ಮಂಗಳೂರು: ಕನ್ನಡ ಚಿತ್ರರಂಗದಿಂದ ಈವರೆಗೆ ಯಾವುದೇ ಆಫರ್ ಬಂದಿಲ್ಲ. ಉತ್ತಮ ಅವಕಾಶ ಸಿಕ್ಕರೆ ಖಂಡಿತ ಕನ್ನಡದಲ್ಲಿ ನಟಿಸುತ್ತೇನೆ ಎಂದು ಬಾಲಿವುಡ್ ನಟಿ ಅದಿತಿ ರಾವ್ ಹೇಳಿದ್ದಾರೆ.
ಕನ್ನಡದ ಹೆಮ್ಮೆಯ ಕವಿ ಪಂಜೆ ಮಂಗೇಶರಾಯರ ಮರಿ ಮಗಳಾದ ಅದಿತಿ ರಾವ್, ಬ್ಲೆಂಡರ್ ಪ್ರೈಡ್ ಮ್ಯಾಜಿಕಲ್ ನೈಟ್ ಶೋ ನೀಡಲು ಮಂಗಳೂರಿಗೆ ಆಗಮಿಸಿದ ಸಂದರ್ಭ ಸುದ್ಧಿಗಾರರ ಜೊತೆ ಮಾತನಾಡಿದರು.
ಮಂಗಳೂರಿನ ವಾತಾವರಣ ಚಿತ್ರರಂಗ ಮತ್ತು ಫ್ಯಾಶನ್ ಕ್ಷೇತ್ರಗಳಿಗೆ ಪರಸ್ಪರ ಸಂಬಂಧವಿದೆ. ಪ್ರತಿಯೊಬ್ಬರೂ ತಾನು ಸ್ಟೈಲಿಶ್ ಆಗಿ ಕಾಣಬೇಕೆಂದು ಬಯಸುತ್ತಾರೆ. ನಾನು ಕೆಲಸ ಮಾಡುತ್ತೇನೆ. ಆದರೆ, ಹಣಕ್ಕಾಗಿ ಅಲ್ಲ. ಹಣ ಬರುವುದೂ ಒಂದು ಅವಕಾಶ ಮಾತ್ರ. ಬಾಲಿವುಡ್ ನನಗೆ ಅಂತಹ ಅವಕಾಶವನ್ನು ಕಲ್ಪಿಸಿದೆ ಎಂದು ಅದಿತಿ ರಾವ್ ಹೇಳಿದರು.
ಗಾಯಕಿಯೂ ಆಗಿರುವ ಅದಿತಿ ರಾವ್, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಪ್ರಮುಖ ನಾಯಕರೊಂದಿಗೆ ನಟಿಸಿದ್ದಾರೆ.