ಕನ್ನಡ ವಾರ್ತೆಗಳು

ಸುರೇಶ್ ಕಾಂಚನ್ ರಿಂದ ಹುಟ್ಟೂರಿನಲ್ಲಿ ಶೈಕ್ಷಣಿಕ ನೆರವು

Pinterest LinkedIn Tumblr
mumbai_news_photo_1
ಮುಂಬಯಿ : ಮುಂಬಯಿಯ ಉದ್ಯಮಿ, ಮೊಗವೀರ ಸಮಾಜದ ಮುಂದಾಳು ಸುರೇಶ್ ಕಾಂಚನ್ ತನ್ನ ಹುಟ್ಟೂರು ಕುಂದಾಪುರದ ಉಪ್ಪಿನಕುದ್ರು ಸರಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಮೇ, 30ರಂದು ಉಚಿತ ಪುಸ್ತಕ, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಮಾತ್ರವಲ್ಲದೆ ಶಾಲಾ ಶಿಕ್ಷಕರಿಗೆ ತಲಾ 5000 ರೂಪಾಯಿಯಂತೆ ನೀಡಿದರು.
ನಾಡೋಜ ಜಿ ಶಂಕರ್ ಅವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮೂಲ ಸೌಕರ್ಯಗಳಿಂದ ದೂರ ಉಳಿದ ಗ್ರಮೀಣ ವಿದ್ಯಾರ್ಥಿಗಳಿಗೆ ಸೈಕ್ಷಣಿಕ ನೆರವಿನ ಅಗತ್ಯವಿದೆ ಎಂದರು.
mumbai_news_photo_3 mumbai_news_photo_2
ಸುರೇಶ್ ಕಾಂಚನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಪರ್ತ್ರಕರ್ತ ಜಾನ್ ಡಿ ಸೋಜಾ, ಉದ್ಯಮಿ ರಾಜೇಶ್ ಕಾರಂತ, ಸದಾನಂದ ಶೇರಿಗಾರ, ಮಾಲತಿ ವಿ, ಗೋಪಾಲಕೃಷ್ಣ, ಯಶೋದಾ ಸುರೇಶ್ ಕಾಂಚನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಂ ಮಧುಸೂಧನ್ ನಿರ್ವಹಿಸಿದ್ದು ಅರುಣ್ ಅಭಾರ ಮನ್ನಿಸಿದರು.

Write A Comment