ಲಿ ಅಲ್ಲಲಿ ಬಿಕ್ಷುಕರನ್ನು ಕಾಣಬಹುದು ಅದರೆ ಇಂತಹ ದಿನನಿತ್ಯದ ಅಹಾರ ವಸ್ತುಗಳ ಕಿಟ್ ರೂಪದಲ್ಲಿ ನೀಡುದರಿಂದ ಬಿಕ್ಷುಕರ ಜನಸಂಖ್ಯೆ ಕಡಿಮೆಯಾಗಬಹುದು ಎಂಬ ನನ್ನ ನಂಬಿಕೆ. ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್ ಹಂಝ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ullal_ramzan_prgm_2 ullal_ramzan_prgm_3 ullal_ramzan_prgm_4 ullal_ramzan_prgm_5 ullal_ramzan_prgm_6 ullal_ramzan_prgm_7 ullal_ramzan_prgm_8

ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್ ರಿಯಾದ್ ಘಟಕ ಕಾರ್ಯಕಾರಿ ಸದಸ್ಯ ಮನ್ಸೂರ್ ಅಲಿ ಪಡಿಕ್ಕಲ್ ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್‌ನ ಕಾರ್ಯ ಚಟುವಟಿಕೆಗಳ ವರದಿ ಮಂಡಿಸಿದ್ದರು.

ಉಳ್ಳಾಲ ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‌ವೇ, ದ.ಕ ಜಿಲ್ಲಾ ವಕ್ಪ್ ಸಮಿತಿ ಸದಸ್ಯ ಹಾಜಿ ಬಿ.ಜೆ ಹನೀಫ್, ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್ ಪ್ರ.ಕಾರ್ಯದರ್ಶಿ ಟಿ.ಎ ಮೊದೀನ್ ಮೊಂಟೆಪದವು, ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್ ರಿಯಾದ್ ಘಟಕ ಲೆಕ್ಕಪರಿಶೋದಕ ಅಬ್ದುಲ್ ಖಾದರ್ ಸಾದಾತ್ ಉಳ್ಳಾಲ, ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್ ರಿಯಾದ್ ಘಟಕ ಸದಸ್ಯ ಹನೀಫ್ ಪಾವೂರು, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರ.ಕಾರ್ಯದರ್ಶಿ ಎಸ್.ಎಂ ಖುಬೈಬ್ ತಂಙಳ್, ಸಿದ್ದೀಕ್ ಮದನಿ ಮೇದು, ಎಸ್ಸೆಸ್ಸೆಫ್ ತೊಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಅಧ್ಯಕ್ಷ ಅಲ್ತಾಫ್ ಕುಂಪಲ, ಎಸ್ಸೆಸ್ಸೆಫ್ ತೊಕೊಟ್ಟು ಸೆಕ್ಟರ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ಹಕೀಂ ಮದನಿ, ಎಸ್ಸೆಸ್ಸೆಫ್ ತೊಕೊಟ್ಟು ಸೆಕ್ಟರ್ ಕೋಶಾಧಿಕಾರಿ ಶಮೀರ್ ಸೆವಂತಿಗುಡ್ಡೆ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಸನ್ ಉಪಾಧ್ಯಕ್ಷ ಮುಸ್ತಾಫ ಮಸ್ಟರ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಎಸ್ಸೆಸ್ಸೆಫ್ ತೊಕೊಟ್ಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್ ವಂದಿಸಿದರು.

Write A Comment