ಕನ್ನಡ ವಾರ್ತೆಗಳು

ಜೂನ್ 22 : ಶ್ರೀ ಕ್ಷೇತ್ರ ಕದ್ರಿಯಲ್ಲಿ ಲೋಕ ಕಲ್ಯಾಣಾರ್ಥ ಸಾಮೂಹಿಕ ಸೀಯಳಾಭಿಷೇಕ

Pinterest LinkedIn Tumblr

pradeep_kumar_kalkura

ಮಂಗಳೂರು,ಜೂನ್.12 : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನ,ಹತ್ತು ಸಮಸ್ತರು, ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂನ್ 22 ನೇ ಸೋಮವಾರದಂದು ಬೆಳಿಗ್ಗೆ 10  ಗಂಟೆಗೆ ಲೋಕ ಕಲ್ಯಾಣಾರ್ಥ ಸಾಮೂಹಿಕ ಪ್ರಾರ್ಥನೆ ಹಾಗೂ ಸುಭಿಕ್ಷಮಳೆ, ಬೆಳೆ,ಫಲ ಪ್ರಾಪ್ತಿಗಾಗಿ ಸಾಮೂಹಿಕ ಸೀಯಾಳಾಭಿಷೇಕ‌ ಆಯೋಜಿಸಲಾಗಿದೆ.

ದೇವಳದ ವ್ಯವಸ್ಥಾಪನಾ ಸಮಿತಿಯ‌ ಅಧ್ಯಕ್ಷರಾದ‌ ಎ.ಜೆ. ಶೆಟ್ಟಿ ಮತ್ತು ಸದಸ್ಯರು, ಆಡಳಿತಾಧಿಕಾರಿಗಳು, ಹತ್ತು ಸಮಸ್ತರು ಮತ್ತು ಜನ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಭಿಷೇಕಕ್ಕೆ ಬೇಕಾಗುವ ಸೀಯಾಳವನ್ನು ಮುಂಚಿತವಾಗಿ ದೇವಳದ ಕಛೇರಿಗೆ ತಂದೊಪ್ಪಿಸಬಹುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್‍ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಲ್ಕೂರ ಪ್ರತಿಷ್ಠಾನದ‌ ಅಧ್ಯಕ್ಷ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯ‌ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment