ಕನ್ನಡ ವಾರ್ತೆಗಳು

ಬೈಂದೂರು: ಅಪ್ರಾಪ್ತೆಗೆ ಮಗು ಕರುಣಿಸಲು ಹೋದಾತ ಜೈಲು ಪಾಲು

Pinterest LinkedIn Tumblr

ಕುಂದಾಪುರ: ಪ್ರೀತಿ ಪ್ರೇಮದ ನಾಟಕವಾಡಿ ಅಪ್ರಾಪ್ತೆ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆಕೆ ಏಳು ತಿಂಗಳ ಗರ್ಭವತಿಯಾಗಲು ಕಾರಣನಾದ ಯುವಕನನ್ನು ಬೈಂದೂರು ಪೊಲಿಸರು ಬಂಧಿಸಿದ್ದಾರೆ.

ಮೂಲತಃ ಭಟ್ಕಳದವನಾದ ಮಹಮ್ಮದ್ ಪೌಝಾನಾ (23) ಎಂಬಾತನೇ ಜೈಲುಕಂಬಿ ಹಿಂದೆ ಹೋದಾತ.

Mahammad_Fouzana_Byndoor

ವ್ರತ್ತಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಮಹಮ್ಮದ್ ತನ್ನ ಸ್ನೇಹಿತನ ಸಹೋದರಿಯನ್ನೇ ಪ್ರೀತಿ ಪ್ರೇಮದ ಹೆಸರಿನಲ್ಲಿ ಬಲೆಗೆ ಕೆಡವಿಕೊಂಡು ಆಕೆಯೊಂದಿಗೆ ಸರಸ-ಸಲ್ಲಾಪವಾಡಿದ್ದನೆನ್ನಲಾಗಿದೆ. ಈ ಪರಿಣಾಮ ಆ ಅಪ್ರಾಪ್ತ ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ವಿಚಾರ ತಿಳಿಸ್ಯುತಿದ್ದಂತೆಯೇ ಮನೆಯವರು ಮಾತುಕತೆ ನಡೆಸಿ ಮದುವೆಯಾಗುವುದಾಗಿಯೂ ಮಹಮ್ಮದ್ ಒಪ್ಪಿದ್ದನೆನ್ನಲಾಗಿದೆ. ಆದರೇ ಇತ್ತೀಚೆಗೆ ಆಕೆಯನ್ನು ವಿವಾಹವಾಗುವುದರಲ್ಲಿ ಚಕಾರವೆತ್ತಿದ್ದ ಮಹಮ್ಮದ್ ನಡೆಯ ವಿರುದ್ಧ ಬಾಲಕಿ ಮನೆಯವರು ಅಸಮಾಧಾನಗೊಂಡಿದ್ದರಂತೆ.

ಮಹಮ್ಮದ್ ವರ್ತನೆಯನ್ನು ನೋಡಿದ ಬಾಲಕಿ ಮನ್ಯವರು ಕೊನೆಗೂ ದಾರಿ ಕಾಣದೇ ಬೈಂದೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಾಲಕಿ ಅಪ್ರಾಪ್ತೆಯಾದ ಕಾರಣ ಪೊಲೀಸರು ಆರೋಪಿ ಮೇಲೆ ಪೋಸ್ಕೋ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡು ಆತನನ್ನು ಜೈಲಿಗೆ ಕಳುಹಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment